Viral Video: ರೈಲಿನಲ್ಲಿ ಮಹಿಳೆಯ ಸರ ಕಸಿದುಕೊಳ್ಳಲು ಯತ್ನ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

|

Updated on: Mar 27, 2024 | 6:00 PM

ಇಬ್ಬರು ವಯಸ್ಸಾದ ಮಹಿಳೆಯರನ್ನು ಕಂಡ ಕಳ್ಳ ಹಿಂದಿದ್ದ ವೃದ್ದೆಯ ಕತ್ತಿನ ಸರ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಇದಕ್ಕಿದ್ದಂತೆ ಕಳ್ಳ ರೈಲಿನಿಂದ ಕೆಳಗೆ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Viral Video: ರೈಲಿನಲ್ಲಿ ಮಹಿಳೆಯ ಸರ ಕಸಿದುಕೊಳ್ಳಲು ಯತ್ನ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ
ಸಿಸಿಟಿವಿ ದೃಶ್ಯ
Follow us on

ಚಲಿಸುತ್ತಿರುವ ರೈಲಿನಲ್ಲಿ ವ್ಯಕ್ತಿಯೊಬ್ಬ ವೃದ್ಧ ಮಹಿಳೆಯ ಸರ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಈ ದೃಶ್ಯ ನೋಡಿದರೆ ನೀವು ಕೂಡ ರೈಲಿನಲ್ಲಿ ಹೋಗಲು ಹೆದರುವುದಂತೂ ಖಂಡಿತಾ.

ರೈಲಿನಲ್ಲಿ ಪ್ರಯಾಣಿಸುವಾಗ ಜಾಗರೂಕರಾಗಿರಿ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ವೀಡಿಯೊದಲ್ಲಿ,ಕಳ್ಳ ರೈಲಿನ ಬಾಗಿಲ ಬಳಿ ನಿಂತಿರುವುದನ್ನು ಕಾಣಬಹುದು. ರೈಲು ಕಂಪಾರ್ಟ್‌ಮೆಂಟ್‌ಗಳ ಮೂಲಕ ನಿಧಾನವಾಗಿ ಸಾಗುತ್ತಿದ್ದ ಇಬ್ಬರು ವಯಸ್ಸಾದ ಮಹಿಳೆಯರನ್ನು ಕಂಡ ಕಳ್ಳ ಹಿಂದಿದ್ದ ವೃದ್ದೆಯ ಕತ್ತಿನ ಸರ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಇದಕ್ಕಿದ್ದಂತೆ ರೈಲಿನಿಂದ ಕೆಳಗೆ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ: ಆಯುಧಗಳ ಸ್ವಚ್ಛಗೊಳಿಸುತ್ತಿರುವಾಗ ಪ್ರಮಾದ, ಎಕೆ-47ನಿಂದ ಗುಂಡು ಹಾರಿಸಿಕೊಂಡ ಕಮಾಂಡರ್

@rnsaai ಎಂಬ ಟ್ವಿಟರ್​​ ಖಾತೆಯಲ್ಲಿ ಮಾರ್ಚ್​​​ 26ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ 2.5ಮಿಲಿಯನ್​ ವೀಕ್ಷಣೆಯನ್ನು ಪಡೆದುಕೊಂಡಿದೆ. “ಯಾವಾಗಲೂ ನಿಮ್ಮ ವಸ್ತುಗಳನ್ನು ಸುರಕ್ಷಿತವಾಗಿರಿಸಿ ಮತ್ತು ನಿಮ್ಮ ಸುತ್ತಮುತ್ತಲಿನ ಬಗ್ಗೆ ಎಚ್ಚರದಿಂದಿರಿ. ಪ್ರಯಾಣ ಮಾಡುವಾಗ ಜಾಗರೂಕತೆ ಮುಖ್ಯವಾಗಿದೆ” ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ