Viral Video: 28 ಹೆಂಡತಿಯರು, 135 ಮಕ್ಕಳು, 126 ಮೊಮ್ಮಕ್ಕಳ ಮುಂದೆ 37ನೇ ಮದುವೆಯಾದ ವೃದ್ಧ; ವಿಡಿಯೋ ವೈರಲ್!

Shocking News: ವೃದ್ಧರೊಬ್ಬರು ತನ್ನ 28 ಪತ್ನಿಯರು, 135 ಮಕ್ಕಳು ಹಾಗೂ 126 ಮೊಮ್ಮಕ್ಕಳ ಸಮ್ಮುಖದಲ್ಲಿ 37ನೇ ಪತ್ನಿಯನ್ನು ವಿವಾಹವಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Viral Video: 28 ಹೆಂಡತಿಯರು, 135 ಮಕ್ಕಳು, 126 ಮೊಮ್ಮಕ್ಕಳ ಮುಂದೆ 37ನೇ ಮದುವೆಯಾದ ವೃದ್ಧ; ವಿಡಿಯೋ ವೈರಲ್!
37ನೇ ಮಹಿಳೆಯನ್ನು ಮದುವೆಯಾದ ವೃದ್ಧ
Edited By:

Updated on: May 11, 2022 | 2:38 PM

ಹಿಂದೆಲ್ಲ ರಾಜರು 10-15 ಜನರನ್ನು ಮದುವೆಯಾಗುತ್ತಿದ್ದರಂತೆ, ತಮ್ಮ ಕುಟುಂಬ ಬೆಳೆಯಬೇಕೆಂಬ ಕಾರಣದಿಂದ ಹತ್ತಾರು ಮಕ್ಕಳನ್ನು ಮಾಡಿಕೊಳ್ಳುತ್ತಿದ್ದರಂತೆ ಎಂದು ನಾವು ಕತೆಗಳನ್ನು ಕೇಳಿರುತ್ತೇವೆ. ಆದರೆ, ಈಗಿನ ಕಾಲದಲ್ಲಿ ಒಬ್ಬಳು ಹೆಂಡತಿಯನ್ನೇ ಸಾಕುವುದು ಕಷ್ಟ ಎಂಬಂತಾಗಿದೆ. ಅಂಥದ್ದರಲ್ಲಿ 8-10 ಹೆಂಡತಿಯರನ್ನು ನೋಡಿಕೊಳ್ಳುವುದೆಂದರೆ ಸಾಮಾನ್ಯ ಮಾತಲ್ಲ. ಆದರೆ, ಇಲ್ಲೊಬ್ಬ ವೃದ್ಧ 37ನೇ ಮಹಿಳೆಯನ್ನು ಮದುವೆಯಾಗಿದ್ದಾರೆ. ತನ್ನ 28 ಹೆಂಡತಿಯರು, 135 ಮಕ್ಕಳು ಹಾಗೂ 126 ಮೊಮ್ಮಕ್ಕಳ ಎದುರಲ್ಲೇ 37ನೇ ಮದುವೆಯಾಗುವ ಮೂಲಕ ವೃದ್ಧರೊಬ್ಬರು ಹೊಸ ದಾಖಲೆ ಬರೆದಿದ್ದಾರೆ.

ರಾಜರು ಹತ್ತಾರು ರಾಣಿಯರನ್ನು ಮದುವೆಯಾಗುವುದು ನಾವೆಲ್ಲರೂ ಸಣ್ಣವರಿದ್ದಾಗ ಕೇಳಿರುವ ವಿಷಯ. ಆದರೆ, ಆಧುನಿಕ ಕಾಲದಲ್ಲಿ ಹಲವಾರು ಸಂಗಾತಿಗಳನ್ನು ಹೊಂದುವ ಕಲ್ಪನೆಯನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ವ್ಯಕ್ತಿಗಳು ಎರಡೋ ಮೂರೋ ಮದುವೆಯಾಗುತ್ತಾರೆ. ಆದರೆ, ಇಬ್ಬರೂ ಹೆಂಡತಿಯರ ಜೊತೆ ಒಟ್ಟಿಗೆ ಬದುಕುವ ಧೈರ್ಯವನ್ನಂತೂ ಖಂಡಿತ ಮಾಡುವುದಿಲ್ಲ.

ವೃದ್ಧರೊಬ್ಬರು ತನ್ನ 28 ಪತ್ನಿಯರು, 135 ಮಕ್ಕಳು ಹಾಗೂ 126 ಮೊಮ್ಮಕ್ಕಳ ಸಮ್ಮುಖದಲ್ಲಿ 37ನೇ ಪತ್ನಿಯನ್ನು ವಿವಾಹವಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ನಾನು ಕಂಡ ಅತ್ಯಂತ ಧೈರ್ಯವಂತ ವ್ಯಕ್ತಿ…… 28 ಹೆಂಡತಿಯರು, 135 ಮಕ್ಕಳು ಮತ್ತು 126 ಮೊಮ್ಮಕ್ಕಳ ಮುಂದೆ 37ನೇ ಮದುವೆಯಾಗಿರುವ ಇವರ ಧೈರ್ಯವನ್ನು ಮೆಚ್ಚಲೇಬೇಕು” ಎಂದು ಅವರು ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋವನ್ನು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ತಿಳಿದಿಲ್ಲ.

ಕಳೆದ ವರ್ಷ ಜೂನ್‌ನಲ್ಲಿ ವೈರಲ್ ಆಗಿದ್ದ ಈ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾವು ಒಬ್ಬಳು ಹೆಂಡತಿಯನ್ನು ಮೇಂಟೇನ್ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದೇವೆ. ಆದರೆ, ಈ ಪುಣ್ಯಾತ್ಮ 37ನೇ ಮದುವೆಯಾಗಲು ಧೈರ್ಯ ಮಾಡಿರುವುದನ್ನು ನೋಡಿದರೆ ಅಚ್ಚರಿಯಾಗುತ್ತಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ