ವ್ಯಕ್ತಿಯೊಬ್ಬ ತನ್ನ 17 ವರ್ಷದ ಮಗನಿಗೆ BMW ಕಾರನ್ನು ಓಡಿಸುವಂತೆ ಹೇಳಿ ತಾನು ಕಾರಿನ ಮುಂದೆ ಬಾನೆಟ್ ಮೇಲೆ ಮಲಗಿ ಸವಾರಿ ಮಾಡುತ್ತಿದ್ದ ಘಟನೆ ಮುಂಬೈನ ಕಲ್ಯಾಣ್‌ನ ಶಿವಾಜಿ ಚೌಕ್‌ನ ಜನನಿಬಿಡ ರಸ್ತೆಗಳಲ್ಲಿ ಕಂಡುಬಂದಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಪಾದಚಾರಿಗಳು ಈತನ ವಿಚಿತ್ರ ಅವತಾರದ ಸವಾರಿಯನ್ನು ಮೊಬೈಲ್ ಮೂಲಕ ಸೆರೆಹಿಡಿದಿದ್ದು, ಸದ್ಯ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.
ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಅಪ್ರಾಪ್ತ ಮಗನಿಂದ ಕಾರು ಚಲಾಯಿಸಿದ್ದಕ್ಕಾಗಿ ಪೊಲೀಸರ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಸುಭಮ್ ಮತಾಲಿಯಾ ಎಂದು ಗುರುತಿಸಲಾಗಿದೆ.
Watch: Mumbai Teen Drives Father’s BMW On Busy Road With Man On Bonnet angry 😠 😡 👿 @MumbaiPolice pic.twitter.com/5B6vvcHJAN
— 𓆩ᖇꫝ᧒𓆪👁ᶦ–WᎥtness𒆜 (@BitmanRaj) May 27, 2024
ಇದನ್ನೂ ಓದಿ: ಮಹಿಳೆಯ ಪರ್ಸ್ ಎಗರಿಸಲು ಬಂದ ಕಳ್ಳ ಬಸ್ನಲ್ಲೇ ಲಾಕ್, ವಿಡಿಯೋ ವೈರಲ್
ಇತ್ತೀಚೆಗಷ್ಟೇ ಮಹಾರಾಷ್ಟ್ರದ ಪುಣೆಯಲ್ಲಿ ಮದ್ಯದ ಅಮಲಿನಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ವೇಗವಾಗಿ ಚಲಾಯಿಸುತ್ತಿದ್ದ ಐಷಾರಾಮಿ ಪೋರ್ಷೆ ಕಾರುಬೈಕ್ಗೆ ಡಿಕ್ಕಿ ಹೊಡೆದು ಇಬ್ಬರು ಸಾಫ್ಟ್ವೇರ್ ಇಂಜಿನಿಯರ್ಗಳು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಆರೋಪಿ ಬಂಧನವಾದ 15 ಗಂಟೆಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಟೀಕೆಗೆ ಗುರಿಯಾಗಿದೆ. ಇದರೊಂದಿಗೆ, ಬಾಲ ನ್ಯಾಯ ಮಂಡಳಿ (ಜೆಜೆಬಿ) ಆರೋಪಿಯನ್ನು ಜೂನ್ 5 ರವರೆಗೆ 14 ದಿನಗಳ ಕಾಲ ರಿಮಾಂಡ್ ಹೋಮ್‌ಗೆ ಕಳುಹಿಸಿದೆ. ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನ ತಂದೆಯನ್ನೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Tue, 28 May 24