AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪೊಲೀಸ್ ಅಧಿಕಾರಿಯ ಕುರ್ಚಿಯಲ್ಲಿ ಕುಳಿತು ಕೇಸ್ ಡೈರಿ ಕೇಳಿದ ಬಿಜೆಪಿ ಶಾಸಕ; ವಿಡಿಯೋ ವೈರಲ್

ಕೆಲವು ದಿನಗಳ ಹಿಂದೆ ಬಿಜೆಪಿ ಶಾಸಕ ಮುರಾರಿ ಮೋಹನ್ ಝಾ ತಮ್ಮ ಕ್ಷೇತ್ರಕ್ಕೆ ತೆರಳಿದ್ದಾಗ ಪೊಲೀಸರು ಇಬ್ಬರನ್ನು ಥಳಿಸಿದ ಘಟನೆಯ ಬಗ್ಗೆ ಅವರಿಗೆ ಮಾಹಿತಿ ಲಭ್ಯವಾಗಿತ್ತು. ಇದರಿಂದ ಅವರು ಕೆರಳಿದ್ದರು.

Viral Video: ಪೊಲೀಸ್ ಅಧಿಕಾರಿಯ ಕುರ್ಚಿಯಲ್ಲಿ ಕುಳಿತು ಕೇಸ್ ಡೈರಿ ಕೇಳಿದ ಬಿಜೆಪಿ ಶಾಸಕ; ವಿಡಿಯೋ ವೈರಲ್
ಪೊಲೀಸ್ ಕುರ್ಚಿಯಲ್ಲಿ ಕುಳಿತ ಬಿಜೆಪಿ ಶಾಸಕ
TV9 Web
| Updated By: ಸುಷ್ಮಾ ಚಕ್ರೆ|

Updated on:Apr 02, 2022 | 4:25 PM

Share

ಬಿಹಾರ: ಬಿಹಾರದ ಬಿಜೆಪಿ ಶಾಸಕ ಮುರಾರಿ ಮೋಹನ್ ಝಾ (Murari Mohan Jha) ದರ್ಭಾಂಗಾ ಜಿಲ್ಲೆಯ ಕಿಯೋಟಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಕುರ್ಚಿಯ ಮೇಲೆ ಕುಳಿತು ಪ್ರಕರಣವೊಂದಕ್ಕೆ ಸಂಬಂಧಿಸಿದ ಸ್ಟೇಷನ್ ಡೈರಿಯನ್ನು ನೋಡಬೇಕೆಂದು ಪೊಲೀಸ್​​ಗೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕೆಲವು ದಿನಗಳ ಹಿಂದೆ ಬಿಜೆಪಿ ಶಾಸಕ ಮುರಾರಿ ಮೋಹನ್ ಝಾ ತಮ್ಮ ಕ್ಷೇತ್ರಕ್ಕೆ ತೆರಳಿದ್ದಾಗ ಪೊಲೀಸರು ಇಬ್ಬರನ್ನು ಥಳಿಸಿದ ಘಟನೆಯ ಬಗ್ಗೆ ಅವರಿಗೆ ಮಾಹಿತಿ ಲಭ್ಯವಾಗಿತ್ತು. ಇದರಿಂದ ಕೆರಳಿದ ಬಿಜೆಪಿ ಶಾಸಕ ಪೊಲೀಸ್ ಠಾಣೆಗೆ ಆಗಮಿಸಿ ಆ ಪ್ರಕರಣಕ್ಕೆ ಸಂಬಂಧಿಸಿದ ಸ್ಟೇಷನ್ ಡೈರಿ ಕೇಳಿದ್ದಾರೆ.

ಹಲವಾರು ಸ್ಥಳೀಯ ಪತ್ರಕರ್ತರು ಸ್ಥಳದಲ್ಲೇ ಇದ್ದುದರಿಂದ ಸ್ಟೇಷನ್ ಡೈರಿಯನ್ನು ಸಾರ್ವಜನಿಕವಾಗಿ ತೋರಿಸಲು ಸಾಧ್ಯವಿಲ್ಲ ಎಂದು ಎಸ್‌ಎಚ್‌ಒ ಶಾಸಕರಿಗೆ ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಬಿಜೆಪಿ ನಾಯಕ ಅದನ್ನು ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ.

ಇಂದು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಈ ವಿಡಿಯೋವನ್ನು ಟ್ವೀಟ್ ಮಾಡಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಮೆನ್ಷನ್ ಮಾಡಿದ್ದಾರೆ. ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಸರ್ಕಸ್ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮುರಾರಿ ಮೋಹನ್ ಝಾ ಅವರು ಬಿಹಾರದಲ್ಲಿ 2020ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಿಯೋಟಿ ಕ್ಷೇತ್ರದಿಂದ ಆರ್‌ಜೆಡಿ ಧೀಮಂತ ಮತ್ತು ಮಾಜಿ ಸಚಿವ ಅಬ್ದುಲ್ ಬಾರಿ ಸಿದ್ದಿಕಿ ಅವರನ್ನು ಸೋಲಿಸಿ ಗಮನ ಸೆಳೆದಿದ್ದರು.

ಇದನ್ನೂ ಓದಿ: Viral Video: ಹೊಲದಲ್ಲಿ ಕರಡಿ ವೇಷ ಹಾಕಿ ಓಡಾಡಿದರೆ ತಿಂಗಳಿಗೆ 15,000 ರೂ. ಸಂಬಳ!

Viral Video: ಸೇಬು, ಚಿಕ್ಕು, ಬಾಳೆಹಣ್ಣು ಹಾಕಿ ಟೀ ಮಾಡಿದ ಚಾಯ್​ವಾಲ; ವಿಡಿಯೋ ನೋಡಿ ನೆಟ್ಟಿಗರು ಸುಸ್ತು!

Published On - 4:24 pm, Sat, 2 April 22