ಮುಂಬೈ: ಪ್ರಾಣಿಗಳಿಗೆ ಮನುಷ್ಯರಂತೆ ಮಾತನಾಡಲು ಸಾಧ್ಯವಾಗದಿದ್ದರೂ ಅವರು ತೋರುವ ಪ್ರೀತಿ ಮನುಷ್ಯರಿಗಿಂತ ಏನೂ ಕಡಿಮೆಯಿಲ್ಲ. ಮೂಕ ಪ್ರಾಣಿಗಳಿಗೆ ಸ್ವಲ್ಪ ಪ್ರೀತಿ ತೋರಿಸಿದರೂ ಅವು ನಿಯತ್ತಿನಿಂದ ಇರುತ್ತವೆ. ಬಾಯಾರಿದ್ದ ಕೋತಿಗೆ (Monkey) ನೀರು ನೀಡುತ್ತಿರುವ ಮಹಾರಾಷ್ಟ್ರದ ಪೊಲೀಸರ ವಿಡಿಯೋವೊಂದು ವೈರಲ್ (Video Viral) ಆಗಿದ್ದು, ಭಾರೀ ಮೆಚ್ಚುಗೆ ಗಳಿಸಿದೆ. ಈ ಹೃದಯಸ್ಪರ್ಶಿ ವೀಡಿಯೊದಲ್ಲಿ, ಪೋಲೀಸ್ ಅಧಿಕಾರಿಯೊಬ್ಬರು ಕೋತಿಗೆ ನೀರು ಕುಡಿಯಲು ನೀರಿನ ಬಾಟಲಿಯನ್ನು ಹಿಡಿದಿರುವುದನ್ನು ಕಾಣಬಹುದು. StreetDogsofBombay ಎಂಬ ಇನ್‌ಸ್ಟಾಗ್ರಾಮ್ (Instagram Video) ಪೇಜ್ ಈ ವೀಡಿಯೊವನ್ನು ಹಂಚಿಕೊಂಡಿದೆ
ಬಾಯಾರಿದ ಕೋತಿಗಳಿಗೆ ಟ್ರಾಫಿಕ್ ಪೊಲೀಸರು ನೀರು ನೀಡುತ್ತಿರುವ ವಿಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಮುಂಬೈ-ಅಹಮದಾಬಾದ್ ಮಾರ್ಗದ ಮಲ್ಶೆಜ್ ಘಾಟ್‌ನಲ್ಲಿ ನಿಂತಿದ್ದ ಟ್ರಾಫಿಕ್ ಪೊಲೀಸರು ಹತ್ತಿರದ ಕಾಡುಗಳಿಂದ ರಸ್ತೆಯಲ್ಲಿ ಸಾಗುವ ಪ್ರಾಣಿಗಳಿಗೆ ನೀಡಲು ಹಲವಾರು ನೀರಿನ ಬಾಟಲಿಗಳನ್ನು ಒಯ್ಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಬೇಸಿಗೆಯ ಬಿಸಿಯು ಹೆಚ್ಚುತ್ತಿದೆ ಮತ್ತು ಮಾತು ಬಾರದ ಮೂಕಪ್ರಾಣಿಗಳು ನೀರಿಗಾಗಿ ಹುಡುಕುತ್ತಿದ್ದಾರೆ. ಆದ್ದರಿಂದ ದಯವಿಟ್ಟು ನಿಮ್ಮ ಮನೆಯ ಹೊರಗೆ ನೀರಿನ ಬಟ್ಟಲುಗಳನ್ನು ಇರಿಸಿ ಮತ್ತು ಬಿಸಿಲ ಧಗೆಯಿಂದ ಅವುಗಳನ್ನು ಕಾಪಾಡಿ. ಯಾರಾದರೂ ಉಳಿದ ಆಹಾರವನ್ನು ನೀಡಬಹುದೆಂಬ ಭರವಸೆಯೊಂದಿಗೆ ಯಾವುದೇ ಅಂಗಡಿ/ಹೋಟೆಲ್‌ಗಳ ಬಳಿ ನಾಯಿ, ಕೋತಿಗಳು ಗಂಟೆಗಟ್ಟಲೆ ನಿಲ್ಲುವುದನ್ನು ನಾವು ಆಗಾಗ ನೋಡುತ್ತೇವೆ. ಆಹಾರವನ್ನು ಖರೀದಿಸಲು ಹಣ ಬೇಕು ಎಂದು ಅವುಗಳಿಗೆ ತಿಳಿದಿಲ್ಲ. ಮತ್ತೊಂದೆಡೆ ಜನರು ಉತ್ತಮ ತಳಿಯ ನಾಯಿಗಳು ಮತ್ತು ಬೀದಿನಾಯಿಗಳ ನಡುವೆ ತಾರತಮ್ಯ ಮಾಡುತ್ತಾರೆ. ದಾರಿ ತಪ್ಪಿದ ನಾಯಿಗಳನ್ನು ಹೀನಾಯವಾಗಿ ನೋಡಲಾಗುತ್ತಿದೆ. ಆ ರೀತಿ ಮಾಡಬೇಡಿ. ಎಲ್ಲ ಪ್ರಾಣಿಗಳಿಗೂ ಜೀವವಿರುತ್ತದೆ ಎಂಬುದನ್ನು ಮರೆಯಬೇಡಿ ಎಂದು ಈ ವಿಡಿಯೋ ಶೇರ್ ಮಾಡಿದವರು ಕ್ಯಾಪ್ಷನ್ನಲ್ಲಿ ಬರೆದಿದ್ದಾರೆ.
ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪೊಲೀಸರು ದಯೆ ಮತ್ತು ಸಹಾನುಭೂತಿಯ ಭಾವನೆಯಿಂದ ಜನರು ಪ್ರಭಾವಿತರಾಗಿದ್ದಾರೆ. ಈ ವಿಡಿಯೋ ಹಳೆಯದಾ ಅಥವಾ ಹೊಸತಾ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: Viral Video: ಹೊಲದಲ್ಲಿ ಕರಡಿ ವೇಷ ಹಾಕಿ ಓಡಾಡಿದರೆ ತಿಂಗಳಿಗೆ 15,000 ರೂ. ಸಂಬಳ!
Viral Video: ಕೊಳಕ್ಕೆ ಬೀಳುತ್ತಿದ್ದ ಮಗುವಿನ ಪ್ರಾಣ ಉಳಿಸಿದ ಶ್ವಾನ; ಸಾಕು ನಾಯಿಯ ಜಾಣತನಕ್ಕೆ ನೆಟ್ಟಿಗರು ಫಿದಾ