ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಮ್ಮ ಚೌಕಟ್ಟನ್ನು ಮೀರಿ ಹೊಸ ಹೊಸ ರೀತಿಯ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಮುಂಬೈನ ಜಿಮ್ನಾಸ್ಟ್ ಒಬ್ಬಳು ಸೀರೆಯುಟ್ಟು ಸ್ಟಂಟ್ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ಕೆಂಪು ಸೀರೆಯುಟ್ಟು ಕಪ್ಪು ಬ್ಲೌಸ್ ತೊಟ್ಟಿರುವ ಮಿಶಾ ಶರ್ಮ ಮಾಡಿರುವ ಈ ಸ್ಟಂಟ್ ವಿಡಿಯೋ ನೋಡಿದರೆ ನೀವು ಶಾಕ್ ಆಗೋದು ಗ್ಯಾರಂಟಿ. ಸುತ್ತಲೂ ಎಲ್ಲರೂ ನಿಂತಿರುವಾಗ ಸೀರೆಯುಟ್ಟು ಎರಡು ಬಾರಿ ಬ್ಯಾಕ್ಫ್ಲಿಪ್ ಮಾಡಿರುವ ಈ ಯುವತಿಯ ಫ್ಲೆಕ್ಸಿಬಿಲಿಟಿ ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಜಿಮ್ನಾಸ್ಟ್ ಆಗಿರುವ ಮಿಶಾ ಶರ್ಮ ಅವರ ಸ್ಟಂಟ್ಗಳ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.
ಸೀರೆಯುಟ್ಟು ಲೀಲಾಜಾಲವಾಗಿ ಸ್ಟಂಟ್ ಮಾಡಿರುವ ಮಿಶಾ ಶರ್ಮ ಅವರ ವಿಡಿಯೋ ನೋಡಿರುವ ಹಲವರು ನೀವು ಯಾಕೆ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಬಾರದು? ಈಕೆಯನ್ನು ಸರ್ಕಾರ ಒಲಿಂಪಿಕ್ಸ್ಗೆ ಕಳುಹಿಸಿದರೆ ಚಿನ್ನದ ಪದ ಸಿಗುವುದು ಖಚಿತ ಎಂದು ಕಮೆಂಟ್ ಮಾಡಿದ್ದಾರೆ.
ಸರಿಯಾದ ತರಬೇತಿ ಇಲ್ಲದೆ ಈ ರೀತಿಯ ಸ್ಟಂಟ್ಗಳನ್ನು ಮಾಡುವುದು ಬಹಳ ಅಪಾಯಕಾರಿ. ಆದರೆ, ಮಿಶಾ ಮಾಡಿರುವ ಸ್ಟಂಟ್ ನೋಡಿ ಹಲವರು ಇಂಪ್ರೆಸ್ ಆಗಿದ್ದು, ನಾನೂ ಜಿಮ್ನಾಸ್ಟ್ ಆಗಿ ತರಬೇತಿ ಪಡೆಯಬೇಕೆಂಬ ಆಸೆಯಾಗುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಯೋಗಾಸನ ಮಾಡಿದ ಯುವತಿ; ಶಾಕಿಂಗ್ ವಿಡಿಯೋ ಇಲ್ಲಿದೆ
Shocking Video: ಮಾಸ್ಕ್ ಧರಿಸದ್ದಕ್ಕೆ ದಂಡ ವಿಧಿಸಿದ ಅಧಿಕಾರಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ; ವಿಡಿಯೋ ವೈರಲ್
(Viral Video Gymnast Woman performs backflip Stunt in Wearing saree Watch Instagram Shocking Video)