ಇಡೀ ದೇಶವೇ ಇಂದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಿದೆ. ಅದರಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಅವರು ವೈರಲ್ ಕೂಡ ಆಗುತ್ತಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜನಪದ ಕಲಾವಿದರು ಪ್ರದರ್ಶನ ನೀಡುತ್ತಿದ್ದಾಗ ಮಮತಾ ಬ್ಯಾನರ್ಜಿ ಅವರು ಕೂಡ ಸೇರಿಕೊಂಡು ಹೆಜ್ಜೆ ಹಾಕಿ ವಿಶೇಷವಾಗಿ ಗಮನ ಸೆಳೆದರು.
ನ್ಯೂಸ್ ಏಜೆನ್ಸಿ ANI ಈ ವೀಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ಕಾಣುವಂತೆ, ಜಾನಪದ ನೃತ್ಯಗಾರ್ತಿಯರು ಹೆಜ್ಜೆ ಹಾಕುತ್ತಿರುತ್ತಾರೆ. ಈ ವೇಳೆ ಇವರೊಂದಿಗೆ ಸೇರಿಕೊಂಡ ಮಮತಾ ಬ್ಯಾನರ್ಜಿ, ನೃತ್ಯಗಾರ್ತಿಯರು ಹೆಜ್ಜೆ ಹಾಕಿದಂತೆ ಇವರು ಕೂಡ ಹೆಜ್ಜೆ ಹಾಕಿದರು. ಈ ನಡುವೆ ಬಿಳಿ ಬಣ್ಣದ ಸೀರೆ ಧರಿಸಿದ ಮತ್ತೊಮ್ಮ ಮಹಿಳೆ ಮಮತಾ ಬ್ಯಾನರ್ಜಿ ಇರುವ ಸ್ಥಳಕ್ಕೆ ಬಂದ ಅವರ ಕೈ ಹಿಡಿದು ನೃತ್ಯ ಮಾಡಲು ಮುಂದಾಗಿದ್ದಾರೆ. ಆದರೆ ತಮ್ಮ ಹತ್ತಿರ ನಿಲ್ಲಲು ಬಿಡದೆ ಆಕಡೆ ಹೋಗುವಂತೆ ಸೂಚಿಸಿದಂತೆ ಕಾಣುತ್ತದೆ. ಅದರಂತೆ ಆ ಮಹಿಳೆ ಅದೇ ಸಾಲಿನಲ್ಲಿ ಬೇರೆ ಕಲಾವಿದರ ಮಧ್ಯೆ ಸೇರಿಕೊಂಡು ಕೈ ಹಿಡಿದು ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೊನೆಯಲ್ಲಿ ಹಾಡಿಗೆ ಅರ್ಧಕ್ಕೆ ಹೆಜ್ಜೆ ಹಾಕುವುನ್ನು ನಿಲ್ಲಿಸಿ ಮಮತಾ ಬ್ಯಾನರ್ಜಿ ಅವರು ವೇದಿಕೆ ಮೇಲೆ ಹೋಗುತ್ತಾರೆ.
#WATCH | West Bengal CM Mamata Banerjee joins the folk artists as they perform at the #IndependenceDay celebrations in Kolkata.#IndiaAt75 pic.twitter.com/9bvyxFm4qz
— ANI (@ANI) August 15, 2022
ಇದಕ್ಕೂ ಮೊದಲು, ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ನಡೆದ ಅದೇ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು. ನಂತರ ಟ್ವೀಟ್ ಮಾಡಿದ ಅವರು, “ಸ್ವಾತಂತ್ರ್ಯದ 75 ವರ್ಷಗಳು ಪೂರ್ಣಗೊಂಡ ನಂತರ, ಭಾರತವು ಸ್ವಾತಂತ್ರ್ಯದ ನಿಜವಾದ ಸಾರವನ್ನು ಜಾಗೃತಗೊಳಿಸಬೇಕು. ನಾವು ನಮ್ಮ ಪೂರ್ವಜರ ದೃಷ್ಟಿಕೋನಕ್ಕೆ ನಿಷ್ಠರಾಗಿರಬೇಕು ಮತ್ತು ನಮ್ಮ ಮುಂದಿನ ಪೀಳಿಗೆಯ ಆಕಾಂಕ್ಷೆಗಳನ್ನು ಹೃದಯದಲ್ಲಿಟ್ಟುಕೊಳ್ಳಬೇಕು. ನನ್ನ ಎಲ್ಲಾ ಸಹ ನಾಗರಿಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಜೈ ಹಿಂದ್!” ಎಂದು ಬರೆದುಕೊಂಡಿದ್ದಾರೆ.
On the completion of 75 years of Independence, India must awaken to the real essence of Independence.
We must stay true to the vision of our forefathers and keep the aspirations of our future generations at heart.
My heartfelt greetings to all my fellow citizens.
Jai Hind!
— Mamata Banerjee (@MamataOfficial) August 15, 2022
ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸುತ್ತಾ ಮತ್ತೊಂದು ಟ್ವೀಟ್ ಮಾಡಿದ ಅವರು, “ಸ್ವಾತಂತ್ರ್ಯಕ್ಕೆ 75 ವರ್ಷಗಳು! ಇಂದು ನಾವು ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಕಾರಣರಾದ ನಮ್ಮ ಪೂರ್ವಜರ ಅತ್ಯುನ್ನತ ತ್ಯಾಗಕ್ಕೆ ಗೌರವ ಸಲ್ಲಿಸುತ್ತೇವೆ. ಭಾರತದ ಜನರು, ಅವರ ಪವಿತ್ರ ಪರಂಪರೆಯನ್ನು ಸಂರಕ್ಷಿಸಬೇಕು ಮತ್ತು ನಮ್ಮ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಜನರ ಹಕ್ಕುಗಳ ಘನತೆಯನ್ನು ಎತ್ತಿಹಿಡಿಯಬೇಕು” ಎಂದು ಬರೆದುಕೊಂಡಿದ್ದಾರೆ.
75 years of Independence!
Today, we pay homage to the supreme sacrifices of our forefathers that led to our country’s independence.
We, the people of India, must preserve their sacred legacy and uphold the dignity of our democratic values and people’s rights.
— Mamata Banerjee (@MamataOfficial) August 14, 2022
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:29 pm, Mon, 15 August 22