ಫ್ಲೊರಿಡಾದಲ್ಲಿ ಅಳಿಲನ್ನು ರಕ್ಷಿಸಿದಾತನನ್ನು ಹೀರೋ ಎಂದ ನೆಟ್ಟಿಗರು
Hurricane : ಇಯಾನ್ ಚಂಡಮಾರುತದ ಅಸ್ತವ್ಯಸ್ತತೆಯ ಮಧ್ಯೆಯೇ ಈ ವ್ಯಕ್ತಿಗೆ ಸಂಕಷ್ಟದಲ್ಲಿದ್ದ ಅಳಿಲೊಂದು ಕಂಡಿದೆ. ಅದನ್ನು ರಕ್ಷಿಸಿದ್ದಕ್ಕೆ ಪ್ರತೀದಿನವೂ ಈತನ ಮನೆಗೆ ಬಂದು ಕೃತಜ್ಞತಾ ಭಾವ ತೋರುತ್ತಿದೆ.
Viral : ಫ್ಲೊರಿಡಾದಲ್ಲಿ ಅಪ್ಪಳಿಸಿರುವ ಇಯಾನ್ ಚಂಡಮಾರುತದ ಅಟ್ಟಹಾಸದ ಕಥೆಗಳನ್ನು ಕೇಳುತ್ತಿದ್ದೀರಿ ನೋಡುತ್ತಿದ್ದೀರಿ. ನೂರಾರು ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ರಸ್ತೆ ಮನೆಗಳು ನಾಶವಾಗುತ್ತಿವೆ. ಇನ್ನು ಪ್ರಾಣಿ ಪಕ್ಷಿಗಳ ಕಥೆಯಂತೂ ಹೇಳತೀರದು. ಈ ಎಲ್ಲದರ ಮಧ್ಯೆಯೇ ವ್ಯಕ್ತಿಯೊಬ್ಬ ಅಳಿಲನ್ನು ರಕ್ಷಿಸಿದ ವಿಡಿಯೋ ವೈರಲ್ ಆಗುತ್ತಿದೆ. ನಿಂತ ಮಳೆನೀರಿನಲ್ಲಿ ನಡೆದುಕೊಂಡು ಹೋಗುತ್ತಿರುವ ಈ ವ್ಯಕ್ತಿಯ ಕಾಲನ್ನು ಏರಲು ಪ್ರಯತ್ನಿಸಿದೆ ಈ ಅಳಿಲು. ಅದು ವಾಪಾಸ್ ನೀರಿನೊಳಗೆ ಬೀಳದಂತೆ ಹುಷಾರಾಗಿ ಅದರೊಂದಿಗೆ ಚಲಿಸಿದ್ದಾನೆ ಈತ.
ಇದನ್ನೂ ಓದಿView this post on Instagram
ಇದನ್ನು ಹೀಗೆ ಜೋಪಾನವಾಗಿ ಮನೆಗೆ ಕರೆದುಕೊಂಡು ಬಂದು ಅದಕ್ಕೆ ತಿಂಡಿತಿನಿಸನ್ನು ಕೊಟ್ಟಿದ್ದಾನೆ. ಮತ್ತದಕ್ಕೆ ಸ್ಕ್ರ್ಯಾಂಬಲ್ಸ್ ಎಂದು ಹೆಸರಿಟ್ಟಿದ್ದಾನೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ವಿಡಿಯೋ ನೋಡಿದ ನೆಟ್ಟಿಗರು ಈತನಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ. ಕರುಣಾಮಯಿ ಎಂದು ಹೊಗಳುತ್ತಿದ್ದಾರೆ. ದಿನವೂ ಸ್ಕ್ರ್ಯಾಂಬಲ್ಸ್ ಚಟುವಟಿಕೆಗಳ ಬಗ್ಗೆ ಅಪ್ಡೇಟ್ಗಾಗಿ ಈತನ ಖಾತೆಗೆ ಭೇಟಿ ಕೊಡುತ್ತಿದ್ದಾರೆ ಜನರು.
View this post on Instagram
ಇದನ್ನು ಪೋಷಿಸಿ ಹೊರಬಿಟ್ಟರೂ ತನ್ನ ಪ್ರಾಣ ಉಳಿಸಿದ ಸ್ನೇಹಿತನ ಮನೆಗೆ ದಿನವೂ ಭೇಟಿಕೊಟ್ಟು ಹೋಗುತ್ತಿದೆ ಈ ಅಳಿಲು. ಕೃತಜ್ಞತೆ ಎನ್ನುವುದು ಪ್ರಾಣಿಯಲ್ಲಿಯೂ ಮನೋಗತವಾಗಿದೆ.
ಜೀವ ಜೀವವೇ ಅಲ್ಲವೆ? ಮನುಷ್ಯರಾದರೇನು ಪ್ರಾಣಿಯಾದರೇನು? ಸಂಕಷ್ಟದಲ್ಲಿರುವವರನ್ನು ರಕ್ಷಿಸುವುದೇ ಮನುಷ್ಯ ಧರ್ಮ ಅಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:16 pm, Wed, 12 October 22