
London: ಲಂಡನ್ನ ಪೆಕ್ಹ್ಯಾಮ್ನಲ್ಲಿರುವ ಅಂಗಡಿಯೊಂದರಲ್ಲಿ ಈ ಅಹಿತಕರ ನಡೆದಿದೆ. ಈ ಘಟನೆಯು ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ (CC Camera) ದಾಖಲಾಗಿದೆ. ಸೋಮವಾರ ಈ ಘಟನೆ ನಡೆದಿದ್ದು, ಕಪ್ಪು ಮಹಿಳೆಯೊಬ್ಬರು ಶಾಪಿಂಗ್ ಬ್ಯಾಸ್ಕೆಟ್ನಿಂದ ಅಂಗಡಿಯವನನ್ನು ಥಳಿಸಿದ್ದಾರೆ. ಆಗ ಅವನು ಆಕೆಯ ಕತ್ತು ಹಿಚುಕಿ ಉಸಿರುಗಟ್ಟಿಸಲು ಪ್ರಯತ್ನಿಸಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಈ ದೃಶ್ಯವು ಸ್ಥಳೀಯರನ್ನು ಕೆರಳಿಸಿದೆ. ಇವನ ಈ ನಡೆಯನ್ನು ಅವರು ವಿರೋಧಿಸಿದ್ದಾರೆ. 45 ವರ್ಷದ ಅಂಗಡಿ ಮಾಲಿಕನನ್ನು ಬಂಧಿಸದೇ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಹಾಗೆಯೇ ಆ ಮಹಿಳೆಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : Viral Video: ಜವಾನ ಜಮಾನಾ; ಕೀರ್ತಿ ಸುರೇಶ್, ಪ್ರಿಯಾ ಅಟ್ಲೀ ‘ಚಲೇಯಾ’ಗೆ ಡ್ಯಾನ್ಸ್; 5 ಮಿಲಿಯನ್ ವೀಕ್ಷಣೆ
ಬಿಬಿಸಿ ವಯದಿಯ ಪ್ರಕಾರ, ಈ ಘಟನೆ ನಡೆದ ಮರುದಿನ ಅಂದರೆ, ಮಂಗಳವಾರದಂದು ರೈ ಲೇನ್ನಲ್ಲಿ ಪೆಕ್ಹ್ಯಾಮ್ ಹೇರ್ ಅಂಡ್ ಕಾಸ್ಮೆಟಿಕ್ಸ್ ಅಂಗಡಿಯ ಹೊರಗೆ ನೂರಾರು ಜನರು ಪ್ರತಿಭಟಿಸಲು ಜಮಾಯಿಸಿದ್ದರು. ಕಪ್ಪು ಮಹಿಳೆಯ ಮೇಲೆ ಕಳ್ಳತನದ ಆರೋಪ ಹೊರಿಸಿದ್ದನ್ನು ಅವರು ಖಂಡಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಎಡಿಟ್ ಮಾಡಿದ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ ಎಂದು ಅಂಗಡಿಯವ ಹೇಳಿದ್ದಾನೆ.
ಸದ್ಯಕ್ಕೆ ಈ ಅಂಗಡಿಯನ್ನು ಮುಚ್ಚಲಾಗಿದೆ. ಅಂಗಡಿಯಲ್ಲಿ ಖರೀದಿಸಿದ ಉತ್ಪನ್ನಗಳನ್ನು ಮರುಪಾವತಿ ಮಾಡಲು ಆಕೆ ಕೇಳಿಕೊಂಡಾಗ ಅಂಗಡಿಯವ ನಿರಾಕರಿಸಿದ್ಧಾನೆ. ಆಗ ಆಕೆ ಆಕ್ರಮಣಕಾರಿಯಾಗಿ ವರ್ತಿಸಿದ್ದಾಳೆ ಎಂದು ಅಂಗಡಿಯ ಮಾಲಿಕ ಹೇಳಿದ್ದಾನೆ. ತಮ್ಮ ಅಂಗಡಿಯಲ್ಲಿ ಮರುಪಾವತಿ ಮಾಲಡಾಗುವುದಿಲ್ಲ. ಆದರೆ ವಸ್ತುಗಳನ್ನು ವಿನಿಯಮ ಮಾಡಿಕೊಳ್ಳಲಾಗುತ್ತದೆ ಅಥವಾ ಕ್ರೆಡಿಟ್ ನೋಟ್ ನೀಡಲಾಗುತ್ತದೆ. ಆಗ ಆಕೆ ಮೂರು ಹೇರ್ ಎಕ್ಸ್ಟೆನ್ಷನ್ ಪ್ಯಾಕ್ ಹಿಡಿದು ಹೊರಡಲು ಪ್ರಯತ್ನಿಸಿದಳು. ಆಗ ನಾನು ತಡೆಯಬೇಕಾಯಿತು.
ಆಗ ಆಕೆ ನನ್ನ ಮುಖಕ್ಕೆ ತಲೆಗೆ ಶಾಪಿಂಗ್ ಬ್ಯಾಸ್ಕೆಟ್ನಿಂದ ನನ್ನನ್ನು ಹೊಡೆಯತೊಡಗಿದಳು. ನನಗರಿವಿಲ್ಲದೆಯೇ ಅವಳ ಕುತ್ತಿಗೆಯನ್ನು ನನ್ನ ಕೈಗಳು ಹಿಡಿದುಕೊಂಡವು. ಆಕೆಯನ್ನು ಸುಮ್ಮನಿರಿಸುವುದು ನನ್ನ ಉದ್ದೇಶವಾಗಿತ್ತೇ ಹೊರತು ಹೊಡೆಯುವುದು ಖಂಡಿತ ಅಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇರುವ ಎಡಿಟೆಡ್ ವಿಡಿಯೋಗಳನ್ನು ನೋಡಿ ಜನರು ತೋಚಿದಂತೆ ಪ್ರತಿಕ್ರಿಯಿಸುತ್ತಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ