Viral Video : ಜಾಗ್ವಾರ್​ನ ಶಕ್ತಿಶಾಲಿ ದವಡೆಯ ಬಗ್ಗೆ ನೆಟ್ಟಿಗರ ಅಚ್ಚರಿ

Leopard : ನಿನ್ನೆಯಷ್ಟೇ ಹಸುವನ್ನು ಬೇಟೆಯಾಡಿದ ಚಿರತೆಯ ವಿಡಿಯೋ ನೋಡಿದಿರಿ. ಈಗ ಮೊಸಳೆಯನ್ನು ಬೇಟೆಯಾಡಿದ ಜಾಗ್ವಾರ್​ನ ಈ ವಿಡಿಯೋ ನೋಡಿ.

Viral Video : ಜಾಗ್ವಾರ್​ನ ಶಕ್ತಿಶಾಲಿ ದವಡೆಯ ಬಗ್ಗೆ ನೆಟ್ಟಿಗರ ಅಚ್ಚರಿ
ಮೊಸಳೆಯನ್ನು ಹಿಡಿದಿರುವ ಜಾಗ್ವಾರ್
Edited By:

Updated on: Aug 18, 2022 | 1:43 PM

Viral Video : ಈ ಕಾಡುಪ್ರಾಣಿಗಳ ಜಗತ್ತಿನ ಕುತೂಹಲಕರ ಸಂಗತಿಗಳು ಮುಗಿಯುವುದೇ ಇಲ್ಲ. ಒಮ್ಮೊಮ್ಮೆ ತಮಾಷೆಯ ವಿಡಿಯೋ ನೋಡಿದ್ದೀರಿ. ಒಮ್ಮೊಮ್ಮೆ ವಿಚಿತ್ರ ಸಂಗತಿಗಳ ವಿಡಿಯೋ. ಈಗ ಅದ್ಭುತ ಶಕ್ತಿ ಪ್ರದರ್ಶನದ ವಿಡಿಯೋ ನೋಡಿ. ಜಾಗ್ವಾರ್  ಮೊಸಳೆಯೊಂದಿಗೆ ಬೇಟೆಗಿಳಿದು ಅದನ್ನು ಹಿಡಿದೊಯ್ಯುವಲ್ಲಿ ಯಶಸ್ವಿಯಾದ ದೃಶ್ಯವಿದು. ಆರಂಭದಲ್ಲಿ ಪೊದೆಗಳಲ್ಲಿ ಅಡಗಿದ ಜಾಗ್ವಾರ್ ತನ್ನ ಬೇಟೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಗುರಿ ಇಡುತ್ತದೆ. ನಂತರ ಇದ್ದಕ್ಕಿದ್ದಂತೆ ನೀರಿಗೆರಗಿ ಮೊಸಳೆಯ ಮೇಲೆ ದಾಳಿ ಮಾಡುತ್ತದೆ. ಎರಡರ ನಡುವೆ ಉಗ್ರ ಹೋರಾಟ ಶುರುವಾಗುತ್ತದೆ, ಉಳಿವಿಗಾಗಿ ಹಸಿವಿಗಾಗಿ. ಕೊನೆಗೆ ಮೊಸಳೆಯ ಕುತ್ತಿಗೆಯನ್ನು ತನ್ನ ದವಡೆಯಿಂದ ಕಚ್ಚಿ ಹಿಡಿಯುತ್ತದೆ ಚಿರತೆ. ಜಾಗ್ವಾರ್​ನ ದವಡೆ ಇಷ್ಟೊಂದು ಶಕ್ತಿಶಾಲಿ ಎನ್ನುವುದು ಗೊತ್ತಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಸಾವಿರಾರು ನೆಟ್ಟಿಗರು.

42 ಸೆಕೆಂಡಿನ ಈ ವಿಡಿಯೋಗೆ ಸುಮಾರು 27,000 ಜನರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ಧಾರೆ. 4,000 ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:27 pm, Thu, 18 August 22