ಬೈಕ್ ಓಡಿಸುತ್ತ ಹೊಲವನ್ನು ಉಳುಮೆ ಮಾಡಿದ ರೈತ; ಅದ್ಭುತ ಎಂದ ನೆಟ್ಟಿಗರು! ವಿಡಿಯೋ ನೋಡಿ

Viral Video: ಹೊಲವನ್ನು ಉಳುಮೆ ಮಾಡಲು ಎತ್ತುಗಳು, ಟ್ಯ್ರಾಕ್ಟರ್ ಬಿಟ್ಟು ಬೈಕ್ ಓಡಿಸುತ್ತ ರೈತ ಉಳುಮೆ ಮಾಡುತ್ತಿದ್ದಾನೆ. ವಿಡಿಯೋ ವೈರಲ್​

ಬೈಕ್ ಓಡಿಸುತ್ತ ಹೊಲವನ್ನು ಉಳುಮೆ ಮಾಡಿದ ರೈತ; ಅದ್ಭುತ ಎಂದ ನೆಟ್ಟಿಗರು! ವಿಡಿಯೋ ನೋಡಿ
ಬೈಕ್ ಓಡಿಸುತ್ತ ಹೊಲವನ್ನು ಉಳುಮೆ ಮಾಡಿದ ರೈತ
Edited By:

Updated on: Sep 30, 2021 | 2:03 PM

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಕೆಲವು ಅಚ್ಚರಿ ಮೂಡಿಸಿದರೆ, ಇನ್ನು ಕೆಲವು ತಮಾಷೆಯಾಗಿರುತ್ತವೆ. ಕೆಲವರು ಕಂಡು ಹಿಡಿದ ಹೊಸ ಹೊಸ ಪ್ರಯೋಗಗಳು ನಿಜವಾಗಿಯೂ ಆಶ್ವರ್ಯವನ್ನುಂಟು ಮಾಡುತ್ತದೆ. ಅವುಗಳಲ್ಲಿ ಕೆಲವು ಮನಸ್ಸಿಗೆ ಭಾರೀ ಇಷ್ಟವಾಗುತ್ತವೆ. ಅಂಥಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರೈತನೊಬ್ಬ ಬೈಕ್ ಓಡಿಸುತ್ತ ಹೊಲವನ್ನು ಉಳುಮೆ ಮಾಡಿದ್ದಾರೆ. ವಿಡಿಯೋ ಇದೆ ನೀವೇ ನೋಡಿ.

ಹೊಲವನ್ನು ಉಳುಮೆ ಮಾಡಲು ಎತ್ತುಗಳು, ಟ್ಯ್ರಾಕ್ಟರ್ ಬಿಟ್ಟು ಬೈಕ್ ಓಡಿಸುತ್ತ ರೈತ ಉಳುಮೆ ಮಾಡುತ್ತಿದ್ದಾನೆ. ಬೈಕ್​ನ ಹಿಂಭಾಗಕ್ಕೆ ಉಳುಮೆ ಯಂತ್ರವನ್ನು ಅಳವಡಿಸಲಾಗಿದೆ. ಬೈಕ್ ಮುಂದಕ್ಕೆ ಚಲಿಸುತ್ತಿದ್ದಂತೆಯೇ ಯಂತ್ರದ ಮೂಲಕ ಹೊಲವನ್ನು ಉಳುಮೆ ಮಾಡಲಾಗುತ್ತದೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಅನೇಕ ನೆಟ್ಟಿಗರು ಈ ವಿಡಿಯೋವಿಗೆ ತಮಾಷೆಯ ಕಾಮೆಂಟ್​ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು ಈ ಕುರಿತಂತೆ ಪ್ರತಿಕ್ರಿಯಿಸಿ ಅದ್ಭುತ ಎಂದಿದ್ದಾರೆ, ವಿಡಿಯೋವನ್ನು ಅನೇಕರು ಇಷ್ಟಪಟ್ಟುದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

Viral Video: ಸಫಾರಿ ಮಾಡುತ್ತಿರುವ ಜೀಪ್ ಒಳಗೆ ನುಗ್ಗಿದ ಸಿಂಹಿಣಿ; ನಂತರ ಏನಾಯ್ತು? ಅಚ್ಚರಿಯ ವಿಡಿಯೊ ಇಲ್ಲಿದೆ

Viral Video: ಎಲ್ಲೆಡೆ ಸಖತ್ ಸದ್ದು ಮಾಡ್ತಿದೆ ಈ ‘ದೇಸಿ ಮೈಕಲ್ ಜಾಕ್ಸನ್’ ನೃತ್ಯ; ವಿಡಿಯೊ ನೋಡಿ