ಬೈಕ್ ಇಡ್ಲಿ; ಲಕ್ನೋದ ಸ್ಟ್ರೀಟ್​ಚಾಟ್​ನಲ್ಲಿ ಉಡುಪಿಯ ಇಡ್ಲಿ ಸಾಂಬಾರ್ ಚಟ್ನಿ

| Updated By: ಶ್ರೀದೇವಿ ಕಳಸದ

Updated on: Feb 10, 2023 | 12:41 PM

Idli Sambar : ಈಗೆಲ್ಲಾ ಫುಡ್ ಡೆಲಿವರಿ ಜಮಾನಾ. ಈ ವ್ಯಕ್ತಿ ಬೈಕ್​ ಅನ್ನು ಡೆಲಿವರಿ ಬಾಕ್ಸ್​ನಂತೆ ಮಾರ್ಪಾಡಿಸಿಕೊಂಡು ಇಡ್ಲಿ ಸಾಂಬಾರ್ ಚಟ್ನಿ ಮಾರತೊಡಗಿದ್ದಾರೆ. ಎರಡು ಇಡ್ಲಿಗೆ ರೂ. 30. ಮೂರು ಇಡ್ಲಿಗೆ ರೂ. 40.

ಬೈಕ್ ಇಡ್ಲಿ; ಲಕ್ನೋದ ಸ್ಟ್ರೀಟ್​ಚಾಟ್​ನಲ್ಲಿ ಉಡುಪಿಯ ಇಡ್ಲಿ ಸಾಂಬಾರ್ ಚಟ್ನಿ
ಲಕ್ನೋದ ಬೀದಿಯಲ್ಲಿ ಬೈಕ್​ ಇಡ್ಲಿ ಸಾಂಬಾರ್
Follow us on

Viral News : ದಕ್ಷಿಣ ರಾಜ್ಯಗಳ ಗಡಿ ದಾಟಿದರೆ ಮುಗಿಯಿತು ಇಡ್ಲಿ ದೋಸೆಗಳನ್ನು ಸವಿಯುವುದು ದೂರದ ಮಾತೇ. ಉತ್ತರ ಭಾರತದೆಡೆ ಅದರಲ್ಲೂ ಸ್ಟ್ರೀಟ್ ಚಾಟ್​ಗಳ ಮಧ್ಯೆಯಂತೂ ಕನಸಿನ ಮಾತೇ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಲಕ್ನೋದ ರಸ್ತೆಬದಿ ವ್ಯಾಪಾರಿಯೊಬ್ಬ ಬೈಕ್​ಇಡ್ಲಿ ಮಾರುತ್ತಿದ್ದಾನೆ. ಲಕ್ನೋದ ಫುಡ್ ಬ್ಲಾಗರ್​ ಒಬ್ಬರು ಈ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಲಕ್ನೋದ ಈ ವ್ಯಾಪಾರಿ ಫುಡ್​ ಡೆಲಿವರಿ ಏಜೆಂಟ್​ರ ವಾಹನದಂತೆ ತಮ್ಮ ಬೈಕ್​ ಅನ್ನು ಮಾರ್ಪಾಡು ಮಾಡಿಕೊಂಡು ಇಡ್ಲಿ ಚಟ್ನಿ ಸಾಂಬಾರ್ ಮಾರಲು ಶುರು ಮಾಡಿದ್ದಾರೆ. ರೂ. 30ಕ್ಕೆ ಎರಡು, ರೂ. 40ಕ್ಕೆ ಮೂರು ಇಡ್ಲಿಗಳನ್ನು ದೊನ್ನೆಯಲ್ಲಿ ಹಾಕಿ ಅದಕ್ಕೆ ಸಾಂಬಾರ್, ಚಟ್ನಿ ಸುರಿದು ಕೊಡುತ್ತಾರೆ. ಇದನ್ನು ಉಡುಪಿ ಇಡ್ಲಿ ಸಾಂಬಾರ್ ಎಂದು ಕರೆಯುತ್ತಾರೆ. ಲಕ್ನೋದ ಕಪೂರ್ಥಾಲ್​ನ ಪಿಝಾ ಡೈನ್​ ಬಳಿ ಸಂಜೆ 4ರಿಂದ 9ರತನಕ ಸವಿಯಬಹುದಾಗಿದೆ.

ಇದನ್ನೂ ಓದಿ : ಒಂದಾರೆ ಸಾರೆ ತಿಂದಾರೆ ನೋಡು ಈ ನೀಲಿನೀಲಿ ಇಡ್ಲಿ; ನೋಡಿ ವಿಡಿಯೋ

ನೆಟ್ಟಿಗರೆಲ್ಲಾ ಬಾಯಲ್ಲಿ ನೀರೂರಿಸಿಕೊಂಡು ಈ ವಿಡಿಯೋ ನೋಡುತ್ತಿದ್ದಾರೆ. ಲಕ್ನೋದ ಬಳಿ ಬಂದಾಗ ಖಂಡಿತ ಇಡ್ಲಿ ಸಾಂಬಾರ್ ತಿನ್ನುವೆವು ಎನ್ನುತ್ತಿದ್ದಾರೆ. ಈ ವಿಡಿಯೋ ಅನ್ನು ಈಗಾಗಲೇ 50,000 ಜನರು ನೋಡಿದ್ದಾರೆ. ಸುಮಾರು 1,500 ಜನರು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ : ಬೆಂಗಳೂರಿಗರೇ, ಇಡ್ಲಿ ವೆಂಡಿಂಗ್ ಮಶೀನಿನಲ್ಲಿ ತಯಾರಾದ ಇಡ್ಲಿಗಳ ರುಚಿ ಹೇಗಿದೆ?

ಕೆಲಸ ಮಾಡಬೇಕೆನ್ನುವ ಮನಸ್ಸಿದ್ದರೆ, ಇದ್ದುದರಲ್ಲಿಯೇ ಹೀಗೆ ಕೌಶಲಪೂರ್ಣವಾಗಿ ಯೋಚಿಸಲು ಸಾಧ್ಯವಿದೆ. ನೂರಾರು ಜನರ ಮಧ್ಯೆ ತಾನು ವಿಭಿನ್ನವಾಗಿರಬೇಕು ಎಂದು ಬಯಸಿದಾಗ ಇರಲೂ ಸಾಧ್ಯವಿದೆ. ಇದಕ್ಕೆ ಈ ವ್ಯಕ್ತಿಯೇ ಉದಾಹರಣೆ. ಎಲ್ಲರೂ ಚಾಟ್ ಮಾರುತ್ತಿರುವಾಗ ಈತ ಇಡ್ಲಿ ಮಾರುತ್ತಿರುವುದು ವಿಶೇಷವೇ ತಾನೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:40 pm, Fri, 10 February 23