ನವದೆಹಲಿ: ಭಾರತದಲ್ಲಿ ದಿನವೂ ಲಕ್ಷಾಂತರ ಜನರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಕೆಳ ಮತ್ತು ಮಧ್ಯಮ ವರ್ಗದವರಿಗೆ ರೈಲು ಪ್ರಯಾಣ ಬಹಳ ಅಗ್ಗದ ಪ್ರಯಾಣವಾದ್ದರಿಂದ ಬಸ್, ಆಟೋ, ಕಾರುಗಳ ಬದಲು ರೈಲು ಸಂಚಾರಕ್ಕೇ ಹೆಚ್ಚು ಆದ್ಯತೆ ನೀಡುತ್ತಾರೆ. ರೈಲು ಪ್ರಯಾಣ ಸುರಕ್ಷಿತವಾದರೂ ಕೆಲವೊಮ್ಮೆ ರೈಲಿನಲ್ಲೂ ಅಪಘಾತಗಳು ಸಂಭವಿಸುತ್ತವೆ. ಚಲಿಸುವ ರೈಲನ್ನು ಹತ್ತಲು ಹೋಗಿ ಬಿದ್ದವರು, ಚಲಿಸುವ ರೈಲಿನಿಂದ ಕೆಳಗೆ ಇಳಿಯುವಾಗ ಆಯ ತಪ್ಪಿ ಬಿದ್ದವರು, ಅಚಾನಕ್ಕಾಗಿ ರೈಲಿನ ಚಕ್ರದಡಿ ಸಿಲುಕಿದವರು ಹೀಗೆ ಅಪಘಾತಗಳು ಉಂಟಾಗುತ್ತಲೇ ಇರುತ್ತವೆ.
ಇಂತಹ ಒಂದು ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾನೆ. ಅದರಿಂದ ಅವನ ಪ್ರಾಣವೇ ಹೋಗುವ ಸಾಧ್ಯತೆಯಿತ್ತು. ಆದರೆ ಹೀರೋ ರೀತಿ ಪೋಲೀಸ್ ಒಬ್ಬರು ಓಡಿ ಬಂದು ಆತನ ಪ್ರಾಣ ಉಳಿಸಿದ್ದಾರೆ. ಈ ವಿಡಿಯೋ ನೋಡಿದವರು ಪೊಲೀಸ್ ಸಿಬ್ಬಂದಿಯ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋ ತುಣುಕಿನಲ್ಲಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಕಾನ್‌ಸ್ಟೆಬಲ್ ನೇತ್ರಪಾಲ್ ಸಿಂಗ್ ತನ್ನ ಸಮಯಪ್ರಜ್ಞೆಯಿಂದ ವ್ಯಕ್ತಿಯ ಜೀವವನ್ನು ಉಳಿಸುವುದನ್ನು ಕಾಣಬಹುದು. ಈ ವಿಡಿಯೋವನ್ನು ಸುದ್ದಿ ಸಂಸ್ಥೆ ಎಎನ್‌ಐ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದೆ.
#WATCH | Maharashtra: Railway Protection Force (RPF) constable Netrapal Singh saved the life of a passenger by saving him from falling into the gap between the platform and the train at Wadala station in Mumbai today.
(Video source: Central Railway PRO) pic.twitter.com/N2wCKvUWsb
— ANI (@ANI) March 13, 2022
ಚಲಿಸುತ್ತಿರುವ ರೈಲಿನ ತೆರೆದ ಬಾಗಿಲಿನಿಂದ ಒಬ್ಬ ವ್ಯಕ್ತಿ ಪ್ಲಾಟ್‌ಫಾರ್ಮ್‌ಗೆ ಬೀಳುತ್ತಿದ್ದಾನೆ. ಆ ವ್ಯಕ್ತಿ ಚಲಿಸುತ್ತಿದ್ದ ರೈಲಿಗೆ ಸಿಲುಕಿದ್ದಾನೆ. ಅಷ್ಟರಲ್ಲಿ ಓಡಿಬಂದ ರೈಲ್ವೆ ಸಿಬ್ಬಂದಿ ಆತನನ್ನು ಎಳೆದುಕೊಂಡು ರೈಲ್ವೆ ಪ್ಲಾಟ್ಫಾರ್ಮ್ ಮೇಲೆ ಹಾಕಿದ್ದಾರೆ. ರೈಲ್ವೆ ಸಿಬ್ಬಂದಿ ನೇತ್ರಪಾಲ್ ಸಿಂಗ್ ಸಮಯಪ್ರಜ್ಞೆಯಿಂದಾಗಿ ಆತ ಚಲಿಸುವ ರೈಲಿನಡಿ ಸಿಲುಕಿ ಪ್ರಾಣ ಕಳೆದುಕೊಳ್ಳುವುದು ತಪ್ಪಿದಂತಾಗಿದೆ.
ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ ನಂತರ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ 33,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಲವಾರು ಬಾರಿ ಹಂಚಿಕೊಳ್ಳಲಾಗಿದೆ. ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಿದ ಪೋಲೀಸರ ಪ್ರಯತ್ನವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: Viral Video: ಸತ್ತ ಗೆಳೆಯನನ್ನು ಹೂಳಲು ತಾವೇ ಬಾಯಿಯಿಂದ ಮಣ್ಣು ತೋಡಿದ ನಾಯಿಗಳು; ಕಣ್ತುಂಬುವ ವಿಡಿಯೋ ಇಲ್ಲಿದೆ