ಹೇ ಮಾನವ! ಎಂದಾದರೂ ನನ್ನನ್ನು ಪ್ಯಾರಾಗ್ಲೈಡಿಂಗ್ ಕರೆದುಕೊಂಡು ಹೋಗು ಎಂದಿದ್ದೆನಾ?
Pet dog goes paragliding : ‘ಅದರ ಕಣ್ಣು ನೋಡ್ರೋ, ಭಯದಿಂದ ತುಂಬಿ ತುಳುಕ್ತಿವೆ. ನಿಮ್ಮ ಸಂತೋಷಕ್ಕಾಗಿ ಏನೂ ಮಾಡುತ್ತೀರಿ ನೀವು.‘ 8 ಲಕ್ಷ ನೆಟ್ಟಿಗರೇನೋ ಈ ವಿಡಿಯೋ ನೋಡಿದ್ದಾರೆ. ಆದರೆ ಯಾರೊಬ್ಬರಿಗೂ ಇದು ಖುಷಿತಂದಿಲ್ಲ.
Viral Video : ನಿಮ್ಮ ಸ್ನೇಹಿತರ ಜೊತೆ, ನಿಮ್ಮ ಹುಡುಗಿಯ ಜೊತೆ, ನಿಮ್ಮ ಹುಡುಗನ ಜೊತೆ, ನಿಮ್ಮ ಗಂಡನ ಜೊತೆ, ನಿಮ್ಮ ಹೆಂಡತಿಯ ಜೊತೆ, ನಿಮ್ಮ ಮಕ್ಕಳ ಜೊತೆ… ಹೀಗೆ ಪ್ಯಾರಾಗ್ಲೈಡಿಂಗ್ ಮಾಡಿರುತ್ತೀರಿ. ಆದರೆ ನಿಮ್ಮ ಸಾಕುಪ್ರಾಣಿಗಳ ಜೊತೆ? ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಬಂದಿರಬಹುದು. ಅದನ್ನು ಇಲ್ಲೊಬ್ಬರು ತಮ್ಮ ಸಾಕುನಾಯಿಯೊಂದಿಗೆ ಪ್ಯಾರಾಗ್ಲೈಡಿಂಗ್ ಮಾಡಿ ಸಾಧ್ಯವಾಗಿಸಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸುತ್ತಿದ್ದಾರೆ. ನಾಯಿಯ ಪರವಾಗಿ ಅನೇಕರು ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ.
View this post on Instagram
Ladbible ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 8 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಈ ವಿಡಿಯೋ ಅನ್ನು ಮೊದಲು ಪೋಸ್ಟ್ ಮಾಡಿದ್ದು ನ್ಯೂಸ್ಫ್ಲೇರ್. ಇದು ವೈರಲ್ ಆಗಿದ್ದು Ladbible ಖಾತೆಯಲ್ಲಿ ಕಾಣಿಸಿಕೊಂಡಾಗ.
ಈ ವಿಡಿಯೋ ನೋಡಿದ ನೆಟ್ಟಿಗರು ಸಂತೋಷಪಟ್ಟಿಲ್ಲ, ಅಚ್ಚರಿಗೂ ಒಳಗಾಗಿಲ್ಲ. ಬದಲಾಗಿ ನಾಯಿಯ ಬಗ್ಗೆ ಹೆಚ್ಚು ಆತಂಕಿತರಾಗಿದ್ದಾರೆ. ಪ್ಯಾರಾಗ್ಲೈಡಿಂಗ್ನಿಂದ ಅದು ಭಯಕ್ಕೆ ಬಿದ್ದಿದೆ. ಇದರಿಂದ ಅದಕ್ಕೆ ಹಿಂಸೆಯಾದಂತಿದೆ ಎಂದೆಲ್ಲ ಪ್ರತಿಕ್ರಿಯಿಸಿದ್ದಾರೆ.
ಅವಳ ಮುಖ ನೋಡುತ್ತಿದ್ದರೆ ಬಹುಶಃ ಸಾವಿನ ಭಯದಲ್ಲಿದ್ದ ಹಾಗಿದೆ ನನ್ನ ಮಾತನ್ನು ನಂಬಿ ಎಂದು ಒಬ್ಬ ನೆಟ್ಟಿಗರು ಆತಂಕದಿಂದ ಪ್ರತಿಕ್ರಿಯಿಸಿದ್ದಾರೆ. ಕೊನೇಪಕ್ಷ ಅದರ ಕಣ್ಣಿಗೆ ಕೂಲಿಂಗ್ ಗ್ಲಾಸ್ ಆದರೂ ಹಾಕಬೇಕಾಗಿತ್ತು ಎಂದು ದುಃಖಿಸಿದ್ದಾರೆ ಇನ್ನೊಬ್ಬ ನೆಟ್ಟಿಗರು.
ನಿಲ್ಲಿಸಿ ಸಾಕು! ಅದರ ಕಣ್ಣು ನೋಡಿದರೆ ಗೊತ್ತಾಗುತ್ತಿಲ್ಲವಾ ಅದೆಷ್ಟು ಭಯದಿಂದ ಕೂಡಿದೆಯೆಂದು… ಮತ್ತೊಬ್ಬ ನೆಟ್ಟಿಗರು ಕೋಪದಿಂದ ಹೇಳಿದ್ದಾರೆ. ಈ ನಾಯಿ ಎಂದಾದರೂ ನನ್ನನ್ನು ಪ್ಯಾರಾಗ್ಲೈಡಿಂಗ್ಗೆ ಕರೆದುಕೊಂಡು ಹೋಗು ಎಂದು ಹೇಳಿತ್ತಾ? ಅದರ ಕಣ್ಣುಗಳಲ್ಲಿಯ ಭಯ ನೋಡಿದರೆ ನಿಮಗೇನೂ ಅನ್ನಿಸುತ್ತಿಲ್ಲವಾ? ಎಂದಿದ್ದಾರೆ ಇನ್ನೊಬ್ಬರು.
ತಮ್ಮ ಸಂತೋಷಕ್ಕಾಗಿ ಈ ಮನುಷ್ಯರು ಪ್ರಾಣಿಗಳನ್ನು ಬಳಸಿಕೊಳ್ಳುತ್ತಾರೆ ಛೆ ಎಂದಿದ್ದಾರೆ ಇನ್ನೂ ಒಬ್ಬರು. ಗಾಳಿಯಲ್ಲಿ ಹೀಗೆ ಹಾರಾಡುವುದು ನಾಯಿಗಳಿಗೆ ಸಲ್ಲದು. ಅದಕ್ಕೆ ಏನಿದ್ದರೂ ಚೆನ್ನಾಗಿ ತಿನ್ನಿಸಬೇಕು, ವಾಕಿಂಗ್ ಕರೆದುಕೊಂಡು ಹೋಗಬೇಕು. ಅಂದಾಗಲೇ ಖುಷಿ ಎಂದಿದ್ದಾರೆ ಮಗದೊಬ್ಬರು.
ಹೀಗೆ ಅವರವರ ಮನಸಿನಲ್ಲಿರುವುದನ್ನೆಲ್ಲ ಅವರವರಿಗೆ ತಿಳಿದಿರುವುದನ್ನೆಲ್ಲ ಹೇಳಿದ್ದಾರೆ. ನಾಯಿ ಏನು ಹೇಳೀತು?! ಪಾಪದ್ದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:12 pm, Wed, 12 October 22