ಕೆಲವೊಂದು ಜಾಹಿರಾತುಗಳು ವಿವಾದಕ್ಕೆ ಕಾರಣವಾಗುತ್ತಿರುತ್ತವೆ. ಇದೀಗ ತನ್ನ ಸಮುದಾಯದ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಲೈಂಗಿಕ ಕಾರ್ಯಕರ್ತೆಯ ನಿಜ ಜೀವನದ ಕಥೆಯನ್ನು ಆಧರಿಸಿದ ನಿರ್ಮಿಸಿದ್ದ ಹಾಗೂ ಆಲಿಯಾ ಭಟ್ ಅಭಿನಯದ ‘ಗಂಗೂಬಾಯಿ ಕಥಿಯಾವಾಡಿ’ (gangubai kathiawadi) ಚಲನಚಿತ್ರದ ದೃಶ್ಯವನ್ನು ರೆಸ್ಟೋರೆಂಟ್‌ನಲ್ಲಿ ಗ್ರಾಹಕರನ್ನು ಸೆಳೆಯಲು ಪ್ರಚಾರಕ್ಕಾಗಿ ಬಳಸಿರುವುದು ಟೀಕೆಗೆ ಕಾರಣವಾಗಿದೆ. ಪಾಕಿಸ್ತಾನದ ಜನಪ್ರಿಯ ರೆಸ್ಟೋರೆಂಟ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Viral Video: ವಿವಾಹ ಸಂಭ್ರಮದಲ್ಲಿ ಭರ್ಜರಿ ಡಾನ್ಸ್, ಕಣ್ಣು ಮಿಟುಕಿಸಿ ನೋಡುವಷ್ಟರಲ್ಲಿ ಹೊಂಡದಲ್ಲಿದ್ದ ಜನರು! ವಿಡಿಯೋ ವೈರಲ್
ಸಿನಿಮಾದಲ್ಲಿ ವೇಶ್ಯಾವಾಟಿಕೆಗೆ ಒತ್ತಾಯಿಸಲ್ಪಟ್ಟ ನಟಿ ಕಾಮತಿಪುರದಲ್ಲಿ ಬಿಟ್ಟ ನಂತರ ತನ್ನ ಮೊದಲ ಗ್ರಾಹಕನನ್ನು ಕರೆಯುವ ಪ್ರಯತ್ನಿಸುತ್ತಾಳೆ. ಸಿನಿಮಾದಲ್ಲಿ ಲೈಂಗಿಕ ಕಾರ್ಯಕರ್ತರು ಅಜಾ ನಾ ರಾಜಾ ಅಂತ ಹೇಳುತ್ತಾರೆ. ಇದೇ ಕ್ಲಿಕ್ ಅನ್ನು ಬಳಸಿಕೊಂಡು ‘ಅಜಾ ನಾ ರಾಜಾ – ನೀವು ಯಾವುದಕ್ಕಾಗಿ ಕಾಯುತ್ತಿದ್ದೀರಿ?’ ಎಂದು ರೆಸ್ಟೋರೆಂಟ್‌ನಲ್ಲಿ ಪುರುಷರ ದಿನದ ವಿಶೇಷಕ್ಕಾಗಿ ಗ್ರಾಹಕರನ್ನು ಆಕರ್ಷಿಸಲು ಬಳಸಲಾಗಿದೆ.
ಇದನ್ನೂ ಓದಿ: Viral Video: ಮದುವೆಯ ಸಂಭ್ರಮದಲ್ಲಿ ತೇಲಾಡಿದ ವರನಿಂದ ವಧುವಿಗೆ ಒಂದೇ ಒಂದು ಕಿಕ್! ವಿಡಿಯೋ ವೈರಲ್
“ಸ್ವಿಂಗ್ಸ್ ಎಲ್ಲಾ ರಾಜರನ್ನು ಇಲ್ಲಿಗೆ ಕರೆಯುತ್ತಿದೆ. ಅಜಾವೋ ಮತ್ತು ಸ್ವಿಂಗ್ಸ್‌ನಲ್ಲಿ ಪುರುಷರ ಸೋಮವಾರದಂದು ಶೇಕಡಾ 25 ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಿ!” ಎಂದು ರೆಸ್ಟೋರೆಂಟ್‌ನಲ್ಲಿ ಪ್ರಚಾರ ಮಾಡಲಾಗುತ್ತಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಾತ್ರವಲ್ಲದೆ, ಗ್ರಾಹಕರಿಂದಲೂ ಭಾರಿ ಟೀಕೆ ವ್ಯಕ್ತವಾಗಿವೆ. ಇದರಿಂದ ಎಚ್ಚೆತ್ತ ರೆಸ್ಟೋರೆಂಟ್‌ನ ಮಾಲೀಕರು, ಅರೆಮನಸ್ಸಿನ ಕ್ಷಮೆಯಾಚನೆಯೊಂದಿಗೆ ಅದನ್ನು ತೆಗೆದುಹಾಕಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ “ಇದೇನು? ಇದು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಉತ್ತೇಜಿಸುತ್ತದೆ ಮತ್ತು ವೇಶ್ಯೆಯರಾಗಲು ಒತ್ತಾಯಿಸಲ್ಪಟ್ಟ ಮಹಿಳೆಯರನ್ನು ಅಕ್ಷರಶಃ ಗೇಲಿ ಮಾಡುತ್ತಿದೆ” ಎಂದು ನೆಟ್ಟಿಗರೊಬ್ಬರು ಹೇಳಿಕೊಂಡಿದ್ದಾರೆ. ಮತ್ತೊಬ್ಬರು, “ವೇಶ್ಯಾವಾಟಿಕೆ ಆಧಾರಿತ ಚಲನಚಿತ್ರದ ಕ್ಲಿಪ್ ಅನ್ನು ಬಳಸುವುದರಿಂದ ನೀವು ಪ್ರಚಾರಕ್ಕಾಗಿ ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದೀರಿ ಎಂದು ತೋರಿಸುತ್ತಿದೆ” ಎಂದು ಹೇಳಿದ್ದಾರೆ. ಇನ್ನೊಬ್ಬರು, “ರೆಸ್ಟೋರೆಂಟ್‌ನಿಂದ ಅಂತಹ ಜಾಹೀರಾತನ್ನು ನಿರೀಕ್ಷಿಸಿರಲಿಲ್ಲ ಮತ್ತು ಮಾರ್ಕೆಟಿಂಗ್ ಗಿಮಿಕ್‌ನಿಂದ ಅವರು ಅತ್ಯಂತ ನಿರಾಶೆಗೊಂಡಿದ್ದಾರೆ” ಎಂದು ಬರೆದಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:06 pm, Sat, 18 June 22