ಈ ಆಕ್ಟೋಪಸ್ಗಳ ನಡುವೆ ಮೀನೊಂದು ಅಡಗಿದೆ, ಕಂಡುಹಿಡಿಯಬಲ್ಲಿರಾ?
Optical Illusion : ಈ ಸಮುದ್ರದಲ್ಲಿ ನೂರಾರು ಆಕ್ಟೋಪಸ್ಗಳು ಇವೆ. ಇವುಗಳ ನಡುವೆಯೇ ಒಂದು ಮೀನು ಅಡಗಿದೆ. ನೀವು ಈ ಸಮುದ್ರಕ್ಕೆ ಧುಮುಕಿ ಆ ಒಂದೇಒಂದು ಮೀನನ್ನು ಹಿಡಿದು ತರಬಲ್ಲಿರಾ? ಸಮಯ ಮಿತಿ ಇಲ್ಲ.
Viral Optical Illusion : ಸತತವಾಗಿ ನೀವು ಕೆಲಸ ಮಾಡುತ್ತಿರುವಾಗ ನಿಮ್ಮ ಮೆದುಳಿಗೆ ವಿಶ್ರಾಂತಿ ಮತ್ತು ಶಕ್ತಿಯನ್ನು ಈ ಭ್ರಮಾತ್ಮಕ ಚಿತ್ರಗಳು ತಂದುಕೊಡುತ್ತವೆ. ಆಗಾಗ ನೀವು ಈ ತಾಣದಲ್ಲಿ ಇಂಥ ಚಿತ್ರಗಳಲ್ಲಿ ಅಡಗಿರುವ ಸವಾಲುಗಳನ್ನು ಪರಿಹರಿಸಿರುತ್ತೀರಿ ಮತ್ತು ಪ್ರಯತ್ನಿಸುತ್ತಿರುತ್ತೀರಿ. ಮೊನ್ನೆಯಷ್ಟೇ ಪೆಂಗ್ವಿನ್ಗಳ ಮಧ್ಯೆ ಅಡಗಿರುವ ಮೂರು ಬೆಕ್ಕುಗಳನ್ನು ಕಂಡುಹಿಡಿಯಲು ಕೇಳಿದ್ದು ನೆನಪಿರಬಹುದು. ಇದೀಗ ಅದೇ ಹಂಗೇರಿಯನ್ ಕಲಾವಿದ ಗೆರ್ಗೆಲಿ ಡುಡಾಸ್ ಮತ್ತೊಂದು ಹೊಸ ಚಿತ್ರವನ್ನು ರಚಿಸಿದ್ದಾರೆ.
ಈ ಸಮುದ್ರದಲ್ಲಿ ನೂರಾರು ಆಕ್ಟೋಪಸ್ಗಳು ಇವೆ. ಇವುಗಳ ನಡುವೆಯೇ ಒಂದು ಮೀನು ಅಡಗಿದೆ. ನೀವು ಈ ಸಮುದ್ರಕ್ಕೆ ಧುಮುಕಿ ಆ ಒಂದೇಒಂದು ಮೀನನ್ನು ಹಿಡಿದು ತರಬಲ್ಲಿರಾ? ನೇರಳೆಬಣ್ಣದ ಈ ಆಕ್ಟೋಪಸ್ಗಳಲ್ಲಿ ಅಡಗಿರುವ ಮೀನು ಕೂಡ ನೇರಳೆ ಬಣ್ಣವನ್ನೇ ಹೊಂದಿದೆ. ಆರು ದಿನಗಳ ಹಿಂದೆ ಈ ಚಿತ್ರವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾಗಿದ್ದು ಸುಮಾರು 300 ಜನರು ಈ ಸವಾಲಿಗೆ ಉತ್ತರ ನೀಡಲು ಪ್ರಯತ್ನಿಸಿದ್ದಾರೆ.
ನನಗೆ ಮೀನು ಸಿಗಲಿಲ್ಲ. ಆದರೆ ಮೀನನ್ನು ಹುಡುಕಲು ನೀಡಿರುವ ಸುಳಿವುಗಳನ್ನು ಓದಿ ಖುಷಿಪಟ್ಟೆ ಎಂದಿದ್ದಾರೆ. ಸ್ವಲ್ಪ ಜಾಸ್ತಿ ಸಮಯ ತೆಗೆದುಕೊಂಡು ಹುಡುಕಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಅಲ್ಲಲ್ಲಿ ಅಲಂಕರಿಸಿಕೊಂಡು ಕುಳಿತ ಆಕ್ಟೋಪಸ್ ನೋಡಿ ಮುದ್ದು ಬಂದಿತು. ಆದರೆ ಆ ಮೀನು ಎಲ್ಲಿಸಿದೆಯೋ ಸಿಗಲಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್
ನೀವು ಉತ್ತರ ಕಂಡುಕೊಳ್ಳಲು ಎಷ್ಟು ಸಮಯ ತೆಗೆದುಕೊಂಡಿರಿ? ಅಥವಾ ಉತ್ತರ ಸಿಗಲೇ ಇಲ್ಲವೆ? ಈಗಾಗಲೇ ಇಂಥ ಚಿತ್ರಗಳನ್ನು ನೋಡಿದ ನಿಮ್ಮ ಮೆದುಳು, ಕಣ್ಣಿಗೆ ಇಂಥ ಚಿತ್ರಗಳ ತಂತ್ರದ ಪರಿಚಯವಾಗಿರಬಹುದು. ನೀವೇನಂತೀರಿ? ಮತ್ತಷ್ಟು ಇಂಥ ಚಿತ್ರಗಳನ್ನು ನಿಮಗಾಗಿ ತರುತ್ತೇವೆ. ಕಾಯುತ್ತಿರಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:21 am, Fri, 3 February 23