‘ಸಿಂಧು ಅಕ್ಕಾ ನಿಮ್ಮನ್ನು ಹೀಗೆ ನೋಡಲು ಬಹಳ ಖುಷಿ, ಈ ನೃತ್ಯ ತಮಾಷೆಯಾಗಿದೆ’
P V Sindhu : ಪಿ.ವಿ. ಸಿಂಧು ಸೀರೆ ಉಟ್ಟು ನರ್ತಿಸಿದರೆ ಹೇಗಿರುತ್ತದೆ? ನಿಮ್ಮ ಕಲ್ಪನೆ ಇಲ್ಲಿ ನಿಜವಾಗಿದೆ. ಈ ಹೊಸ ರೀಲ್ ಅನ್ನು ಸಿಂಧು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 4 ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋ ಮೆಚ್ಚಿಕೊಂಡಿದ್ದಾರೆ.

Viral Video : ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಬ್ಯಾಂಡ್ಮಿಂಟನ್ ತಾರೆ ಪಿ.ವಿ.ಸಿಂಧು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ರೀಲನ್ನು ಪೋಸ್ಟ್ ಮಾಡಿದ್ದು ಲಕ್ಷಾಂತರ ಜನರು ಈ ಹೊಸ ಝಲಕ್ಗೆ ಫಿದಾ ಆಗುತ್ತಿದ್ದಾರೆ. ಸೀರೆಯುಟ್ಟು, ಸ್ನೀಕರ್ಸ್ ಧರಿಸಿ ‘ಜಿಗಲ್ ಜಿಗಲ್’ ಜನಪ್ರಿಯ ಹಾಡಿಗೆ ಹೆಜ್ಜೆ ಹಾಕಿರುವುದೇ ಈ ವಿಡಿಯೋದ ವಿಶೇಷ. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯನ್ನು ಭಿನ್ನಭಿನ್ನ ಉಡುಗೆಗಳಲ್ಲಿ ನೋಡಲು ಸದಾ ಉತ್ಸುಕರಾಗಿರುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.
ಇದನ್ನೂ ಓದಿView this post on Instagram
ಪಿ.ವಿ. ಸಿಂಧು ಅವರ ಈ ನೃತ್ಯವನ್ನು ನೆಟ್ಟಿಗರು ಬಹುವಾಗಿ ಮೆಚ್ಚಿ ಅವರ ಮೇಲೆ ಪ್ರೀತಿಯ ಸುರಿಮಳೆ ಗೈದಿದ್ದಾರೆ. ಸಾಕಷ್ಟು ಜನ ಪ್ರತಿಕ್ರಿಯಿಸಿ ಮೆಚ್ಚುಗೆ ಸೂಚಿಸಿದ್ದಾರೆ. ‘ನಿಮ್ಮ ಬಗ್ಗೆ ಅತೀವ ಹೆಮ್ಮೆ. ನಮ್ಮ ದೇಶದ ಖ್ಯಾತಿಯನ್ನು ಎತ್ತರಕ್ಕೊಯ್ಯುವ ಪ್ರತಿಯೊಬ್ಬರು ನನಗೆ ಸ್ಫೂರ್ತಿ’ ಎಂದಿದ್ದಾರೆ ಒಬ್ಬ ನೆಟ್ಟಿಗರು. ‘ನೀವು ಪ್ರತಿಭೆ, ಸೌಂದರ್ಯ ಮತ್ತು ಸ್ಫೂರ್ತಿಯ ಖಣಿ’ ಎಂದಿದ್ಧಾರೆ ಮತ್ತೊಬ್ಬ ನೆಟ್ಟಿಗರು. ‘ಅಕ್ಕಾ ಇದನ್ನು ನೋಡಲು ತುಂಬಾ ತಮಾಷೆ ಎನ್ನಿಸುತ್ತಿದೆ. ಖುಷಿಯಾಗುತ್ತಿದೆ’ ಎಂದಿದ್ದಾರೆ ಮತ್ತೊಬ್ಬ ಕಿರಿಯ ಅಭಿಮಾನಿ.
ತಮ್ಮ ನೆಚ್ಚಿನ ಖ್ಯಾತ ವ್ಯಕ್ತಿಗಳ ಪ್ರತಿಯೊಂದು ನಡೆಯನ್ನೂ ಅಭಿಮಾನಿಗಳು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಆದರ್ಶವಾಗಿ ಪರಿಗಣಿಸುತ್ತಿರುತ್ತಾರೆ. ಅವರ ಸಂತೋಷವೇ ತಮ್ಮ ಸಂತೋಷವೆಂದು ಸಂಭ್ರಮಿಸುತ್ತಿರುತ್ತಾರೆ. ಅದಕ್ಕೇ ಅವರು ಅಭಿಮಾನಿದೇವರುಗಳು!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:52 am, Wed, 12 October 22