ಎಲ್ಲವನ್ನೂ ಮಾರಿದ! ದೊಡ್ಡ ವಾಟರ್ ಟ್ಯಾಂಕೊಂದನ್ನು ಐಷಾರಾಮಿ ಮನೆಯನ್ನಾಗಿಸಲು

Home : 2019ರಲ್ಲಿ ಹಳೆಯದಾದ ದೊಡ್ಡ ವಾಟರ್​ಟ್ಯಾಂಕ್​ ಖರೀದಿಸಿದೆ. ಇದನ್ನು ಭವ್ಯವಾದ ಮನೆಯನ್ನಾಗಿಸುವ ಕನಸು ಕಂಡೆ. ಮೂರು ವರ್ಷ ಪೂರ್ತಿ ಇದಕ್ಕಾಗಿಯೇ ನನ್ನ ಸಮಯವನ್ನು ಮೀಸಲಿಟ್ಟೆ.’

ಎಲ್ಲವನ್ನೂ ಮಾರಿದ! ದೊಡ್ಡ ವಾಟರ್ ಟ್ಯಾಂಕೊಂದನ್ನು ಐಷಾರಾಮಿ ಮನೆಯನ್ನಾಗಿಸಲು
ನೀರಿನ ಟ್ಯಾಂಕ್​ ಹೋಗಿ ಐಷಾರಾಮಿ ಮನೆಯಾದಾಗ

Updated on: Feb 01, 2023 | 12:38 PM

Viral Video : ಕಲ್ಪನಾ ಶಕ್ತಿ ಇದ್ದಲ್ಲಿ ನಮಗೆ ಬೇಕಾದ್ದನ್ನು ಬೇಕಾದಂತೆ ಮಾರ್ಪಡಿಸಿಕೊಳ್ಳಲು ಸಾಧ್ಯವಿದೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ದೊಡ್ಡದಾದ ಒಂದು ಹಳೆಯ ನೀರಿನ ಟ್ಯಾಂಕ್​ ಅನ್ನು ಇಲ್ಲೊಬ್ಬ ವ್ಯಕ್ತಿ ಐಷಾರಾಮಿ ಮನೆಯೊಂದನ್ನಾಗಿ ಪರಿವರ್ತಿಸಿದ್ಧಾರೆ. ಆದರೆ ವಿಷಯ ಇದಲ್ಲ. ಈ ಟ್ಯಾಂಕ್​ ಖರೀದಿಸಿ, ಮನೆ ಕಟ್ಟಿಸಲು ಈತ ತನ್ನ ಬಳಿ ಇದ್ದ ಎಲ್ಲವನ್ನೂ ಮಾರಾಟ ಮಾಡಿದ್ದಾನೆ. ಅಂತೂ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾನೆ. ನೋಡಿ ಈಗ ಹೇಗಿದೆ ಈ ಮನೆ!

@water_tower_conversion ಎಂಬ ಇನ್​ಸ್ಟಾಗ್ರಾಂ ಪುಟವನ್ನು ಇದಕ್ಕಾಗಿಯೇ ಈತ ಮೀಸಲಿರಿಸಿದ್ದಾನೆ. 2019 ರಲ್ಲಿ ಈತ ಈ ಹಳೆಯ ನೀರಿನ ಟ್ಯಾಂಕ್ ಖರೀದಿಸಿದ. ಇನ್ನೆರಡು ವರ್ಷಗಳಲ್ಲಿ ಭವ್ಯವಾದ, ಐಷಾರಾಮಿ ಮನೆಯನ್ನು ಇಲ್ಲಿ ಕಟ್ಟಿಸುತ್ತೇನೆ. ನಂತರ ನೋಡಿ ನನ್ನ ಇಡೀ ಜೀವನವೇ ಬದಲಾಗುತ್ತದೆ ಎಂದು ಇನ್ಸ್ಟಾನಲ್ಲಿ ಅಪ್​ಡೇಟ್ ಮಾಡಿದ. ಆ ಪ್ರಕಾರ 2019ರಿಂದ ಮನೆಯ ಕುರಿತು ಫೋಟೋ, ವಿಡಿಯೋ ಸಮೇತ ಅಪ್​ಡೇಟ್​ ಮಾಡಲಾರಂಭಿಸಿದ. ಅಂತೂ ಒಟ್ಟು ಮೂರು ವರ್ಷಗಳಲ್ಲಿ ಅಂದುಕೊಂಡಂತೆ ಮನೆ ಕಟ್ಟಿದ್ದಾನೆ.

‘ಮೂರು ವರ್ಷಗಳ ಹಿಂದೆ ನಾನು ಈ ಮನೆಯನ್ನು ಕಟ್ಟಿಸಲು ಪ್ರಾರಂಭಿಸಿದೆ. ನನ್ನ ಕೆಲಸವನ್ನು ಬಿಟ್ಟು, ನನ್ನ ಹಳೆಯ ಮನೆಯನ್ನು ಮಾರಿ ಪೂರ್ಣಪ್ರಮಾಣದಲ್ಲಿ ಈ ಮನೆಯ ನಿರ್ಮಾಣದಲ್ಲಿ ತೊಡಗಿಕೊಂಡೆ. ಅನೇಕರು ಇನ್​ಸ್ಟಾನಲ್ಲಿ ನನ್ನ ಈ ಪ್ರಯಾಣಕ್ಕೆ ಪ್ರೋತ್ಸಾಹದ ಮಾತುಗಳನ್ನಾಡಿ ಬೆಂಬಲಿಸಿದರು. ಈಗ ಈ ಮನೆ ವಾಸಕ್ಕೆ ತಯಾರಾಗಿದೆ.’ ಎಂದಿದ್ದಾನೆ ಮಾಲೀಕ ರಾಬ್​ ಹಂಟ್​.

ಇದನ್ನೂ ನೋಡಿ : ಮಿಸಳ್​ ಪಾವ್​ ಇದೂ ಒಂದು ತಿನಿಸೇ? ಟ್ವೀಟ್ ಮಾಡಿದ ವ್ಯಕ್ತಿಗೆ ಪಾಠ ಮಾಡುತ್ತಿರುವ ನೆಟ್ಟಿಗರು

ಈ ರೂಪಾಂತರವನ್ನು ನೋಡುವುದೇ ಒಂದು ಅದ್ಭುತ ಅನುಭವ ಎಂದಿದ್ದಾರೆ ನೆಟ್ಟಿಗರು. ಅದ್ಭುತವಾಗಿದೆ ಈ ಮನೆ, ನಿಮ್ಮ ಕಲ್ಪನೆಗೆ ಶರಣು ಎಂದಿದ್ದಾರೆ ಕೆಲವರು. ನಿಜಕ್ಕೂ ನಿಮಗೆ ಅಪಾರವಾದ ತಾಳ್ಮೆ ಇದೆ, ನಿಮಗೆ ಒಳ್ಳೆಯದಾಗಲಿ ಎಂದ ಹಾರೈಸಿದ್ದಾರೆ ಅನೇಕರು. ನಿಮ್ಮ ಧೈರ್ಯ, ಸಾಹಸ ಮೆಚ್ಚುವಂಥದ್ದು ಎಂದಿದ್ದಾರೆ ಹಲವರು.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 12:28 pm, Wed, 1 February 23