ಉತ್ತರ ಪ್ರದೇಶದ ಸೋನಭದ್ರಾದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೋಣೆ ಪೊಲೀಸ್ ಠಾಣಾ ವ್ಯಾಪ್ತಿಯ ಗುಪ್ತಧಾಮ್ ಗುಹೆಯಲ್ಲಿ ಯುವತಿಯೊಬ್ಬಳು ಸರ್ಪ ರೂಪದಲ್ಲಿ ಕಾಣಿಸಿಕೊಂಡಿದ್ದು, ಹಾವಿನ ರೂಪದಲ್ಲಿದ್ದ ಆಕೆಯನ್ನು ಕಂಡ ಸ್ಥಳೀಯರು ದೇವರ ಪ್ರತಿರೂಪ ಎಂದು ಭಾವಿಸಿ ಅಲ್ಲಿಯೇ ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ. ದೇವರ ಮಹಿಮೆಯಿಂದಾಗಿ ಯುವತಿ ಹಾವಾಗಿ ಮಾರ್ಪಟ್ಟಿದ್ದಾಳೆ ಎಂದು ಹೇಳಿಕೊಂಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಆ ಗುಹೆಯಲ್ಲಿ ಯುವತಿಗೆ ಪೂಜೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಗುಹೆಯಲ್ಲಿ ನೆಲದ ಮೇಲೆ ಹಾವಿನಂತೆ ಮಲಗಿರುವುದು ಕಂಡುಬಂದಿದೆ. ಅಲ್ಲಿದ್ದ ಕೆಲವರು ಯುವತಿಯ ವಿಚಿತ್ರ ಚೇಷ್ಟೆಯಿಂದ ಗಾಬರಿಯಾಗಿದ್ದು, ಕೆಲವರು ಓಡಿಹೋಗಿದ್ದಾರೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ, ಕಾರಿನೊಳಗೆ ಇಬ್ಬರು ಪುರುಷರೊಂದಿಗೆ ಮಹಿಳೆ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆ
ಕೋನೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಣಿದಿಹ್ ಗುಪ್ತಾ ಧಾಮ್ ಗುಹೆಯಲ್ಲಿ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಜನರು ಅಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ರಾಣಿದಿಹ್ ಗುಪ್ತ ಧಾಮ್ ಗುಹೆಯ ಬಳಿ ಶಿವ ದೇವಾಲಯವಿದೆ. ಸೋಮವಾರ ಶಿವ ದೇವಾಲಯದ ಬಳಿಯ ಗುಹೆಯಲ್ಲಿ ಯುವತಿ ಹಾವಿನಂತೆ ವರ್ತಿಸುತ್ತಿರುವುದನ್ನು ಕಂಡ ಜನರು ಆಕೆಯನ್ನು ಹೊರಗೆ ಕರೆದೊಯ್ದು ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ