Viral: ಕೆ-ಪಾಪ್‌ ಹಾಡಿಗೆ ಹೆಜ್ಜೆ ಹಾಕಿದ ಭರತನಾಟ್ಯ ಕಲಾವಿದೆಯರು; ವಿಡಿಯೋ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 08, 2025 | 3:11 PM

2024 ರ ಅಕ್ಟೋಬರ್‌ 18 ರಂದು ಬಿಡುಗಡೆಯಾದ ರೋಸ್‌ ಹಾಗೂ ಬ್ರೂನೋ ಮಾರ್ಸ್‌ ಅವರ APT ಕೆ-ಪಾಪ್‌ ಹಾಡು ಸಖತ್‌ ಹಿಟ್‌ ಆಗಿದ್ದು, ಈ ಹಾಡಿಕೆ ರೀಲ್ಸ್‌ ಮಾಡುವ ಟ್ರೆಂಡ್‌ ಕೂಡಾ ಶುರುವಾಗಿದೆ. ಬಹುತೇಕ ಹೆಚ್ಚಿನವರು ಇದೇ ಹಾಡಿಗೆ ಸ್ಟೈಲಿಶ್‌ ಸ್ಟೆಪ್ಸ್‌ ಹಾಕಿ ರೀಲ್ಸ್‌ ಅಪ್‌ಲೋಡ್‌ ಮಾಡ್ತಿದ್ದಾರೆ. ಅದೇ ರೀತಿ ಇಲ್ಲೊಂದು ಭರತನಾಟ್ಯ ಕಲಾವಿದೆಯರ ತಂಡವೊಂದು ಇದೇ ಹಾಡಿಗೆ ವಿಭಿನ್ನವಾಗಿ ನೃತ್ಯ ಮಾಡಿದ್ದು, ಈ ಭರತನಾಟ್ಯದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ದೃಶ್ಯಗಳು ಸಖತ್‌ ವೈರಲ್‌ ಆಗುತ್ತಿವೆ. ಇದೀಗ ಇಲ್ಲೊಂದು ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ಪಾಪ್‌ ಹಾಡಿಗೆ ಕಲಾವಿದೆಯರ ಭರಟನಾಟ್ಯ ಸ್ಟೆಪ್ಸ್‌ ಹಾಕಿದ್ದಾರೆ. ಹೌದು 2024 ರ ಅಕ್ಟೋಬರ್‌ 18 ರಂದು ಬಿಡುಗಡೆಯಾದ ರೋಸ್‌ ಹಾಗೂ ಬ್ರೂನೋ ಮಾರ್ಸ್‌ ಅವರ APT ಕೆ-ಪಾಪ್‌ ಹಾಡಿಗೆ ಭರತನಾಟ್ಯ ಮಾಡಿದ್ದು, ಕಲಾವಿದೆಯರ ನೃತ್ಯಕ್ಕೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ರೋಸ್‌ ಹಾಗೂ ಬ್ರೂನೋ ಮಾರ್ಸ್‌ ಅವರ APT ಕೆ-ಪಾಪ್‌ ಹಾಡಿಗೆ ಡ್ಯಾನ್ಸರ್ಸ್‌ಗಳು ಸ್ಟೈಲಿಶ್‌ ಹಾಕಿ ಹೆಜ್ಜೆ ಹಾಕಿರುವ ರೀಲ್ಸ್‌ ವಿಡಿಯೋಗಳನ್ನು ನೋಡಿರುತ್ತೀರಿ ಅಲ್ವಾ. ಇಲ್ಲೊಂದು ವಿಡಿಯೋ ವೈರಲ್‌ ಆಗಿದ್ದು, ಭರತನಾಟ್ಯ ಕಲಾವಿದೆಯರು ಈ ಹಾಡಿಗೆ ವಿಭಿನ್ನವಾಗಿ ಹೆಜ್ಜೆ ಹಾಕಿದ್ದಾರೆ. ಭರತನಾಟ್ಯ ಕಲಾವಿದೆ ಮೋಹನ (mohana_divinetoes) ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ.
ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ 5 ರಿಂದ 6 ಭರತನಾಟ್ಯ ಕಲಾವಿದೆಯರು ರೋಸ್‌ ಹಾಗೂ ಬ್ರೂನೋ ಮಾರ್ಸ್‌ ಅವರ APT ಕೆ-ಪಾಪ್‌ ಹಾಡಿಗೆ ಬಹಳ ಸೊಗಸಾಗಿ ಭರತನಾಟ್ಯ ಮಾಡುತ್ತಿರುವಂತಹ ಸುಂದರ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಹಳೆ ಗಾಡಿಗಳ ಪಾರ್ಟ್ಸ್‌ ಬಳಸಿ ಕನಸಿನ ಮನೆ ನಿರ್ಮಿಸಿದ ವ್ಯಕ್ತಿ; ಹೇಗಿದೆ ನೋಡಿ ಕೇರಳದ ಡಿಫರೆಂಟ್‌ ಮನೆ

ಡಿಸೆಂಬರ್‌ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಟ್ರೆಂಡ್‌ ವಿನ್ನರ್‌ ನೀವೇʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆಹಾ ಎಂಥಾ ಅದ್ಭುತ ನೃತ್ಯʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಭರತನಾಟ್ಯ ಕಲಾವಿದೆಯರ ನೃತ್ಯಕ್ಕೆ ಫುಲ್‌ ಫಿದಾ ಆಗಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ