ಮಿಸಳ್​ ಪಾವ್​ ಇದೂ ಒಂದು ತಿನಿಸೇ? ಟ್ವೀಟ್ ಮಾಡಿದ ವ್ಯಕ್ತಿಗೆ ಪಾಠ ಮಾಡುತ್ತಿರುವ ನೆಟ್ಟಿಗರು

Misal Pav : ‘ಎಣ್ಣೆ ಬಸಿಯುವ ಉಸಳಿಯಲ್ಲಿ ದಾರಿತಪ್ಪಿ ಒಂದಷ್ಟು ಸೇವು ಬಿದ್ದರೆ ಹೇಗಿರುತ್ತೋ ಹಾಗಿದೆ ಅದು’ ವ್ಯಕ್ತಿಯೊಬ್ಬರು ಟ್ವಿಟರ್​ನಲ್ಲಿ ಟೀಕಿಸಿದ್ದಾರೆ. ಅದೆಲ್ಲ ಮೈಮುರಿದು ದುಡಿಯುವವರಿಗೆ ನಿಮ್ಮಂಥವರಿಗೆಲ್ಲ ಎಂದಿದ್ದಾರೆ ನೆಟ್ಟಿಗರು.

ಮಿಸಳ್​ ಪಾವ್​ ಇದೂ ಒಂದು ತಿನಿಸೇ? ಟ್ವೀಟ್ ಮಾಡಿದ ವ್ಯಕ್ತಿಗೆ ಪಾಠ ಮಾಡುತ್ತಿರುವ ನೆಟ್ಟಿಗರು
ಮಿಸಳ್​ ಪಾವ್​, (ಪ್ರಾತಿನಿಧಿಕ ಚಿತ್ರ)
Follow us
|

Updated on:Feb 01, 2023 | 12:39 PM

Viral News : ಮಹಾರಾಷ್ಟ್ರ ಎಂದರೆ ಮಿಸಳ್​ ಪಾವ್ ಫಕ್ಕನೆ ಕಣ್ಮುಂದೆ ಬರುತ್ತದೆ. ಮಡಿಕೆ, ಕಡಲೆ ಅಥವಾ ಬಟಾಣಿಕಾಳುಗಳನ್ನು ನೆನೆಹಾಕಿ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಟೊಮ್ಯಾಟೋ, ಆಲೂಗಡ್ಡೆ, ಉಪ್ಪು, ಖಾರ, ಸ್ವಲ್ಪ ಮಸಾಲೆಯೊಂದಿಗೆ ಮಾಡುವ ರಸಭರಿತವಾದ ಭಾಜೀ. ಅದರ ತುಂಬಾ ಶೇವ್​ ಸುರಿಯುವುದು, ನಿಂಬೆರಸ ಹಿಂಡಿಕೊಳ್ಳುವುದು, ಬನ್​ಗೆ ಬೆಣ್ಣೆ ಹಚ್ಚಿ ತವಾ ಮೇಲೆ ಬೇಯಿಸಿದರೆ ಪಾವ್​ ರೆಡಿ. ಬೇಕಿದ್ದರೆ ಎರಡು ತುಂಡು ಹಸೀ ಈರುಳ್ಳಿ. ಇಂಥ ರುಚಿಕರ ಮತ್ತು ಮಹಾರಾಷ್ಟ್ರಿಗರ ನಿತ್ಯದ ನಾಷ್ಟಾ ನೋಡಿದರೆ ಯಾರಿಗೆ ತಾನೆ ಇಷ್ಟವಿಲ್ಲ? ಆದರೆ ವ್ಯಕ್ತಿಯೊಬ್ಬ ಮಿಸಳ್​ ಪಾವ್​ ಬಗ್ಗೆ ನಕಾರಾತ್ಮಕವಾಗಿ ಟ್ವೀಟ್ ಮಾಡಿದ್ದಾನೆ. ನೆಟ್ಟಿಗರೆಲ್ಲ ಅವನಿಗೆ ಮುಗಿಬಿದ್ದಿದ್ದಾರೆ.

​ಬೋಧಿಸತ್ವ ಮಜುಂದಾರ್ ಎನ್ನುವ ವ್ಯಕ್ತಿಯೇ ಟ್ವಿಟರ್​ನಲ್ಲಿ ಟೀಕಿಸಿದವರು. ‘ಮಿಸಳ್ ಪಾವ್ ಎಂದರೆ, ಅದೂ ಒಂದು ತಿನಿಸೇ? ಎಣ್ಣೆ ಬಸಿಯುವ ಉಸಳಿಯಲ್ಲಿ ದಾರಿತಪ್ಪಿ ಒಂದಷ್ಟು ಸೇವು ಬಿದ್ದರೆ ಹೇಗಿರುತ್ತೋ ಹಾಗಿದೆ ಅದು’ ಎಂದಿದ್ದಾರೆ. ನೀವು ಮುಂಬೈನಲ್ಲಿದ್ದು ಮಿಸಳ್​ ಪಾವ್​ ನಿಂದಿಸುತ್ತಿದ್ದೀರಿ ಎಂದಿದ್ದಾರೆ. ನೀವು ದಾದರ್​ನ ಶಿವಾಜಿ ಪಾರ್ಕ್​ ಬಳಿ ಇರುವ ಆಸ್ವಾದ್​ ಮತ್ತು ಥಾಣೆಯಲ್ಲಿರುವ ಆಮಂತ್ರಣ್​ದಲ್ಲಿ ಪಾವ್​ ಭಾಜಿ ತಿಂದ ನೋಡಿ. ಆದರೆ ಮಾಮ್ಲೇದಾರ್​ ಫ್ರಾಂಚೈಸಿ ಹೋಟೆಲ್​ಗಳಲ್ಲಿ ತಿನ್ನಬೇಡಿ ಎಂದಿದ್ದಾರೆ ಮತ್ತೊಬ್ಬರು. ಹೀಗೆಲ್ಲ ಹೇಳಬೇಡಿ ಇದು ತುಂಬಾ ರುಚಿಯಾದ ಖಾದ್ಯ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್

ಇನ್ನೂ ಕೆಲವರು ಬೋಧಿಸತ್ವರ ಮಾತನ್ನು ಅನುಮೋದಿಸಿದ್ದಾರೆ. ಹೌದು ಇದನ್ನು ಕೆಟ್ಟದಾಗಿ ಮಾಡಿದ್ದಾರೆ ಎಂದಿದ್ದಾರೆ. ನಾನು ಪಾವ್​ ಭಾಜಿ ಅಂದರೆ ಪ್ರಾಣ. ಆದರೆ ಈ ಮಿಸಳ್​ ಪಾವ್​ ಎಂದರೆ ಏನು ಎಂದು ಮತ್ತೊಬ್ಬರು ಕೇಳಿದ್ದಾರೆ. ಯಾಕೆ ಹೀಗೆ ಎಣ್ಣೆಗಸಿಯನ್ನು ಸರಿದುಕೊಳ್ಳುತ್ತಾರೋ ಕಾಣೆ ಎಂದಿದ್ದಾರೆ ಕೆಲವರು.

ಇದೆಲ್ಲವೂ ಮೈಮುರಿದು ತಿನ್ನುವವರಿಗೆ ಮಾತ್ರ ನಿಮ್ಮಂಥವರಿಗೆ ಅಲ್ಲ. ಎಂದು ಕೆಲವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು? ಮಹಾರಾಷ್ಟ್ರಿಯನ್​ ಮಿಸಳ್​ ಪಾವ್​ನ ಪಾಕವಿಧಾನ ತಿಳಿದುಕೊಳ್ಳಬೇಕೆ? ಕ್ಲಿಕ್ ಮಾಡಿ

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:28 am, Wed, 1 February 23

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು