ವಾರಣಾಸಿ ದೇವಸ್ಥಾನದಲ್ಲಿ ಗಿಟಾರ್, ವಯೊಲಿನ್ನೊಂದಿಗೆ ಹನುಮಾನ್ ಚಾಲೀಸಾ ಪಠಣ
Hanuman Chalisa : ಮನಸಿನ ನೆಮ್ಮದಿಗಾಗಿ ಯಾರೂ ಏನನ್ನೂ ಅವರಿಷ್ಟದಂತೆ ಭಜಿಸಬಹುದು. ಈ ವಿದೇಶಿಗರು ಪಾಶ್ಚಾತ್ಯ ಶೈಲಿಯಲ್ಲಿ ಹನುಮಾನ್ ಚಾಲೀಸಾ ಪಠಿಸಿದ್ದಾರೆ. ನೆಟ್ಟಿಗರು ಇವರ ತನ್ಮಯತೆಯನ್ನು ಕೊಂಡಾಡುತ್ತಿದ್ದಾರೆ.
Viral Video : ವಿದೇಶಿಯರು ಭಾರತದ ವಿವಿಧ ಸಂಸ್ಕೃತಿಗೆ ಮರುಳಾಗುವುದು ಹೊಸತೇನಲ್ಲ. ಇಲ್ಲಿಯ ಸಂಗೀತ ಕಲೆ ಸಂಸ್ಕೃತಿಯ ಶ್ರೀಮಂತಿಕೆ ಅವರನ್ನು ಅಗಾಧವಾಗಿ ಆಕರ್ಷಿಸಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿದೇಶಿ ಕಲಾವಿದರು ವಾರಣಾಸಿಯ ದೇವಸ್ಥಾನವೊಂದರಲ್ಲಿ ಕುಳಿತು ಪಾಶ್ಚಿಮಾತ್ಯ ಶೈಲಿಯಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದಾರೆ. ಪಠಣೆಗೆ ಪೂರಕವಾಗಿ ಗಿಟಾರ್, ವಯೋಲಿನ್ ಮತ್ತು ತಾಳವಾದ್ಯದ ಒತ್ತಾಸೆ ಪಡೆದಿದ್ದಾರೆ. 1.7 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 3,000ಕ್ಕೂ ಹೆಚ್ಚು ರೀಟ್ವೀಟ್ ಮಾಡಿದ್ದಾರೆ. ‘The Lost Girl’ ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. 12,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಸಂಕಟ್ ಮೋಚನ್ ಹನುಮಾನ್ ದೇವಸ್ಥಾನದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ.
Foreigners recite Hanuman Chalisha at Sankat Mochan Hanuman Temple, Varanasi. ? pic.twitter.com/cg7OF7Sml0
ಇದನ್ನೂ ಓದಿ— The Lost Girl (@Lost_Girl_00) October 11, 2022
ಶಕ್ತಿಗೆ ಧೈರ್ಯಕ್ಕೆ ರೂಪಕವಾದ ಹನುಮಂತ ಎಲ್ಲ ಸಂಕಟಗಳನ್ನು ನಿವಾರಿಸುತ್ತಾನೆ, ಸಮಸ್ಯೆಗಳಿಂದ ಪಾರುಮಾಡುತ್ತಾನೆ ಎನ್ನುವ ಪರಂಪರಾಗತ ನಂಬಿಕೆಯಡಿ ಜನರು ಹನುಮಾನ್ ಚಾಲೀಸಾ ಪಠಿಸುತ್ತಾರೆ. ಅವರವರಿಗೆ ಬೇಕಾದ ಲಯದಲ್ಲಿ, ಸ್ವರಸಂಯೋಜನೆಯಲ್ಲಿ ಅಳವಡಿಸಿಕೊಂಡು ಹಾಡುವುದರಲ್ಲಿ ತನ್ಮಯರಾಗುತ್ತಾರೆ.
ಮನಸ್ಸನ್ನು ಏಕಾಗ್ರಸ್ಥಿತಿಗೆ ತಂದುಕೊಳ್ಳಲು ಇಂಥ ಆರಾಧನೆಗಳಲ್ಲಿ ಮುಳುಗಿಹೋಗುವುದು ಅನೇಕರಿಗೆ ಸಮಾಧಾನ ಕೊಡುತ್ತದೆ. ಯಾರು ಯಾವ ದೇಶದಿಂದಲೇ ಬಂದಿರಲಿ, ಯಾವ ಹಿನ್ನೆಲೆಯಿಂದಲೇ ಕೂಡಿರಲಿ, ಯಾವ ಧರ್ಮ, ಜಾತಿ, ಮತ ಪಂಥದವರೇ ಆಗಿರಲಿ ದೇವರು ಒಬ್ಬನೇ, ನಾಮ ಹಲವು ಅಲ್ಲವೆ? ಒಟ್ಟಿನಲ್ಲಿ ಶಾಂತಿ, ಸಮಾಧಾನ ಮುಖ್ಯ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:47 am, Thu, 13 October 22