ಪ್ರಾಣಿಗಳು ಮಾತಿನಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ, ಆದರೆ ಅವುಗಳ ಕಾರ್ಯಗಳು ಅವುಗಳ ಪದಗಳಿಗಿಂತ ಹೆಚ್ಚಾಗಿ ಮಾತನಾಡುತ್ತವೆ. ಇಂಟರ್ನೆಟ್‌ನಲ್ಲಿ ಅಂತಹ ಒಂದು ವಿಡಿಯೋ ವೈರಲ್ ಆಗುತ್ತಿದೆ. ನಾಯಿಯೊಂದು ವ್ಯಕ್ತಿಯ ಜೊತೆಯಲ್ಲೇ ದ್ವಿಚಕ್ರ ವಾಹನದಲ್ಲಿ ಓಡಾಡುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ. ಈ ವಿಡಿಯೋದಲ್ಲಿ ಗಮನಿಸಬೇಕಾದ ಅಂಶವೆಂದರೆ, ಆ ವ್ಯಕ್ತಿ ಡೊಮಿನೊಸ್ ಪಿಜ್ಜಾ ವಿತರಣಾ ಸಂಸ್ಥೆಯಲ್ಲಿ ಪಿಜ್ಜಾ ವಿತರಕರಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಪಿಜ್ಜಾ ವಿತರಕನ ಜೊತೆ ನಾಯಿ ಕೂಡ ಪಿಜ್ಜಾ ವಿತರಿಸಲು ಹೋಗುತ್ತಿರುವ ವಿಡಿಯೋ ನೋಡಿದ ಇಂಟರ್ನೆಟ್ ಬಳಕೆದಾರರು ಫಿದಾ ಆಗಿದ್ದಾರೆ.
ಜುಲೈ 31 ರಂದು ಶಿವಾಂಗ್ ಎಂಬ ಬಳಕೆದಾರರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ವೈರಲ್ ಪಡೆದುಕೊಂಡಿದೆ. “ನಿಜವಾದ ಸ್ನೇಹದ ನೋಟ ಹೀಗಿದೆ. ಯಾವುದೇ ಸಮಯದಲ್ಲಿ ಈ ನಾಯಿ ತನ್ನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯಾವಾಗಲೂ ವ್ಯಕ್ತಿಯೊಂದಿಗೆ ಬರುತ್ತದೆ. ಈ ಮುದ್ದಾದ ನಾಯಿಯ ಹೆಸರು ಜ್ಯಾಕ್, ಅವನು ಯಾವಾಗಲೂ ಈ ವ್ಯಕ್ತಿಯೊಂದಿಗೆ ಆಹಾರ ವಿತರಣೆಗಾಗಿ ಹೋಗುತ್ತಾನೆ” ಎಂದು ಶಿವಾಂಗ್ ಅವರು ವಿಡಿಯೋ ಹಂಚಿಕೊಳ್ಳುವಾಗ ಶೀರ್ಷಿಕೆ ಬರೆದುಕೊಂಡಿದ್ದಾರೆ.
ವೀಡಿಯೊವನ್ನು ಹಂಚಿಕೊಂಡಾಗಿನಿಂದ 1.3 ಮಿಲಿಯನ್ ವೀಕ್ಷಣೆಗಳು ಮತ್ತು 1.62 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ. ಇಬ್ಬರ ನಡುವಿನ ಈ ಅವಿನಾಭಾವ ಸಂಬಂಧಕ್ಕಾಗಿ ಬಳಕೆದಾರರು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, “ಈ ವಿಡಿಯೋ ಆರೋಗ್ಯಕರವಾಗಿದೆ. ದೇವರು ಈ ಶುದ್ಧ ಆತ್ಮಗಳನ್ನು ರಕ್ಷಿಸುತ್ತಾನೆ” ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ, “ಡೊಮಿನೋಸ್ನ ಗೌರವಾನ್ವಿತ ಉದ್ಯೋಗಿ” ಎಂದು ಹೇಳಿದ್ದಾರೆ. ಮಗದೊಬ್ಬರು ಕಾಮೆಂಟ್ ಮಾಡಿ ಬೆಲೆಕಟ್ಟಲಾಗದು. ಈ ಜೋಡಿಯು ನಾನಿರುವ ಸ್ಥಳದಲ್ಲಿ ಪಿಜ್ಜಾಗಳನ್ನು ವಿತರಿಸಬೇಕೆಂದು ನಾನು ಬಯಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Sun, 21 August 22