Viral Video : ಒಂದು ಕೊಟ್ಟಾ, ಎರಡು ಕೊಟ್ಟಾ, ಮೂರು ಕೊಟ್ಟಾ, ನಾಲ್ಕು ಕೊಟ್ಟಾ ಕೊಟ್ಟಾ ಕೊಟ್ಟಾ… ನಾಲ್ಕು ಸಾವಿರ ಪಾನೀಪುರಿ ಕೊಟ್ಟರೂ ತುಂಬದು ಈ ಗಜರಾಯನ ಹೊಟ್ಟೆ. ಅಂತೂ ಮನುಷ್ಯನ ಸಹವಾಸಕ್ಕೆ ಬಿದ್ದು ಕಾಡುಪ್ರಾಣಿಗಳು ಹೀಗೆಲ್ಲಾ ‘ರುಚಿಭ್ರಮಣೆ’ಗೊಳಗಾಗಿ ಹಾಳಾಗ್ತಿವೆ ಅಂದಹಾಗಾಯ್ತು! ಪಾನೀಪುರಿ, ಗೋಲ್ಗಪ್ಪ, ಪುಚ್ಕಾ ಎಷ್ಟೊಂದು ಹೆಸರುಗಳು ಈ ಬೀದಿಬದಿಯ ತಿಂಡಿಗೆ. ಇಡೀ ದೇಶದ ಜನತೆಯ ನಾಲಗೆಯನ್ನು ತನ್ನ ಸ್ವಾಧೀನದಲ್ಲಿರಿಸಿಕೊಂಡ ಕೀರ್ತಿ ಈ ಪಾನೀಪುರಿಯದು. ಮನುಷ್ಯರು ಸಾಲದು ಅಂತ ಈಗ ಕಾಡಿನ ಪ್ರಾಣಿಗಳ ನಾಲಗೆಗೂ ಲಗ್ಗೆ ಇಡಲು ಆರಂಭಿಸಿದೆ! ಈಗ ವೈರಲ್ ಆಗುತ್ತಿರುವ ಈ ವಿಡಿಯೋ ಆಸ್ಸಾಮಿನಲ್ಲಿ ಸೆರೆಹಿಡಿದಿದ್ದು.
Elephant enjoying pani puri in Guwahati.#guwahati #elephant #panipuri pic.twitter.com/AJz3RVwlBa
ಇದನ್ನೂ ಓದಿ— Trolls Officials (@trollsofficials) October 12, 2022
ಹೀಗಿವನು ಆನೆಗೆ ಪಾನೀಪುರಿ ತಿನ್ನಿಸುತ್ತಿರುವುದನ್ನು ನೋಡಲು ಸುತ್ತಲೂ ಜನ ಜಮಾಯಿಸಿದ್ದಾರೆ, ತಮ್ಮ ತಮ್ಮ ಮೊಬೈಲುಗಳಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ನೆಟ್ಟಿಗರಿಗಂತೂ ಈ ವಿಡಿಯೋ ಬಹಳ ಮಜಾ ಕೊಡುತ್ತಿದೆ. ‘ಸುಕ್ಕಾ ಪುರಿ ಭೀ ದೇನಾ ಉಸ್ಕೋ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಮನುಷ್ಯರೇ ಯಾಕೆ ಎಲ್ಲವನ್ನೂ ಅನುಭವಿಸಿ ಖುಷಿಪಡಬೇಕು, ನಾನೂ ತಿಂದು ಖುಷಿಪಡುತ್ತೇನೆ’ ಎಂದು ಆನೆಯ ಪರವಾಗಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ.
‘ಭಾರತವು ಇಲಿಯಿಂದ ಆನೆಯವರೆಗೂ ಎಲ್ಲ ಪ್ರಾಣಿಗಳನ್ನು ಆರಾಧಿಸುವ ದೇಶವಾಗಿದೆ. ಇಲ್ಲಿ ಹುಲಿಯೂ ದೋಣಿಯಲ್ಲಿ ಮನುಷ್ಯನೊಂದಿಗೆ ಪ್ರಯಾಣಿಸಬಹುದು. ಆನೆಯೂ ರಸ್ತೆಬದಿ ಗೋಲ್ಗಪ್ಪ ತಿನ್ನಬಹುದು, ಇಲಿಗಳು ದೇವಸ್ಥಾನದಲ್ಲಿ ಹಾಲು ಕುಡಿಯಬಹುದು. ನಮ್ಮ ಪ್ರಕೃತಿ ಮತ್ತು ಪ್ರಾಣಿಗಳ ಮೇಲಿನ ಪ್ರೀತಿಯು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ’ ಎಂದು ಶ್ಲಾಘಿಸಿದ್ದಾರೆ ಮಗದೊಬ್ಬ ನೆಟ್ಟಿಗರು.
ಈಗ ನಿಮ್ಮನೆಗೆ ಈ ಆನೆ ಬಂದರೆ ಏನು ಕೊಡುತ್ತೀರಿ ತಿನ್ನಲು?
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:36 pm, Wed, 12 October 22