Viral Video: ರೈಲಿನಲ್ಲಿ ಪ್ರಯಾಣಿಸುವ ಮೊದಲು ಪ್ರತಿಯೊಬ್ಬ ಪ್ರಯಾಣಿಕರು ಈ ನಿಯಮಗಳನ್ನು ತಿಳಿದಿರಬೇಕು

ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ರೈಲ್ವೆಯ  ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗುತ್ತದೆ. ಏನಾದ್ರೂ ನಿಯಮ ಮುರಿದ್ರೆ  ತಕ್ಕ ಶಿಕ್ಷೆ ಗ್ಯಾರಂಟಿ. ಹೀಗೆ ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ರೈಲ್ವೆ ಕೆಲವು ನಿಯಮಗಳನ್ನು ಮಾಡಿದೆ. ಆ  ಮುಖ್ಯ ನಿಯಮಗಳು ಯಾವುವು ಎಂಬ ಮಾಹಿತಿ ಇಲ್ಲಿದೆ. 

Viral Video: ರೈಲಿನಲ್ಲಿ ಪ್ರಯಾಣಿಸುವ ಮೊದಲು ಪ್ರತಿಯೊಬ್ಬ ಪ್ರಯಾಣಿಕರು ಈ ನಿಯಮಗಳನ್ನು ತಿಳಿದಿರಬೇಕು
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 28, 2024 | 10:21 AM

ರೈಲು ಪ್ರಯಾಣವು ತುಂಬಾ ಆರಾಮದಾಯಕವಾಗಿರುತ್ತದೆ, ಖರ್ಚು ಕಡಿಮೆ ಎಂಬ ಕಾರಣಕ್ಕೆ ಹೆಚ್ಚಿನವರು ರೈಲಿನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ನೀವು ಕೂಡಾ ರೈಲಿನಲ್ಲಿ ಪ್ರಯಾಣಿಸುವವರಾಗಿದ್ರೆ, ರೈಲ್ವೆ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.  ಪ್ರತಿಯೊಬ್ಬ ಪ್ರಯಾಣಿಕನ ಅನುಕೂಲಕ್ಕಾಗಿ ರೈಲ್ವೆಯು  ನಿಯಮಗಳನ್ನು ರೂಪಿಸುತ್ತದೆ. ಅದನ್ನು ಅನುಸರಿಸುವುದು ಪ್ರತಿಯೊಬ್ಬ ಪ್ರಯಾಣಿಕನ   ಕರ್ತವ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ  ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ರೈಲ್ವೆಯ ಈ ಕೆಲವು  ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಿಳಿದಿರಬೇಕಾದ ರೈಲ್ವೆ ನಿಯಮಗಳೆಂದರೆ;

• ರಾತ್ರಿ 10 ಗಂಟೆಯ ಬಳಿಕ ಪ್ರಯಾಣಿಕರಿಗೆ ಯಾವುದೇ ಕಾರಣಕ್ಕೂ ತೊಂದರೆ ಕೊಡುವಂತಿಲ್ಲ.  ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಟಿಟಿಇ ಪ್ರಯಾಣಿಕರ ಬಳಿ ಟಿಕೆಟ್ ಇಲ್ಲದಿದ್ರೂ ಅವರಿಗೆ ಯಾವುದೇ ರೀತಿಯ ತೊಂದರೆ ಕೊಡುವಂತಿಲ್ಲ. ಮುಖ್ಯವಾಗಿ ಈ ಸಮಯದಲ್ಲಿ ಟಿಟಿಇ ಪ್ರಯಾಣಿಕರ  ಟಿಕೆಟ್  ಪರಿಶೀಲಿಸುವಂತಿಲ್ಲ.  ಹಾಗಾಗಿಯೇ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಟಿಕೆಟ್ ಪರಿಶೀಲಿಸಲು ಆದೇಶ ನೀಡಲಾಗಿದೆ.

• ಯಾವುದಾದರೂ ಕಾರಣಗಳಿಂದ ಟ್ರೈನ್ ಮಿಸ್ ಆದ್ರೆ, ಟಿಕೆಟ್ ಹಣವನ್ನು ರೈಲ್ವೆ ಸ್ಟೇಷನ್ ಕೌಂಟರ್ ಅಲ್ಲಿ ರೀಫಂಡ್ ಮಾಡಬಹುದು. ಜೊತೆಗೆ ನೀವು ಬುಕ್ ಮಾಡಿದ ರೈಲು  ಬರಲು ಮೂರು ತಾಸಿಗಿಂತಲೂ ಹೆಚ್ಚು  ತಡವಾದರೆ, ಆ ಸಂದರ್ಭದಲ್ಲೂ  ಟಿಕೆಟ್ ಹಣವನ್ನು ಸಂಪೂರ್ಣವಾಗಿ ರೀಫಂಡ್ ಮಾಡಬಹುದಾಗಿದೆ.

• ರೈಲು ಚಲಿಸುವ ಸಮಯದಲ್ಲಿ ಸುಖಾಸುಮ್ಮನೆ  ಅಲಾರಾಂ ಚೈನ್ ಎಳೆಯುವಂತಿಲ್ಲ. ಭಾರತೀಯ ರೈಲ್ವೆಯ ಪ್ರಕಾರ ಯಾವುದಾದರೂ ಮುಖ್ಯ ವಸ್ತುಗಳನ್ನು ರೈಲ್ವೆ ಸ್ಟೇಷನ್ ಅಲ್ಲಿ ಮರೆತು ಹೋದರೆ, ವೈದ್ಯಕೀಯ ತುರ್ತು ಪರಿಸ್ಥಿತಿ, ಮಗು, ವೃದ್ಧರು ಅಥವಾ ಅಂಗವಿಕಲ ವ್ಯಕ್ತಿಯನ್ನು ಬಿಟ್ಟು ಹೋದಂತಹ ತುತ್ತು ಸಂದರ್ಭದಲ್ಲಿ ಮಾತ್ರ ನೀವು ಚೈನ್ ಎಳೆಯಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

• ನಾಲ್ಕನೇಯ ನಿಯಮವೇನಂದ್ರೆ,  ರೈಲಿನಲ್ಲಿ ಲಗೇಜ್ ಇಡುವಂತಹ ಸ್ಥಳದಲ್ಲಿ  ರಾತ್ರಿ 10 ಗಂಟೆಯ ನಂತರ ಮಲಗುವಂತಿಲ್ಲ. ಇದು ರೈಲ್ವೆ ನಿಯಮಕ್ಕೆ ಸಂಪೂರ್ಣ ವಿರುದ್ಧವಾಗಿದೆ.

• ರೈಲ್ವೆಯ ಮತ್ತೊಂದು ನಿಯಮವೆಂದರೆ ರಾತ್ರಿ 10 ಗಂಟೆಯ ನಂತರ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಲೈಟ್ ಆನ್ ಮಾಡುವಂತಿಲ್ಲ.  ಅಷ್ಟೇ ಅಲ್ಲದೆ  ರಾತ್ರಿ 10 ಗಂಟೆಯ ನಂತರ ಫೋನಿನಲ್ಲಿ ಜೋರು ಧ್ವನಿಯಲ್ಲಿ ಮಾತನಾಡುವಂತಿಲ್ಲ, ಜೋರಾಗಿ ಹಾಡುಗಳನ್ನು ಪ್ಲೇ ಮಾಡುವಂತಿಲ್ಲ.

ಇದನ್ನೂ ಓದಿ: ಇದಪ್ಪಾ ಅದೃಷ್ಟ ಅಂದ್ರೆ; 10 ಕೋಟಿ ರೂ. ಲಾಟರಿ ಗೆದ್ದು ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕಣ್ಣೂರಿನ ಆಟೋ ಚಾಲಕ

ಈ ಇನ್ಫಾರ್ಮೇಟಿವ್ ವಿಡಿಯೋವನ್ನು ರಕ್ಷಾ ಬೆಳ್ಳಿ (@rakshabelli11) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಎಲ್ಲರಿಗೂ ಗೊತ್ತಿರಬೇಕಾದ ರೈಲ್ವೆಯ 5 ನಿಯಮಗಳು ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಉತ್ತಮ ಮಾಹಿತಿಯನ್ನು ಒದಗಿಸಿಕೊಟ್ಟಿದ್ದಕ್ಕಾಗಿ ನೆಟ್ಟಿಗರು ಕಾಮೆಂಟ್ಸ್ ಮಾಡುವ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ರೈಲ್ವೆ ನಿಯಮಗಳ ಪ್ರಕಾರ ರೈಲಿನಲ್ಲಿ ಧೂಮಪಾನ ಮಾಡುವಂತಿಲ್ಲ ಮತ್ತು ಹಾಗೆ ಮಾಡಿ ಸಿಕ್ಕಿ ಬಿದ್ದರೆ ದಂಡ ವಿಧಿಸಲಾಗುತ್ತದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ