Viral News : ರೀಲ್ಗಾಗಿ ಕಂಟೆಂಟ್ ಹುಡುಕಾಟದೊಂದಿಗೆ ಅದಕ್ಕೆ ಪೂರಕವಾದ ಜಾಗಗಳ ಹುಡುಕಾಟದಲ್ಲಿಯೂ ಸಾಮಾಜಿಕ ಜಾಲತಾಣಗಳ ಪ್ರಭಾವಿಗಳು ಸದಾ ತೊಡಗಿಕೊಂಡಿರುತ್ತಾರೆ. ಇಂಥ ಹುಡುಕಾಟದ ಮಧ್ಯೆಯೇ ಏನಾದರೂ ಒಂದು ಯಡವಟ್ಟುಗಳು ಸಂಭವಿಸುವುದುಂಟು. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಈಕೆ ವೈಶಾಲಿ ಚೌಧರಿ ಎಂಬ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್. ತನ್ನ ಕಾರನ್ನು ಹೆದ್ದಾರಿಯ ಮಧ್ಯದಲ್ಲಿ ನಿಲ್ಲಿಸಿ ವಿಡಿಯೋ ಚಿತ್ರೀಕರಿದ್ದಾಳೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಪರಿಣಾಮವಾಗಿ ರೂ. 17,000 ದಂಡವನ್ನೂ ಆಕೆ ತೆರಬೇಕಾಗಿ ಬಂದಿದೆ.
ಲಕ್ಷಾಂತರ ಜನರು ಇಂದು ರೀಲ್ಸ್ಗಳ ಲೋಕದಲ್ಲಿ ಕಳೆದು ಹೋಗುತ್ತಿದ್ದಾರೆ. ಆದರೆ ಎಲ್ಲ ಸಂದರ್ಭದಲ್ಲಿಯೂ ಬರೀ ಲೈಕ್ಸ್, ಶೇರ್ಗಳಷ್ಟೇ ಸಿಗದೆ ನಿಯಮ ಮುರಿದಲ್ಲಿ ಕೆಲವೊಮ್ಮೆ ದಂಡವೂ ಸಿಗುತ್ತದೆ ಎನ್ನುವುದನ್ನು ಮಾತ್ರ ಮರೆಯಬಾರದು. ಇತ್ತೀಚೆಗೆ ಉತ್ತರ ಪ್ರದೇಶದ ಗಾಝಿಯಾಬಾದ್ನ ಇನ್ಸ್ಟಾಗ್ರಾಂನ ಪ್ರಭಾವಿ ವೈಶಾಲಿ ಚೌಧರಿ ರೀಲು ಮಾಡಿ ದಂಡ ತೆರಬೇಕಾದ ಅವಸ್ಥೆಗೆ ಸಿಲುಕಿಕೊಂಡಿದ್ದಾಳೆ. ರಸ್ತೆ ಸುರಕ್ಷತೆ ನಿಯಮಗಳ ಉಲ್ಲಂಘನೆಗಾಗಿ ಈಕೆಗೆ ಗಾಝಿಯಾಬಾದ್ ಪೊಲೀಸರು ದಂಡ ವಿಧಿಸಿದ್ದಾರೆ.
थाना साहिबाबाद क्षेत्रान्तर्गत एलिवेटिड रोड पर युवती द्वारा रील बनाते हुये सोशल मीडिया पर वायरल वीडियो के सम्बन्ध मे थाना साहिबाबाद पर अभियोग पंजीकृत किया गया है। अग्रिम विधिक कार्यवाही की जा रही है। ट्रैफिक पुलिस द्वारा उक्त कार का 17000 रु0 का चालान किया गया है-एसीपी साहिबाबाद pic.twitter.com/z0byqdvAt7
— POLICE COMMISSIONERATE GHAZIABAD (@ghaziabadpolice) January 22, 2023
ಇನ್ಸ್ಟಾಗ್ರಾಂನಲ್ಲಿ 6.5 ಲಕ್ಷಕ್ಕಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ ವೈಶಾಲಿ ಚೌಧರಿ ಹೆದ್ದಾರಿಯ ಮಧ್ಯೆ ಕಾರು ನಿಲ್ಲಿಸಿಕೊಂಡು ವಿವಿಧ ಭಂಗಿಗಳಲ್ಲಿ ವಿಡಿಯೋ ಶೂಟ್ ಮಾಡಿ ಇನ್ಸ್ಟಾಗ್ರಾಂಗೆ ಅಪ್ಲೋಡ್ ಮಾಡಿದ್ದಾಳೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡಿದ್ಧಾರೆ. ಈ ಘಟನೆ ಸಾಹಿಬಾಬಾದ್ನಲ್ಲಿ ನಡೆದಿದೆ.
ಒಳ್ಳೆಯದು ಮಾಡಿದರೂ ಇಡೀ ಜಗತ್ತಿಗೆ ಗೊತ್ತಾಗುತ್ತದೆ. ಎಡವಟ್ಟು ಮಾಡಿದರೂ ಇಡೀ ಜಗತ್ತಿಗೆ ಗೊತ್ತಾಗುತ್ತದೆ. ಏಕೆಂದರೆ ಸಾಮಾಜಿಕ ಜಾಲತಾಣಕ್ಕೆ ಇರುವುದು ಒಂದೇ ಬಾಗಿಲು!
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:22 pm, Mon, 23 January 23