Viral Video: ಗೋಲ್ಗಪ್ಪ ಪ್ರಿಯರೇ ಇಲ್ಲಿ ನೋಡಿ… ಗೋಲ್ಗಪ್ಪ ನೀರಿನ ರುಚಿಯನ್ನು ಹೆಚ್ಚಿಸಲು ಟಾಯ್ಲೆಟ್ ಕ್ಲೀನರ್ ಬಳಕೆ

ಗೋಲ್ಗಪ್ಪ ಪಾನಿಗೆ ಟಾಯ್ಲೆಟ್ ಕ್ಲೀನರ್ ಬಳಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, ಕೋಮು ಬಣ್ಣಕ್ಕೂ ತಿರುಗಿಕೊಂಡಿದೆ. ಇದರ ವಿಡಿಯೋ ಇಲ್ಲಿದೆ ನೋಡಿ.

Viral Video: ಗೋಲ್ಗಪ್ಪ ಪ್ರಿಯರೇ ಇಲ್ಲಿ ನೋಡಿ... ಗೋಲ್ಗಪ್ಪ ನೀರಿನ ರುಚಿಯನ್ನು ಹೆಚ್ಚಿಸಲು ಟಾಯ್ಲೆಟ್ ಕ್ಲೀನರ್ ಬಳಕೆ
ಗೋಲ್ಗಪ್ಪಾ ಪಾನಿಗೆ ಟಾಯ್ಲೆಟ್ ಕ್ಲೀನರ್ ಬಳಕೆ
Updated By: Rakesh Nayak Manchi

Updated on: Jul 14, 2022 | 10:11 AM

ಅನೈರ್ಮಲ್ಯದ ಸ್ಥಿತಿಯಲ್ಲಿ ತಯಾರಿಸಲಾದ ಬೀದಿ ಆಹಾರದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇವೆ. ಆಹಾರ ತಯಾರಿಯಲ್ಲಿ ಕೊಳಕು ನೀರು ಬಳಸುವ ಮಾರಾಟಗಾರರ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತವೆ. ಇದೀಗ ಹೊಸ ವೀಡಿಯೊವನ್ನು ಇತ್ತೀಚೆಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಟಾಯ್ಲೆಟ್ ಕ್ಲೀನರ್ ಬಳಸಿ ಗೋಲ್ಗಪ್ಪ (Golgappa) ಪಾನಿ ಸಿದ್ಧಪಡಿಸುತ್ತಿರುವದನ್ನು ಈ ವಿಡಿಯೋ ತೋರಿಸುತ್ತದೆ. ವಿಡಿಯೋವನ್ನು ಶೇರ್ ಮಾಡುತ್ತಿರುವವರು ಗೋಲ್ಗಪ್ಪ ಸಿದ್ಧಪಡಿಸುತ್ತಿರುವವನು ಮುಸ್ಲಿಂ ವ್ಯಕ್ತಿ ಜುಬೇರ್ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಟೋಲ್ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡ “ದಿ ಗ್ರೇಟ್ ಖಲಿ”

ವೈರಲ್ ವಿಡಿಯೋದಲ್ಲಿ ಇರುವಂತೆ, ಓರ್ವ ವ್ಯಕ್ತಿ ಮುಖಕ್ಕೆ ಟವೆಲ್ ಸುತ್ತಿಕೊಂಡು ಗೋಲ್ಗಪ್ಪಾ ನೀರನ್ನು ಸಿದ್ಧಪಡಿಸುತ್ತಿರುವುದನ್ನು ಕಾಣಬಹುದು. ಗೋಲ್ಗಪ್ಪಾ ನೀರಿಗೆ ಟಾಯ್ಲೆಟ್ ಕ್ಲೀನರ್ ಹಾರ್ಪಿಕ್ ಹಾಕುತ್ತಾನೆ. ಈ ವೇಳೆ ಗೌಪ್ಯವಾಗಿ ವಿಡಿಯೋ ಮಾಡುತ್ತಿದ್ದವರು ದಾಳಿ ನಡೆಸಿ ಪ್ರಶ್ನಿಸಿದ್ದಾರೆ. ಈ ವೇಳೆ ಗೋಲ್ಗಪ್ಪಾ ಸಿದ್ಧಪಡಿಸುತ್ತಿರುವ ವ್ಯಕ್ತಿ ಅದನ್ನು ಸಮರ್ಥಿಸಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಪಡೆದು ಕೋಮು ಬಣ್ಣಕ್ಕೆ ತಿರುಗಿಕೊಂಡಿದೆ.

ಆದರೆ, AFWAಯ ಫ್ಯಾಕ್ಟ್ ಚೆಕ್ ಪ್ರಕಾರ, ಈ ವೀಡಿಯೊವನ್ನು ಜಾಗೃತಿ ಮೂಡಿಸುವ ಏಕೈಕ ಉದ್ದೇಶದಿಂದ ಪ್ರದರ್ಶಿಸಲಾಗಿದೆ ಎಂದು ಕಂಡುಬಂದಿದೆ. ಇದನ್ನು ಗ್ಯಾನ್ ಭಂಡಾರ್ ಎಂಬ ಫೇಸ್‌ಬುಕ್ ಖಾತೆಯು ರಚಿಸಿದ್ದು, ಈ ವೀಡಿಯೊವನ್ನು ಜಾಗೃತಿ ಮೂಡಿಸಲು ಮಾಡಲಾಗಿದೆ ಎಂದು ಹಕ್ಕು ನಿರಾಕರಣೆ ಹೊರಡಿಸಿದೆ.

ಇದನ್ನೂ ಓದಿ: Viral News: ಬಾಲಕನನ್ನು ಮೊಸಳೆ ನುಂಗಿದೆ ಎಂದುಕೊಂಡ ಜನ; ಹುಡುಗನ ಕಾಪಾಡಲು ಮಾಡಿದ ಪ್ಲಾನ್ ಏನು ಗೊತ್ತಾ?

ಈ ವಿಡಿಯೋ ಎರಡನೇ ಭಾಗವನ್ನು ಕೂಡ ಹೊಂದಿದ್ದು, ಕೆಲವರು ಇದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸ್ಪಷ್ಟವಾಗಿ ಮೊದಲನೇ ಭಾಗದ ಮುಂದುವರಿಕೆಯಾಗುವ ವಿಡಿಯೋ ಇದಾಗಿದೆ. ಆಯ್ದ ಕೀವರ್ಡ್‌ಗಳನ್ನು ಬಳಸಿಕೊಂಡು ಗ್ಯಾನ್ ಭಂಡಾರ್ ಎಂಬ ಯೂಟ್ಯೂಬ್ ಚಾನೆಲ್​ನಲ್ಲಿ ಮೂಲ ವೀಡಿಯೊವನ್ನು ಹುಡುಕಲು ಸಾಧ್ಯವಾಗಿದೆ. ಈ ವೀಡಿಯೊವನ್ನು ಜುಲೈ 7 ರಂದು ಯೂಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಮಾಡಲಾಗಿದೆ.

ಜ್ಞಾನ ಭಂಡಾರ್ ಅವರ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋವನ್ನು ಹಿಂದಿ ಹಕ್ಕು ನಿರಾಕರಣೆಯೊಂದಿಗೆ ಪೋಸ್ಟ್ ಮಾಡಲಾಗಿದೆ. ಅದು ಸ್ಕ್ರಿಪ್ಟೆಡ್ ವಿಡಿಯೋ ಆಗಿದ್ದು, ಮನರಂಜನೆ ಉದ್ದೇಶಕ್ಕಾಗಿ ಮಾತ್ರ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಮೂಲ ಶೀರ್ಷಿಕೆಯು ಹಿಂದಿಯಲ್ಲಿ, “ಸ್ನೇಹಿತರೇ, ಟಾಯ್ಲೆಟ್ ಕ್ಲೀನರ್ ಅನ್ನು ಹೇಗೆ ಮಿಶ್ರಣ ಮಾಡಲಾಗುತ್ತಿದೆ ಎಂಬುದನ್ನು ನೋಡಿ. ಮಕ್ಕಳ ಆರೋಗ್ಯದ ಜೊತೆ ಆಟವಾಡುತ್ತಿದ್ದಾರೆ. ಗೋಲ್ಗಪ್ಪಾ ನೀರಿನ ರುಚಿಯನ್ನು ಹೆಚ್ಚಿಸಲು ಟಾಯ್ಲೆಟ್ ಕ್ಲೀನರ್ ಅನ್ನು ಸೇರಿಸಲಾಗುತ್ತಿದೆ” ಎಂದು ಬಯೋದಲ್ಲಿ ಹೇಳಲಾಗಿದೆ. ಅದಾಗ್ಯೂ “ದಯವಿಟ್ಟು ನೆನಪಿನಲ್ಲಿಡಿ ನಾನು ಜನರನ್ನು ವಂಚನೆಯಿಂದ ರಕ್ಷಿಸಲು ಮತ್ತು ಜನರಿಗೆ ಅರಿವು ಮೂಡಿಸಲು ಸ್ಕ್ರಿಪ್ಟ್ ಮಾಡಿದ ವಿಡಿಯೋ ಮಾತ್ರ ಮಾಡುತ್ತಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿ: Viral Video: ರೋಹಿತ್ ಶರ್ಮಾ ಬಾರಿಸಿದ ಸಿಕ್ಸರ್​ನಿಂದ ಪುಟ್ಟ ಬಾಲಕಿಗೆ ಪೆಟ್ಟು

Published On - 10:10 am, Thu, 14 July 22