Viral Video: ನೀನಾ-ನಾನಾ ನೋಡೇ ಬಿಡೋಣ; ಸಿಂಹ ಮತ್ತು ಕತ್ತೆಕಿರುಬ ಕಾಳಗದಲ್ಲಿ ಗೆದ್ದಿದ್ದು ಯಾರು ಗೊತ್ತಾ?

| Updated By: Rakesh Nayak Manchi

Updated on: Oct 16, 2022 | 6:03 PM

ಹಸಿದ ಸಿಂಹಕ್ಕೆ ಸಾಧು ಪ್ರಾಣಿಗಳು ಬೇಟೆಗೆ ಸಿಗದಿದ್ದಾಗ ಕಣ್ಣಿಗೆ ಬಿದ್ದಿದ್ದು ಪರಭಕ್ಷಕ ಕತ್ತೆಕಿರುಬ. ಇದರ ಮೇಲೆ ದಾಳಿ ನಡೆಸಿದ ಸಿಂಹ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಾಂತಾಯ್ತು.

Viral Video: ನೀನಾ-ನಾನಾ ನೋಡೇ ಬಿಡೋಣ; ಸಿಂಹ ಮತ್ತು ಕತ್ತೆಕಿರುಬ ಕಾಳಗದಲ್ಲಿ ಗೆದ್ದಿದ್ದು ಯಾರು ಗೊತ್ತಾ?
ಕತ್ತೆಕಿರುಬದ ಮೇಲೆ ಸಿಂಹದ ದಾಳಿ
Follow us on

ಸಿಂಹ ಬೇಟೆಯಾಡುವುದನ್ನು ಕಣ್ಣಾರೆ ಕಂಡಿಲ್ಲದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ನೋಡಿರುತ್ತೀರಿ. ಸಿಂಹಗಳು ಸಾದು ಪ್ರಾಣಿಗಳು, ದೊಡ್ಡ ಪ್ರಾಣಿಗಳನ್ನು ಮತ್ತು ಅಪಾಯಕಾರಿ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತವೆ. ಅದರ ಒಂದು ಘರ್ಜನೆ ಇಡೀ ಕಾಡನ್ನೇ ನಡುಗಿಸುತ್ತದೆ. ಪ್ರಾಣಿಗಳು ಅದರ ಮುಂದೆ ಹಾದುಹೋಗುವ ಮೊದಲು ನೂರು ಬಾರಿ ಯೋಚಿಸುತ್ತವೆ. ಏಕೆಂದರೆ ಬೇಟೆಯು ಅದರ ಮುಂದೆ ಹಾದು ಹೋದರೆ ಅದು ತನ್ನ ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅದಾಗ್ಯೂ ಕೆಲವೊಮ್ಮೆ ಸಿಂಹದ ಬೇಟೆ ಕೈತಪ್ಪುತ್ತದೆ. ಧೈರ್ಯವಿದ್ದರೆ ನೀವು ಯಾವುದೇ ದೊಡ್ಡ ಶತ್ರುವನ್ನು ಸೋಲಿಸಬಹುದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಬಲಿಷ್ಠ ಸಿಂಹದ ವಿರುದ್ಧ ಹೋರಾಡಿದ ಮತ್ತೊಂದು ಪರಭಕ್ಷಕ ಪ್ರಾಣಿ ಕತ್ತೆಕಿರುಬ, ಸಾವಿನ ದವಡೆಯಿಂದ ಪಾರಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.

ಸಿಂಹವೊಂದು ಬೇಟೆಯನ್ನು ಹುಡುಕಿಕೊಂಡು ಅಲ್ಲಿ ಇಲ್ಲಿ ಅಲೆದಾಡುತ್ತಿರುತ್ತದೆ. ಈ ವೇಳೆ ಕಣ್ಣಿಗೆ ಬಿದ್ದದ್ದು ಮತ್ತೊಂದು ಪರಭಕ್ಷಕ ಪ್ರಾಣಿ ಕತ್ತೆಕಿರುಬ. ಗಾತ್ರದಲ್ಲಿ ತನಗಿಂತ ಸಣ್ಣದಾಗಿದೆ ಸುಲಭವಾಗಿ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳಬಹುದೆಂದು ಅಂದುಕೊಂಡ ಸಿಂಹಕ್ಕೆ ಕತ್ತೆಕಿರುಬದ ಪ್ರತಿರೋಧದ ಬಗ್ಗೆ ಅರಿವಿಗೆ ಬರಲಿಲ್ಲ. ಹೀಗಾಗಿ ದಾಳಿ ನಡೆಸಿದ ಸಿಂಹ ಬಲಿಷ್ಠ ಹಲ್ಲುಗಳಿಂದ ಕೈ ಕಾಲುಗಳಿಂದ ಕತ್ತೆಕಿರುಬವನ್ನು ಹಿಡಿದಿದೆ. ಈ ವೇಳೆ ಕತ್ತೆಕಿರುಬದ ಪ್ರತಿರೋಧಕ್ಕೆ ಬೇಟೆ ಬಲಿಪಡೆಯುವುದು ಸಿಂಹಕ್ಕೆ ಕಷ್ಟಕರವಾಗಿದೆ. ತನ್ನ ಜೀವ ಉಳಿಸಿಕೊಳ್ಳಲು ತೀವ್ರ ಪೈಪೋಟಿ ನಿಡಿದ ಕತ್ತೆಕಿರುಬಾ ಕೊನೆಗೂ ಸಿಂಹದ ಬಾಯಿಯಿಂದ ತಪ್ಪಿಸಿ ಓಡಿಹೋಗಿದೆ. ಇದನ್ನು ಸಿಂಹ ಬೆನ್ನತ್ತುವುದನ್ನು ವಿಡಿಯೋದಲ್ಲಿ ಕಾಣಬಹುದು.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 5:05 pm, Sun, 16 October 22