Viral Video : ಈ ಕೋತಿಗಳಿಗೆ ಸಿಂಹಗಳ ಮೇಲೆ ಕೋಪ ಬಂದಿದೆಯೋ, ಅಥವಾ ಈ ಸಿಂಹದ ಮರಿಯ ಮೇಲೆ ಮುದ್ದು ಬಂದಿದೆಯೋ ಗೊತ್ತಿಲ್ಲ. ಅಂತೂ ಈ ಎರಡೂ ಮಂಗಗಳು ಈ ಮರಿಯನ್ನು ಎತ್ತಿಕೊಂಡು ಸರಸರನೇ ಮರ ಏರಿ ಕುಳಿತುಬಿಟ್ಟಿವೆ. ಯಾಕೆ ಹೀಗೆ ಮಾಡಿದವು ಎನ್ನುವುದನ್ನು ಯೋಚಿಸುತ್ತ ನೆಟ್ಟಿಗರು ತಲೆಯಿಂದ ಕೈಬರಳನ್ನೇ ತೆಗೆಯುತ್ತಿಲ್ಲ.
ನೋಡಲು ತುಸು ವಿಚಿತ್ರವಾದ ವಿಡಿಯೋ ಇದು. ವೈರಲ್ ಆಗುತ್ತಿರುವ ಈ ವಿಡಿಯೋ ನೋಡುತ್ತಿರುವ ನೆಟ್ಟಿಗರು ಲಯನ್ ಕಿಂಗ್ ಸಿನೆಮಾದ ದೃಶ್ಯವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಆದರೆ ಮರಿ ಇದೆ ಎಂದಮೇಲೆ ಅದರ ಅಪ್ಪನೋ ಅಮ್ಮನ ಇರಬೇಕಲ್ಲ ಸುತ್ತಮುತ್ತಲೂ? ಅವುಗಳು ಕಾಣುತ್ತಿಲ್ಲ. ಹಾಗಿದ್ದರೆ ಹೇಗೆ ಎಲ್ಲಿಂದ ಹೀಗೆ ಹಾರಿಸಿಕೊಂಡು ಬಂದಿವೆ ಈ ಕೋತಿಗಳು? ಹೇಳಿಕೇಳಿ ಕೋತಿ, ಎಗರುವುದೇ ಜನ್ಮಸಿದ್ಧ ಹಕ್ಕು. ಎಗರುವುದನ್ನೇ ನೆಚ್ಚಿಕೊಂಡಿರುವವರಿಂದ ಸತ್ಯ ಕಂಡುಕೊಳ್ಳಲು ಸಾದ್ಯವೇ? ಇಷ್ಟೇ ಇಷ್ಟು ಸಣ್ಣ ಕ್ಲಿಪ್ ಇದು. ಎಂಥಾ ಸಂದಿಗ್ಧಕ್ಕೆ ತಳ್ಳಿದೆಯಲ್ಲವೆ?
ಆದರೆ ನೆಟ್ಟಿಗರು ಮಾತ್ರ ಬಹಳ ಸೂಕ್ಷ್ಮವಾಗಿ ಈ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಸಿಂಹಗಳ ಅಪ್ಪ ಅಮ್ಮ ದಣಿದಿರಬೇಕು. ಮರಿಗಳನ್ನು ಕೋತಿಗಳು ಆಟವಾಡಿಸುತ್ತಿವೆ ಎಂದಿದ್ದಾರೆ ಒಬ್ಬರು. ಪ್ರಾಣಿಗಳ ಈ ಗುಣ ಮನುಷ್ಯರಲ್ಲಿ ಇಲ್ಲವಾಗಿ ಹೋಯಿತಲ್ಲ ಎಂದು ಬೇಸರಿಸಿಕೊಂಡಿದ್ದಾರೆ ಇನ್ನೊಬ್ಬರು.
ಆದರೆ, ಎಷ್ಟು ಕಾಳಜಿಯಿಂದ ತಮ್ಮದೇ ಮರಿಯೆಂಬಂತೆ ಹಿಡಿದುಕೊಂಡು ಓಡಾಡುತ್ತಿವೆ ನೋಡಿ ಕೋತಿಗಳು. ಮರಿಸಿಂಹವೂ ಸುಮ್ಮನೆ ತೆಕ್ಕೆಯೊಳಗೆ ಕುಳಿತಿದೆ.
ಏನನ್ನಿಸುತ್ತಿದೆ ಈ ವಿಡಿಯೋ ನೋಡಿದ ನಿಮಗೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ