Viral Video: ಮುದ್ದಾದ ಮಗುವನ್ನು ಬಿಟ್ಟುಕೊಡಲು ಬಯಸದ ಕೋತಿ

ಮಗುವಿನೊಂದಿಗೆ ಸ್ನೇಹದೊಂದಿಗೆ ವರ್ತಿಸಿದ ಕೋತಿಯ ವಿಡಿಯೋ ವೈರಲ್ ಆಗುತ್ತಿದೆ. ಪೋಷಕರು ಮಗುವನ್ನು ಕರೆದುಕೊಂಡು ಹೋಗಲು ಎಷ್ಟೇ ಪ್ರಯತ್ನಿಸಿದರೂ ಕೋತಿ ಮಾತ್ರ ಮಗುವನ್ನು ಬಿಟ್ಟುಕೊಡಲಿಲ್ಲ.

Viral Video: ಮುದ್ದಾದ ಮಗುವನ್ನು ಬಿಟ್ಟುಕೊಡಲು ಬಯಸದ ಕೋತಿ
ಮಗುವನ್ನು ಅದರ ಪೋಷಕರಿಗೆ ಬಿಟ್ಟುಕೊಡಲು ಇಷ್ಟವಿಲ್ಲದೆ ಅಪ್ಪಿಕೊಂಡ ಕೋತಿ
Edited By:

Updated on: Aug 28, 2022 | 5:11 PM

ಮೂಕ ಪ್ರಾಣಿಗಳಿಗೆ ಮಾತು ಬರುವುದಿಲ್ಲ ಎಂಬ ಒಂದು ಅಂಶವನ್ನು ಬಿಟ್ಟರೆ ಉಳಿದಂತೆ ಅವುಗಳ ನಡವಳಿಕೆಗಳು ಜನರನ್ನು ಮನಸೋಲುವಂತೆ ಮಾಡುತ್ತದೆ. ಪ್ರಾಣಿಗಳ ನಿಯತ್ತು, ಪ್ರೀತಿಯ ಎದುರು ಮನುಷ್ಯ ಏನೇನೂ ಅಲ್ಲ. ಇದಕ್ಕೆ ನಿದರ್ಶನವೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಕೋತಿಯೊಂದು ಮಗುವಿನೊಂದಿಗೆ ಸ್ನೇಹ ಸಂಬಂಧದಿಂದ ವರ್ತಿಸಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಗುವಿನ ಹಾಗೂ ಕೋತಿಯ ಪರಿಶುದ್ಧ ಸ್ನೇಹಕ್ಕೆ ಫಿದಾ ಆಗಿದ್ದಾರೆ. ನೀವು ಕೂಡ ಈ ವಿಡಿಯೋವನ್ನು ನೋಡಿದರೆ ಅಯ್ಯೋ ಸೋ ಸ್ವೀಟ್ ಎಂದು ಹೇಳದೆ ಇರಲಾರಿರಿ.

ಹರ್ಷ ಪಟೇಲ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಕೋತಿ ಮತ್ತು ಮಗುವಿನ ವಿಡಿಯೋವನ್ನು ಶನಿವಾರದಂದು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಪಡೆದಿದ್ದು, 23ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಾವಿರಕ್ಕೂ ಹೆಚ್ಚು ಲೈಕ್​ಗಳನ್ನು ಪಡೆದುಕೊಂಡಿದೆ. ವಿಡಿಯೋ ಹಂಚಿಕೊಳ್ಳುವಾಗ. “ಮಂಗ ತುಂಬಾ ಮುದ್ದಾದ ಮಗುವನ್ನು ಬಿಟ್ಟುಕೊಡಲು ಬಯಸುವುದಿಲ್ಲ” ಎಂದು ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಇರುಂತೆ, ಹಳ್ಳಿ ರಸ್ತೆಯಲ್ಲಿ ಮಗುವೊಂದು ಕುಳಿತಿದ್ದಾಗ ಅದರ ಬಳಿ ಕೋತಿಯೊಂದು ಬಂದು ಸ್ನೇಹದಿಂದ ವರ್ತಿಸುತ್ತದೆ. ಆರಂಭದಲ್ಲಿ ಕೋತಿ ತನ್ನ ಬುದ್ಧಿಯನ್ನು ತೋರಿಸುತ್ತಾ ಮಗುವಿನ ತಲೆಯನ್ನು ನೋಡುತ್ತಿರುತ್ತದೆ. ಸ್ವಲ್ಪ ಸಮಯದ ಬಳಿಕ ಮಗುವಿನ ಪೋಷಕರು ಬಂದು ಮಗುವನ್ನು ಕರೆದೊಯ್ಯಲು ಮುಂದಾಗುತ್ತಾರೆ, ಈ ವೇಳೆ ಕೋತಿ ಮಗುವನ್ನು ಅದರ ಪೋಷಕರಿಗೆ ಒಪ್ಪಿಸಲು ಬಯಸುವುದಿಲ್ಲ. ಎಷ್ಟೇ ಪ್ರಯತ್ನ ಮಾಡಿದರೂ ಮಗುವನ್ನು ಬಿಟ್ಟುಕೊಡಲು ಬಯಸದ ಕೋತಿ ಅದನ್ನು ತಬ್ಬಿಕೊಳ್ಳುವುದನ್ನು ಕಾಣಬಹುದು.

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 5:11 pm, Sun, 28 August 22