Viral Post: ‘ಬಡತನ ಇದ್ದರೂ ಬಂಗಾರದಂಗ ಸಾಕಿದ್ದಾಳೆ ನನ್ನವ್ವ’; ಪೋಸ್ಟ್​​ ವೈರಲ್​​

ವಿಡಿಯೋ ಹಂಚಿಕೊಂಡ ಕೇವಲ 5 ದಿನಗಳಲ್ಲಿ 7 ಮಿಲಿಯನ್​​​ ಅಂದರೆ 70 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. 'ಬಡತನ ಇದ್ದರೂ ಬಂಗಾರದಂಗ ಸಾಕಿದ್ದಾಳೆ ನನ್ನವ್ವ' ಎಂದು ಆಟೋ ಹಿಂದೆ ಬರೆದ ಸಾಲುಗಳ ವಿಡಿಯೋ ಇಲ್ಲಿದೆ ನೋಡಿ

Viral Post: ಬಡತನ ಇದ್ದರೂ ಬಂಗಾರದಂಗ ಸಾಕಿದ್ದಾಳೆ ನನ್ನವ್ವ; ಪೋಸ್ಟ್​​ ವೈರಲ್​​
ಬಡತನ ಇದ್ದರೂ ಬಂಗಾರದಂಗ ಸಾಕಿದ್ದಾಳೆ ನನ್ನವ್ವ
Image Credit source: instagram

Updated on: Apr 30, 2024 | 2:52 PM

ಆಟೋ ರಿಕ್ಷಾಗಳ ಹಿಂದೆ ಏನಾದರೂ ಒಂದು ಸಾಲುಗಳನ್ನು ಬರೆದಿರುವುದನ್ನು ನೀವು ಕಂಡಿರುತ್ತೀರಿ. ಕೆಲವೊಂದು ಮಜವೆನಿಸಿದರೂ ಕೂಡ, ಕೆಲವೊಂದು ಉತ್ತಮ ಸಂದೇಶವನ್ನು ಸಾರುತ್ತಿರುತ್ತವೆ. ಕೆಲ ಸಾಲುಗಳನ್ನು ಓದಿದಾಕ್ಷಣ ನಿಮಗೆ ತಿಳಿಯದಂತೆ ನಿಮ್ಮ ಕಣ್ಣಿನಲ್ಲಿ ಹನಿ ಕಣ್ಣೀರು ಸುರಿಯುವುದಂತೂ ಖಂಡಿತಾ. ಇದೀಗ ಅಂತದ್ದೇ ಸಾಲೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗುತ್ತಿದೆ. ಬಡತನದಲ್ಲೂ ತನ್ನ ತಾಯಿ ಬಂಗಾರದಂತೆ ಸಾಕಿದ್ದಾಳೆ ಎಂಬ ಆಟೋ ಹಿಂದಿನ ಸಾಲುಗಳು ನೆಟ್ಟಿಗರ ಮನ ಮುಟ್ಟಿದೆ.

@byari_kannadiga ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಏಪ್ರಿಲ್​​ 25ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ 5 ದಿನಗಳಲ್ಲಿ 7 ಮಿಲಿಯನ್​​​ ಅಂದರೆ 70 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದಲ್ಲದೇ 437,043 ಜನರು ಲೈಕ್ಸ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೀವನದಲ್ಲಿ ಬೆಲೆ ಕಟ್ಟಲಾಗದ ದೊಡ್ಡ ಆಸ್ತಿ ಅಮ್ಮ. ಅಮ್ಮನ ಕುರಿತಾದ ಈ ಸುಂದರ ಸಾಲಿನ ವರ್ಣನೆ ಇದೀಗಾ ಎಲ್ಲೆಡೆ ವೈರಲ್​​ ಆಗುತ್ತಿದೆ.

ಇದನ್ನೂ ಓದಿ: ಅತ್ತೆಯೊಂದಿಗೆ ಅಳಿಯನ ಅಕ್ರಮ ಸಂಬಂಧ; ಮದುವೆ ಮಾಡಿಸಿದ ಮಾವ

‘ಬಡತನ ಇದ್ದರೂ ಬಂಗಾರದಂಗ ಸಾಕಿದ್ದಾಳೆ ನನ್ನವ್ವ’ ಎಂದು ಆಟೋ ಹಿಂದೆ ಬರೆದ ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮಾಡಿದ್ದು, ಅದ್ಭುತ ಸಾಲುಗಳು ಎಂದು ಬರೆದುಕೊಂಡಿದ್ದಾರೆ. “ನನ್ನ ಜೀವನದಲ್ಲಿನ ಬಡತನ ನೋಡಿಲ್ಲ ಏಕೆಂದರೆ ನನ್ನ ತಾಯಿ ಬಿಡಲಿಲ್ಲ” ಎಂದು ಬರೆದರೆ, ಮತ್ತೊಬ್ಬರು “ಜೀವ ಕೊಟ್ಟವಳು, ಜೀವನ ಕೊಟ್ಟವಳು, ಜೀವ ಇರುವವರೆಗೆ ಜೊತೆಯಾಗಿ ಇದ್ದವಳು ನನ್ನ ಅವ್ವ” ಎಂದು ಕಾಮೆಂಟ್​​ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ