AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆ ಬಂತೊಂದಾನೆ, ಅಸ್ಸಾಮಿಂದ ಬಂತೊ, ಪಾನೀಪುರಿ ತಿಂತೋ

Elephant Spotted Enjoying Panipuris : ‘ರುಚಿಯಾಗಿದ್ದನ್ನು ಯಾವಾಗಲೂ ಸ್ವಲ್ಪೇ ತಿನ್ನಬೇಕು, ಹೊಟ್ಟೇತುಂಬಾ ತಿಂದು ತೇಗೋದಲ್ಲ. ಈಗ ನೋಡಿ ನನ್ನ ದೊಡ್ಡಹೊಟ್ಟೆಗೆ ಈ ಪುಟ್ಟಪುಟ್ಟ ಪಾನೀಪುರಿ ಉರುಳಿಸಿಕೊಳ್ತಿದೀನಲ್ಲ ಹೀಗೆ...’

ಆನೆ ಬಂತೊಂದಾನೆ, ಅಸ್ಸಾಮಿಂದ ಬಂತೊ, ಪಾನೀಪುರಿ ತಿಂತೋ
Elephant Spotted Enjoying Panipuris At Roadside Stall in Assam
TV9 Web
| Edited By: |

Updated on:Oct 12, 2022 | 12:44 PM

Share

Viral Video : ಒಂದು ಕೊಟ್ಟಾ, ಎರಡು ಕೊಟ್ಟಾ, ಮೂರು ಕೊಟ್ಟಾ, ನಾಲ್ಕು ಕೊಟ್ಟಾ ಕೊಟ್ಟಾ ಕೊಟ್ಟಾ… ನಾಲ್ಕು ಸಾವಿರ ಪಾನೀಪುರಿ ಕೊಟ್ಟರೂ ತುಂಬದು ಈ ಗಜರಾಯನ ಹೊಟ್ಟೆ. ಅಂತೂ ಮನುಷ್ಯನ ಸಹವಾಸಕ್ಕೆ ಬಿದ್ದು ಕಾಡುಪ್ರಾಣಿಗಳು ಹೀಗೆಲ್ಲಾ ‘ರುಚಿಭ್ರಮಣೆ’ಗೊಳಗಾಗಿ ಹಾಳಾಗ್ತಿವೆ ಅಂದಹಾಗಾಯ್ತು! ಪಾನೀಪುರಿ, ಗೋಲ್ಗಪ್ಪ, ಪುಚ್ಕಾ ಎಷ್ಟೊಂದು ಹೆಸರುಗಳು ಈ ಬೀದಿಬದಿಯ ತಿಂಡಿಗೆ. ಇಡೀ ದೇಶದ ಜನತೆಯ ನಾಲಗೆಯನ್ನು ತನ್ನ ಸ್ವಾಧೀನದಲ್ಲಿರಿಸಿಕೊಂಡ ಕೀರ್ತಿ ಈ ಪಾನೀಪುರಿಯದು. ಮನುಷ್ಯರು ಸಾಲದು ಅಂತ ಈಗ ಕಾಡಿನ ಪ್ರಾಣಿಗಳ ನಾಲಗೆಗೂ ಲಗ್ಗೆ ಇಡಲು ಆರಂಭಿಸಿದೆ! ಈಗ ವೈರಲ್ ಆಗುತ್ತಿರುವ ಈ ವಿಡಿಯೋ ಆಸ್ಸಾಮಿನಲ್ಲಿ ಸೆರೆಹಿಡಿದಿದ್ದು.

ಹೀಗಿವನು ಆನೆಗೆ ಪಾನೀಪುರಿ ತಿನ್ನಿಸುತ್ತಿರುವುದನ್ನು ನೋಡಲು ಸುತ್ತಲೂ ಜನ ಜಮಾಯಿಸಿದ್ದಾರೆ, ತಮ್ಮ ತಮ್ಮ ಮೊಬೈಲುಗಳಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ನೆಟ್ಟಿಗರಿಗಂತೂ ಈ ವಿಡಿಯೋ ಬಹಳ ಮಜಾ ಕೊಡುತ್ತಿದೆ.  ‘ಸುಕ್ಕಾ ಪುರಿ ಭೀ ದೇನಾ ಉಸ್ಕೋ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಮನುಷ್ಯರೇ ಯಾಕೆ ಎಲ್ಲವನ್ನೂ ಅನುಭವಿಸಿ ಖುಷಿಪಡಬೇಕು, ನಾನೂ ತಿಂದು ಖುಷಿಪಡುತ್ತೇನೆ’ ಎಂದು ಆನೆಯ ಪರವಾಗಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ.

‘ಭಾರತವು ಇಲಿಯಿಂದ ಆನೆಯವರೆಗೂ ಎಲ್ಲ ಪ್ರಾಣಿಗಳನ್ನು ಆರಾಧಿಸುವ ದೇಶವಾಗಿದೆ. ಇಲ್ಲಿ ಹುಲಿಯೂ ದೋಣಿಯಲ್ಲಿ ಮನುಷ್ಯನೊಂದಿಗೆ ಪ್ರಯಾಣಿಸಬಹುದು. ಆನೆಯೂ ರಸ್ತೆಬದಿ ಗೋಲ್ಗಪ್ಪ ತಿನ್ನಬಹುದು, ಇಲಿಗಳು ದೇವಸ್ಥಾನದಲ್ಲಿ ಹಾಲು ಕುಡಿಯಬಹುದು. ನಮ್ಮ ಪ್ರಕೃತಿ ಮತ್ತು ಪ್ರಾಣಿಗಳ ಮೇಲಿನ ಪ್ರೀತಿಯು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ’ ಎಂದು ಶ್ಲಾಘಿಸಿದ್ದಾರೆ ಮಗದೊಬ್ಬ ನೆಟ್ಟಿಗರು.

ಈಗ ನಿಮ್ಮನೆಗೆ ಈ ಆನೆ ಬಂದರೆ ಏನು ಕೊಡುತ್ತೀರಿ ತಿನ್ನಲು?

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:36 pm, Wed, 12 October 22

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ