ಹಗ್ಗದಾಟದಲ್ಲಿ ಗಿನ್ನೀಸ್​ ವಿಶ್ವದಾಖಲೆ ಮಾಡಿದ ಬಲು ಎಂಬ ನಾಯಿ

| Updated By: ಶ್ರೀದೇವಿ ಕಳಸದ

Updated on: Jan 11, 2023 | 5:39 PM

Guinness World Record : ಜುಲೈ 12, 2022ರಂದು 30 ಸೆಕೆಂಡುಗಳಲ್ಲಿ 32 ಸಲ ಜಿಗಿದು ವಿಶ್ವದಾಖಲೆ ಮಾಡಿದ್ದಾರೆ ಜರ್ಮನಿ ಮೂಲದ ಬಲು ಎಂಬ ನಾಯಿ ಮತ್ತು ಅದರ ಪೋಷಕ. ಮುದ ಕೊಡುವಂತಿದೆ ಈ ವಿಡಿಯೋ.

ಹಗ್ಗದಾಟದಲ್ಲಿ ಗಿನ್ನೀಸ್​ ವಿಶ್ವದಾಖಲೆ ಮಾಡಿದ ಬಲು ಎಂಬ ನಾಯಿ
ವಿಶ್ವದಾಖಲೆ ಮಾಡಿದ ಬಾಲು ತನ್ನ ಪೋಷಕನೊಂದಿಗೆ
Follow us on

Viral Video: ಮನುಷ್ಯರಷ್ಟೇ ಗಿನ್ನೀಸ್​ ವಿಶ್ವದಾಖಲೆ ಮಾಡಬೇಕೆ? ನಾವೇನು ಕಡಿಮೆ ಎನ್ನುತ್ತಿದೆ ಬಲು (Balu) ಎಂಬ ನಾಯಿ. ಹಿಂಗಾಲುಗಳ ಮೇಲೆ ಅತೀ ಹೆಚ್ಚು ಜಿಗಿತಗಳಿಗಾಗಿ ಇದೀಗ ವಿಶ್ವದಾಖಲೆಯ ಪಟ್ಟಿಗೆ ಸೇರಿದೆ. ಇದರ ಪೋಷಕ ವೂಲ್ಫ್​ಗ್ಯಾಂಗ್​ ಲಾಯೆನ್​ಬರ್ಗರ್​ನೊಂದಿಗೆ ಇದು ಹಗ್ಗದಾಟ ಆಡುವುದನ್ನು ನೋಡುವುದೇ ಸ್ವರ್ಗ. ನೆಟ್ಟಿಗರೆಲ್ಲರೂ ಸ್ಫೂರ್ತಿಯಿಂದ ಕೂಡಿದ ಈ ವಿಡಿಯೋ ನೋಡುತ್ತ ಮೈಮರೆಯುತ್ತಿದ್ದಾರೆ. 30 ಸೆಕೆಂಡುಗಳಲ್ಲಿ 32 ಸಲ ಜಿಗಿದು ಈ ದಾಖಲೆಗೆ ಪಾತ್ರವಾಗಿದೆ ಬಲು.

ಜರ್ಮನಿ ಮೂಲದ ಬಲು ಮತ್ತು ಅದರ ಪೋಷಕ ಜುಲೈ 12 ರಂದು ಈ ದಾಖಲೆಯನ್ನು ನಿರ್ಮಿಸಿದ್ದಾರೆ. ಇವರಿಬ್ಬರೂ ಈ ಪ್ರಶಸ್ತಿಗಾಗಿ ಕಠಿಣವಾದ ತರಬೇತಿಯನ್ನು ಪಡೆದಿದ್ದಾರೆ. ಸತತ ಪ್ರಯತ್ನದ ಮೂಲಕ ಈ ಯಶಸ್ಸನ್ನು ಸಾಧಿಸಿದ್ದಾರೆ. ಈತನಕ ವಿಡಿಯೋ ಅನ್ನು 3 ಮಿಲಿಯನ್ ಜನರು ನೋಡಿದ್ದಾರೆ. 22,000ಕ್ಕೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದಾರೆ. ನಿಮ್ಮಿಬ್ಬರಿಗೂ ಅಭಿನಂದನೆ ಎಂದಿದ್ದಾರೆ ನೆಟ್ಟಿಗರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ