ಟಿಶ್ಯೂ ಪೇಪರ್ ಬಳಸಿ ತಯಾರಿಸಿದ ಸುಂದರವಾದ ಬಿಳಿ ಬಣ್ಣದ ಗುಲಾಬಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ನಿಮ್ಮ ಒತ್ತಡದ ಜೀವನದ ಮಧ್ಯೆ ವಿರಾಮದ ಸಮಯದಲ್ಲಿ ಈ ರೀತಿಯ ಕ್ರಿಯೇಟಿವ್ ಆಲೋಚನೆಗಳ ಮೂಲಕ ನಿಮ್ಮ ಸಹೋದ್ಯೋಗಿಗಳಿಗೆ ಖುಷಿ ನೀಡಬಹುದು. ಸಾಮಾನ್ಯವಾಗಿ ಟಿಶ್ಯೂ ಪೇಪರ್ ಬಳಸಿ ಬಿಸಾಡಲಾಗುತ್ತದೆ. ಆದರೆ ನೀವು ಆ ಟಿಶ್ಯೂ ಪೇಪರ್ ಬಳಸಿ ಸುಂದರವಾದ ಗುಲಾಬಿಯ ಹೂಗಳನ್ನು ತಯಾರಿಸಬಹುದಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಸಾಕಷ್ಟು ವಿಡಿಯೋಗಳು, ಪೋಸ್ಟ್ಗಳು ಹರಿದಾಡುತ್ತದೆ. ಅದರಲ್ಲಿ ಕೆಲವೊಂದು ಭಾರೀ ವೈರಲ್ ಆಗುವುದುಂಟು. ಇತ್ತೀಚೆಗಷ್ಟೇ ‘earthfixforever’ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಟಿಶ್ಯೂ ಪೇಪರ್ ಗುಲಾಬಿ ಭಾರೀ ವೈರಲ್ ಆಗಿದೆ. ಆ ಪೋಸ್ಟ್ ಇಲ್ಲಿದೆ ನೋಡಿ.
ಇದನ್ನೂ ಓದಿ: ಟ್ರಾಫಿಕ್ ನಿಯಮ ಉಲ್ಲಂಘಿಸಿ ಹೀಗೊಂದು ರೊಮ್ಯಾನ್ಸ್ , ವೈರಲ್ ವಿಡಿಯೋ ಇಲ್ಲಿದೆ ನೋಡಿ
ಫೆಬ್ರವರಿ 23ರಂದು ಶೇರ್ ಮಾಡಲಾದ ಈ ವಿಡಿಯೋ 10,533,000 ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಲೈಕ್ ಮತ್ತು ಕಾಮೆಂಟ್ಗಳನ್ನು ಕಾಣಬಹುದು. ಈ ಗುಲಾಬಿಗೆ ನೀವು 1/10 ಎಷ್ಟು ರೇಟ್ ಮಾಡುತ್ತೀರಿ ಎಂದು ಕೂಡ ಬರೆದುಕೊಂಡಿದ್ದಾರೆ. ಸಾಕಷ್ಟು ಬಳಕೆದಾರರು ಬಿಡುವಿನ ಸಮಯದಲ್ಲಿ ಟ್ರೈ ಮಾಡಿ ನೋಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: