
ದಿನಪೂರ್ತಿ ಕೊರೊನಾ ಸೋಂಕಿತರ ಆರೈಕೆ ಮಾಡುತ್ತಾ, ತಮ್ಮ ಜೀವವನ್ನೂ ಪಣಕ್ಕಿಟ್ಟು ದುಡಿಯುತ್ತಿರುವ ಕೊರೊನಾ ವಾರಿಯರ್ಸ್ಗೆ ಸಾಟಿ ಬೇರಿಲ್ಲ. ಆಸ್ಪತ್ರೆಯ ವೈದ್ಯರಿಗೆ, ದಾದಿಯರಿಗೆ ಅದೆಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಕಡಿಮೆಯೇ ಸರಿ. ಕೊರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸಿದವರಿಗೆ ಭಾವ ತುಂಬಿ ಸುಶ್ರಾವ್ಯವಾದ ರಾಗ ನುಡಿಸುವ ಮೂಲಕ ಮೇ 18ರಂದು ಮ್ಯಾಂಡೊಲಿನ್ ತಂತಿ ವಾದ್ಯ ಹಿಡಿದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಕಾನ್ಸ್ಟೇಬಲ್ ಗೌರವ ಸೂಚಿಸಿದ್ದಾರೆ. ಅವರು ನುಡಿಸಿರುವ ರಾಗ ಎಲ್ಲರ ಮನಗೆದ್ದಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೊರೊನಾ ವಾರಿಯರ್ಸ್ನ್ನು ನೆನಪಿಸಿಕೊಳ್ಳುತ್ತಾ ಕಾನ್ಸ್ಟೇಬಲ್ ರಾಹುಲ್ ಖೋಸ್ಲಾ ಅವರು ಭಾವಪೂರ್ಣವಾಗಿ ರಾಗ ನುಡಿಸಿದ್ದಾರೆ. ‘ಹರ್ ಕರಮ್ ಅಪನಾ ಕರೆಂಗೆ’ ಸಂಗೀತವನ್ನು ನುಡಿಸುತ್ತಾ ಕೊರೊನಾ ವಾರಿಯರ್ಸ್ಗೆ ಕೃತಜ್ಞತೆ ತಿಳಿಸಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದು, ಇಲ್ಲಿಯವರೆಗೆ ಸುಮಾರು 5,000 ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಲವಾರು ಲೈಕ್ಸ್ಗಳ ಜೊತೆ ವಿಡಿಯೋವನ್ನು ರೀಟ್ವೀಟ್ ಕೂಡಾ ಮಾಡಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ‘ನೀವು ತುಂಬಾ ಪ್ರತಿಭಾವಂತರು’ ಎಂದು ರಾಹುಲ್ ಖೋಸ್ಲಾ ಅವರನ್ನು ಶ್ಲಾಘಿಸಿದ್ದಾರೆ. ಅವರು ನುಡಿಸಿರುವ ಸಂಗೀತಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: Viral Video: ‘ಯಾವ ನೋವೂ ಇಲ್ಲ..ಅಡ್ಡಪರಿಣಾಮವೂ ಇಲ್ಲ..ಲಸಿಕೆ ಹಾಕಿಸಿಕೊಳ್ಳಿ’-ವಿಡಿಯೋ ಸಂದೇಶ ನೀಡಿದ 97ವರ್ಷದ ವೃದ್ಧೆ