ಯುಪಿಎಸ್​ಸಿ ಪರೀಕ್ಷೆ ಸಿದ್ಧತೆ ನಡೆಸಿರುವ ಮಗಳಿಗೆ ಸಹಾಯ ಮಾಡಲು ಆಟೋದಲ್ಲಿ ಅಧ್ಯಯನ ಮಾಡುತ್ತಿರುವ ಉಬರ್ ಡ್ರೈವರ್

UPSC : ‘ಈ ಯೂಟ್ಯೂಬ್​ ಚಾನೆಲ್​ನಲ್ಲಿ ಅರ್ಥಶಾಸ್ತ್ರ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೇಳುತ್ತಾರೆ. ಪ್ರತೀ ದಿನ ಮಗಳು ಲೈಬ್ರರಿಯಿಂದ ಬಂದ ಮೇಲೆ ನಾವು ಈ ವಿಷಯಗಳ ಬಗ್ಗೆ ಚರ್ಚಿಸುತ್ತೇವೆ.’ ರಾಕೇಶ್, ಉಬರ್ ಡ್ರೈವರ್, ಬೆಂಗಳೂರು.

ಯುಪಿಎಸ್​ಸಿ ಪರೀಕ್ಷೆ ಸಿದ್ಧತೆ ನಡೆಸಿರುವ ಮಗಳಿಗೆ ಸಹಾಯ ಮಾಡಲು ಆಟೋದಲ್ಲಿ ಅಧ್ಯಯನ ಮಾಡುತ್ತಿರುವ ಉಬರ್ ಡ್ರೈವರ್
Uber driver studies in auto to help daughter prepare for UPSC
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 12, 2022 | 4:43 PM

Viral : ಹಂತಹಂತವಾಗಿ ತಮ್ಮ ಮಕ್ಕಳು ಗುರಿಯನ್ನು ತಲುಪಲು ಪೋಷಕರ ಸಹಾಯ, ಪ್ರಯತ್ನ ಬಹಳ ಮುಖ್ಯ. ದುಡಿಯುವ ವರ್ಗದ ಪೋಷಕರು ಈ ವಿಷಯವಾಗಿ ಬಹಳೇ ಕಷ್ಟಪಡಬೇಕು. ಎಲ್ಲರಿಗೂ ಇರುವುದು ಇಪ್ಪತ್ನಾಲ್ಕು ತಾಸು ಗಂಟೆಯಾದರೂ ಅಷ್ಟರಲ್ಲೇ ಸಂಸಾರ ಮತ್ತು ಉದ್ಯೋಗದ ಜವಾಬ್ದಾರಿಗಳನ್ನು ಪೂರೈಸಬೇಕು, ಮಕ್ಕಳನ್ನು ಅವರವರ ಕನಸು ಗುರಿಯೆಡೆಗೆ ಕರೆದೊಯ್ಯಬೇಕು. ಈಗ ಲಿಂಕ್​ಡಿನ್​ ಮೂಲಕ ವೈರಲ್ ಆಗುತ್ತಿರುವ ಈ ಪೋಸ್ಟ್​ ಗಮನಿಸಿ. ಉಬರ್ ಆಟೋ ಡ್ರೈವರ್ ಒಬ್ಬರು, ಆಟೋದಲ್ಲಿ ಕುಳಿತು ಮೊಬೈಲಿನಲ್ಲಿ ಏನನ್ನೋ ಕೇಳಿಸಿಕೊಳ್ಳುತ್ತಿದ್ದಾರೆ. ಹಾಗಂತ ಇವರು ಯಾವುದೋ ಪರೀಕ್ಷೆಗೆ ಸಿದ್ಧತೆ ನಡೆಸಿಲ್ಲ. ಯುಪಿಎಸ್​ಸಿ ಪರೀಕ್ಷೆ ಬರೆಯಬೇಕಿರುವ ತಮ್ಮ ಮಗಳಿಗೆ ಸಹಾಯ ಮಾಡಲು ಇವರು ಹೀಗೆ ಸಿಕ್ಕ ಸಣ್ಣಪುಟ್ಟ ಸಮಯದಲ್ಲಿ ತಾವೂ ಅಧ್ಯಯನದಲ್ಲಿ ತೊಡಗಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ.

ಜೆಪಿ ಮೋರ್ಗನ್ ಇನ್ವೆಸ್ಟ್​ಮೆಂಟ್ ಬ್ಯಾಂಕಿಂಗ್​ನ ವಿಶ್ಲೇಷಕ ಅಭಿಜೀತ್ ಮುಥಾ ಲಿಂಕ್ಡಿನ್​ನ ತಮ್ಮ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಅಭಿಜೀತ್​ ಬೆಂಗಳೂರಿನಲ್ಲಿ ಉಬರ್​ ಆಟೋ ಏರಿಕುಳಿತುಕೊಳ್ಳುತ್ತಿದ್ದಂತೆ, ಯೂಟ್ಯೂಬ್​ ನೋಡುತ್ತಿದ್ದ ಡ್ರೈವರ್ ರಾಕೇಶ್ ಅದನ್ನು ಸ್ಥಗಿತಗೊಳಿಸಿ ನೇವಿಗೇಷನ್​ ವಿಂಡೋಗೆ ಶಿಫ್ಟ್ ಆದರು. ಸ್ವಲ್ಪ ಸಮಯದ ನಂತರ ಮರಳಿ ಯುಟ್ಯೂಬ್ ಆನ್ ಮಾಡಿದರು. ಇದೆಲ್ಲವನ್ನೂ ಗಮನಿಸುತ್ತಿದ್ದ ಅಭಿಜೀತ್ ಈ ವಿಷಯವಾಗಿ ರಾಕೇಶ್​ ಅವರನ್ನು ಕೇಳಿದಾಗ, ‘ಅಣ್ಣಾ, ಈ ಚಾನೆಲ್​ನಲ್ಲಿ​ ಅರ್ಥಶಾಸ್ತ್ರ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೇಳುತ್ತಾರೆ’ ಎಂದರು.

ಆಗ ಅಭಿಜೀತ್​, ‘ಯಾವುದಾದರೂ ಪರೀಕ್ಷೆಗೆ ಕಟ್ಟಿದ್ದೀರಾ?’ ಎಂದಾಗ, ‘ನಾನಲ್ಲ ನನ್ನ ಮಗಳು ಯುಪಿಎಸ್​ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಳೆ. ಪ್ರತೀ ದಿನ ಲೈಬ್ರರಿಯಿಂದ ಬಂದಮೇಲೆ ನಾವು ಸ್ವಲ್ಪ ಹೊತ್ತು ಚರ್ಚೆ ಮಾಡುತ್ತೇವೆ. ಅದಕ್ಕಾಗಿ ನಾನೂ ಕೂಡ ಸಮಯ ಸಿಕ್ಕಾಗೆಲ್ಲ ವಿಷಯವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ ರಾಕೇಶ್.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮೂರು ದಿನಗಳ ಹಿಂದೆ ಲಿಂಕ್ಡಿನ್​ನಲ್ಲಿ ಈ ಪೋಸ್ಟ್​ ಹಂಚಿಕೊಂಡ ನಂತರ ಈತನಕ 1.3 ಲಕ್ಷಕ್ಕೂ ಹೆಚ್ಚು ಪ್ರತಿಕ್ರಿಯೆಗಳು, 1,600ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಮತ್ತು 1,800 ಮರುಹಂಚಿಕೆಗಳು ಲಭ್ಯವಾಗಿವೆ. ನೆಟ್ಟಿಗರು ಉಬರ್ ಡ್ರೈವರ್​ನ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಕೆಲವರು ಡ್ರೈವರ್​ ಮತ್ತು ಪ್ರಯಾಣಿಕರ ಕಾಳಜಿ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಅಭಿಜೀತ್, ‘ಅವರು ಆಟೋ ಚಾಲನೆ ಮಾಡುತ್ತ ಈ ವಿಡಿಯೋ ನೋಡುವುದಿಲ್ಲ. ಸಿಗ್ನಲ್​ನಲ್ಲಿ ಮಾತ್ರ ವಿಡಿಯೋ ಕಡೆ ಕಣ್ಣು ಹಾಯಿಸುತ್ತಾರೆ’ ಎಂದು ಸಮಜಾಯಿಷಿ ನೀಡಿದ್ದಾರೆ.

ಅದ್ಭುತ! ನಿಮ್ಮ ಮಕ್ಕಳು ಯುಪಿಎಸ್​ಸಿ ತಯಾರಿ ನಡೆಸದಿದ್ದರೂ ಇಂಥ ವಾತಾವರಣ ಎಲ್ಲ ಮನೆಗಳಲ್ಲೂ ಇರಬೇಕು. ಇಂಥ ಸಂಗತಿಗಳು ಜನರ ದೃಷ್ಟಿಕೋನವನ್ನು ಬದಲಾಯಿಸುತ್ತವೆ ಎಂದಿದ್ದಾರೆ ನೆಟ್ಟಿಗರು.

ನೀವೇನಂತೀರಿ? ಪ್ರಯತ್ನವಿದ್ದರೆ ಫಲ.

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:29 pm, Wed, 12 October 22