ಕೆಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅದೆಷ್ಟೋ ವಿಡಿಯೋಗಳು ಆಶ್ಚರ್ಯವನ್ನುಂಟು ಮಾಡುತ್ತವೆ. ಸಾಮಾನ್ಯವಾಗಿ ಹಾವು ಅಂದಾಕ್ಷಣ ಹೆದರಿಕೆ ಇಲ್ಲದೇ ಇರುತ್ಯೆ? ನಿದ್ದೆಗಣ್ಣಲ್ಲೂ ಸಹ ಹಾವಿನ ಹೆಸರು ಕೇಳಿದಾಕ್ಷಣ ಎಚ್ಚೆತ್ತು ಕುಳಿತವರೂ ಇದ್ದಾರೆ. ಹಾವು ಎದುರು ಕಂಡಾಕ್ಷಣ ಹೆದರಿ ದೂರ ಓಡುವವರೂ ಇದ್ದಾರೆ. ಆದರೆ ಇಲ್ಲೋರ್ವ ಮಾತ್ರ ದೈತ್ಯ ನಾಗರ ಹಾವಿಗೆ ಸ್ನಾನ ಮಾಡಿಸುತ್ತಿರುವಂತೆ ಅನಿಸುತ್ತಿದೆ. ಬಕೆಟ್ನಲ್ಲಿ ಹಿಡಿದ ನೀರನ್ನು ಹಾವಿನ ತಲೆಯ ಮೇಲೆ ಸುರಿದಿದ್ದಾನೆ. ಶಾಕಿಂಗ್ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ಬಿಸಿಲಿನ ಬೇಗೆಗೆ ಹಾವು ದಣಿದಿತ್ತು, ಜತೆಗೆ ಬಾಯಾರಿತ್ತು ಎಂದು ಹೇಳಲಾಗುತ್ತಿದೆ. ದೈತ್ಯ ಹಾವು ಓರ್ವರ ಮನೆಯ ಹಿತ್ತಲಿನ ಬಳಿ ಇದ್ದ ನಲ್ಲಿಯ ಹತ್ತಿರ ಬಂದು ನಿಂತಿದೆ. ಹಾವನ್ನು ನೋಡಿದ ಜನರೆಲ್ಲಾ ಕಿತ್ತಾಪಾಲಾಗಿ ಓಡಿದ್ದಾರೆ. ಆದರೆ ಓರ್ವ ಮಾತ್ರ ಬಕೆಟ್ನಲ್ಲಿ ತಣ್ಣನೇಯ ನೀರು ಹಿಡಿದು ಹಾವಿನ ಮೈ ಮೇಲೆ ಸುರಿದಿದ್ದಾನೆ. ಅದಾಗ್ಯೂ ಕೂಡಾ ಆತ ಯಾವುದೇ ಹೆದರಿಕೆ ಇಲ್ಲದೇ ಈ ಕೆಲಸಕ್ಕೆ ಮುಂದಾಗಿದ್ದಾನೆ. ಬಾಯಾರಿದ ಹಾವಿಗೆ ನೀರು ಕೊಟ್ಟ ವ್ಯಕ್ತಿಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಇನ್ನು ಕೆಲವರು ಭಯಾನಕ ದೃಶ್ಯ ಎಂದು ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ನಾನಾ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಹಾವಿಗೆ ಸಹಾಯ ಮಾಡಿದ್ದಕ್ಕಾಗಿ ಆ ವ್ಯಕ್ತಿಗೆ ಕೆಲವರು ಧನ್ಯವಾದ ಹೇಳಿದ್ದಾರೆ. ಇನ್ನು ಕೆಲವರು ಆಶ್ಚರ್ಯಗೊಂಡಿದ್ದು, ಆತನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ಹಳೆಯ ವಿಡಿಯೋವಾಗಿದ್ದರೂ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏತನ್ಮಧ್ಯೆ, ಅಂತಹ ವಿಷಕಾರಿ ಜೀವಿಗಳನ್ನು ನಿಯಂತ್ರಿಸಲು ಪರಿಣಿತರಾಗಿರಬೇಕು ಜತೆಗೆ ಯಾವುದೇ ತರಬೇತಿ ಇಲ್ಲದೇ ನೀವು ಇಂತಹ ಕೆಲಸಗಳನ್ನು ಪ್ರಯತ್ನಿಸಬಾರದು ಎಂಬುದನ್ನು ಗಮನಿಸಲೇಬೇಕು.
ಇದನ್ನೂ ಓದಿ:
Published On - 9:08 am, Thu, 7 October 21