AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರುಷರಿಗೂ ಬೇಕಿದೆ ರಕ್ಷಣೆ, ತನ್ನ ಬಟ್ಟೆಯನ್ನು ತಾನೇ ಹರಿದುಕೊಂಡು ಯುವಕನ ಮೇಲೆ ಆಪಾದನೆ ಹೊರಿಸಿದ ಮಹಿಳೆ

ಮಹಿಳೆಯರ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲ ಪುರುಷರು ತಾವು ತಪ್ಪು ಮಾಡದೆಯೇ ಶಿಕ್ಷೆ ಅನುಭವಿಸಿದ್ದುಂಟು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಬೀದಿ ರಂಪಾಟದಲ್ಲಿ ಚಾಲಾಕಿ ಮಹಿಳೆಯೊಬ್ಬಳು ತನ್ನ ಬಟ್ಟೆಯನ್ನು ತಾನೇ ಹರಿದುಕೊಂಡು, ಆ ಆರೋಪವನ್ನು ತಪ್ಪೇ ಮಾಡದ ಯುವಕನ ಮೇಲೆ ಹೊರಿಸಲು ಮುಂದಾಗಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಈ ಸಮಾಜದಲ್ಲಿ ಪುರುಷರಿಗೂ ಕೂಡಾ ರಕ್ಷಣೆ ಬೇಕಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು.

ಪುರುಷರಿಗೂ ಬೇಕಿದೆ ರಕ್ಷಣೆ, ತನ್ನ ಬಟ್ಟೆಯನ್ನು ತಾನೇ ಹರಿದುಕೊಂಡು ಯುವಕನ ಮೇಲೆ ಆಪಾದನೆ ಹೊರಿಸಿದ ಮಹಿಳೆ
ವೈರಲ್​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Jul 31, 2024 | 5:38 PM

Share

ಅದೆಷ್ಟೋ ಬಾರಿ ತಾವು ಮಾಡದ ತಪ್ಪಿಗೆ ಪುರುಷರು ಶಿಕ್ಷೆ ಅನುಭವಿಸಿದ್ದುಂಟು. ಹೌದು ಕೆಲವೊಬ್ಬ ಮಹಿಳೆಯರು ವಿಮೆನ್‌ ಕಾರ್ಡ್‌ ಪ್ಲೇ ಮಾಡಿ, ಪುರುಷರ ಮೇಲೆ ಸುಖಾಸುಮ್ಮನೆ ಸುಳ್ಳು ಆರೋಪಗಳನ್ನು ಹೊರಿಸುವ ಘಟನೆಗಳು ನಡೆಯುತ್ತಲೇ ಇವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಬೀದಿ ಜಗಳದಲ್ಲಿ ಮಹಿಳೆಯೊಬ್ಬಳು ತನ್ನ ಬಟ್ಟೆಯನ್ನೂ ತಾನೇ ಹರಿದುಕೊಂಡು ಅಲ್ಲಿದ್ದ ಯುವಕನ ಮೇಲೆ ಆ ಆರೋಪವನ್ನು ಹೊರಿಸಲು ಮುಂದಾಗಿದ್ದಾಳೆ. ಈ ದೃಶ್ಯವನ್ನು ಆ ಯುವಕ ಮೊಬೈಲ್‌ ಫೋನಿನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದಾನೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗಿದ್ದು, ಇಂತಹ ಸುಳ್ಳು ಆರೋಪಗಳಿಗೆ ಬಲಿಯಾಗುವ ಪುರುಷರು ಇನ್ನು ಮುಂದೆ ಕ್ಯಾಮೆರಾ ಹಿಡಿದುಕೊಂಡೇ ಓಡಾಡಬೇಕಿದೆ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ಶೋನಿ ಕಪೂರ್‌ (ShoneeKapoor) ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಈ ಮಹಿಳೆ ತನ್ನ ಬಟ್ಟೆ ತಾನೇ ಹರಿದುಕೊಂಡು, ಯುವಕನೊಬ್ಬನ ಆರೋಪ ಹೊರಿಸುತ್ತಿದ್ದಾಳೆ; ಪುರುಷರೇ ಇಂತಹ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್‌ ಮಾಡಲು ಮರೆಯದಿರಿ, ಇಲ್ಲದಿದ್ದರೆ ಮಾಡದ ತಪ್ಪಿಗೆ ಶಿಕ್ಷೆಯಾಗಬಹುದು” ಎಂಬ ಶೀರ್ಷಿಕೆಯನ್ನು ಮರೆದುಕೊಂಡಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ವಿಡಿಯೋದಲ್ಲಿ ಜಾಗದ ವಿಷಯಕ್ಕೆ ಸಂಬಂಧಪಟ್ಟಂತೆ ಮನೆಯ ಅಕ್ಕಪಕ್ಕದಲ್ಲಿ ಬೀದಿ ರಂಪಾಟ ನಡೆಯುತ್ತಿರುವುದು ಕಾಣಬಹುದು. ಈ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್‌ ಮಾಡುತ್ತಲೇ ಯುವಕನೊಬ್ಬ ಮಾತುಕತೆಗೆ ಇಳಿಯುತ್ತಾನೆ. ಹೀಗೆ ಜಗಳವಾಡುತ್ತಾ ಅಲ್ಲಿ ಜೋರಾಗಿ ಧ್ವನಿಯೆತ್ತಿ ಮಾತನಾಡುತ್ತಿದ್ದ ಮಹಿಳೆ ತನ್ನ ಬಟ್ಟೆಯನ್ನು ಹರಿದುಕೊಂಡು, ಅಲ್ಲಿದ್ದ ಯುವಕನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ನೀನೆ ನನ್ನ ಬಟ್ಟೆಯನ್ನು ಹರಿದಿದ್ದೀಯಾ ಎಂದು ಆ ಯುವಕನ ಮೇಲೆ ಆರೋಪವನ್ನು ಹೊರಿಸುತ್ತಾಳೆ.

ಇದನ್ನೂ ಓದಿ: ನನ್ನದೊಂದು ಪುಟ್ಟ ಅಳಿಲು ಸೇವೆ, ರಸ್ತೆ ಮೇಲೆ ನೀರು ನಿಲ್ಲದಂತೆ ಶೋಲ್ಡರ್‌ ಡ್ರೈನ್‌ ಸ್ವಚ್ಛಗೊಳಿಸಿದ ವಿಕಲಚೇತನ ವ್ಯಕ್ತಿ

ಜುಲೈ 30 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼ ಬಹುಶಃ ಆ ಯುವಕ ವಿಡಿಯೋ ರೆಕಾರ್ಡ್‌ ಮಾಡಿಲ್ಲ ಅಂದಿದ್ರೆ ಖಂಡಿತವಾಗಿಯೂ ಯುವಕನಿಗೆ ಮಾಡದ ತಪ್ಪಿಗೆ ಶಿಕ್ಷೆಯಾಗುತ್ತಿತ್ತುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸುರಕ್ಷತೆಗಾಗಿ ಇನ್ನು ಮುಂದೆ ಪುರುಷರು ಕ್ಯಾಮೆರಾ ಹಿಡಿದುಕೊಂಡು ಓಡಾಡಬೇಕುʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Wed, 31 July 24

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!