Viral Video: ಬಲವಂತವಾಗಿ ಲಡ್ಡು ತಿನ್ನಿಸಿದ ವರ, ಬಿತ್ತು ನೋಡಿ ವಧುವಿನಿಂದ ಒಂದೇಟು

ವೇದಿಕೆ ಮೇಲೆಯೇ ವಧು-ವರ ಲಡ್ಡು ತಿನ್ನುವ ವಿಚಾರದಲ್ಲಿ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದ್ದು, ಇಲ್ಲಿದೆ ನೋಡಿ ಆ ವಿಡಿಯೋ...

Viral Video: ಬಲವಂತವಾಗಿ ಲಡ್ಡು ತಿನ್ನಿಸಿದ ವರ, ಬಿತ್ತು ನೋಡಿ ವಧುವಿನಿಂದ ಒಂದೇಟು
ವಧುವಿನಿಂದ ವರನಿಗೆ ಕಪಾಳಮೋಕ್ಷ
Follow us
TV9 Web
| Updated By: Rakesh Nayak Manchi

Updated on:Aug 15, 2022 | 12:30 PM

ಮದುವೆಯ ಸೀಸನ್ ನಡೆಯುತ್ತಿರುವುದರಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ರೀತಿಯ ತಮಾಷೆ ಮತ್ತು ಆಸಕ್ತಿದಾಯಕ ವಿಡಿಯೋಗಳು ವೈರಲ್ ಆಗುತ್ತವೆ. ಆದಾಗ್ಯೂ ಎಲ್ಲಾ ವಿವಾಹಗಳು ವಿಶೇಷವಾಗಿ ವಧು ಮತ್ತು ವರರು ಪರಸ್ಪರ ವಿನೋದಮಯವಾಗಿರುವುದಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಾಗ ನೀವು ಅಯ್ಯೋ ದೇವಾ ಎನ್ನುವಿರಿ. ವೇದಿಕೆ ಮೇಲೆ ವರ ವಧುವಿಗೆ ಬಲವಂತವಾಗಿ ಲಡ್ಡು ಸೇವಿಸಿದ್ದಕ್ಕೆ ಕೋಪಗೊಂಡ ವಧು ವರನಿಗೆ ಥಳಿಸುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ.

ಮದುವೆ ಸಮಾರಂಭದ ಹಾಲ್​ನಲ್ಲಿ ಜನರು ಸಂಭ್ರಮದಿಂದ ತೊಡಗಿದ್ದಾರೆ. ಇತ್ತ ವೇದಿಕೆಯಲ್ಲಿ ವಧು-ವರ ಮಾತ್ರ ಲಡ್ಡು ತಿನ್ನಿಸುವ ವಿಚಾರದಲ್ಲಿ ಕಿತ್ತಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾಣುವಂತೆ, ವಧು ವರನ ಬಾಯಿಗೆ ಬಲವಂತವಾಗಿ ಲಡ್ಡನ್ನು ತೂರಿಸಿದ್ದಾಳೆ. ಈ ವೇಳೆ ಕೋಪಗೊಂಡ ವರ ವಧುವಿನ ಕೈಯನ್ನು ತೆಗೆದಿದ್ದಾನೆ. ಇಷ್ಟೆಲ್ಲಾ ಮಾಡಿದ ವಧುವನ್ನು ವರ ಸುಮ್ಮನೆ ಬಿಡುತ್ತಾನಾ? ತನ್ನ ಸರದಿ ಬಂದಾಗ ವರ ವಧುವಿಗೆ ಲಡ್ಡು ತಿನ್ನಿಸು ಮುಂದಾಗುತ್ತಾನೆ. ಈ ವೇಳೆ ಆಕೆ ತಿನ್ನಲು ಹಿಂದೇಟು ಹಾಕುತ್ತಾಳೆ. ಹೀಗಾಗಿ ಬಲವಂತವಾಗಿ ಲಡ್ಡನ್ನು ತಿನ್ನಿಸುತ್ತಾನೆ. ಈ ವೇಳೆ ಕುಪಿತಗೊಂಡ ವಧು ವರನ ಕಪಾಳಕ್ಕೆ ಬಾರಿಸಿದ್ದಾಳೆ. ಈ ವೇಳೆ ವೇದಿಕೆಯಲ್ಲಿದ್ದವರು ಆಘಾತಕ್ಕೆ ಒಳಗಾಗುತ್ತಾರೆ.

ಈ ವಿಡಿಯೋವನ್ನು official_viralclips ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರಿಗೆ ಈ ವಿಡಿಯೋ ಮನರಂಜನೆಯನ್ನು ನೀಡುತ್ತಿದೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:28 pm, Mon, 15 August 22

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು