Video Viral: ಶೂ ಒಳಗೆ ಕಾಲು ಹಾಕಲು ಮುಂದಾಗುತ್ತಿದ್ದಂತೆ ಹೆಡೆ ಎತ್ತಿ ನಿಂತ ನಾಗರ ಹಾವು; ವಿಡಿಯೋ ವೈರಲ್
ವೈರಲ್ ಆಗಿರುವ ವಿಡಿಯೋದಲ್ಲಿ ಶೂ ಒಳಗೆ ಬೃಹತ್ ನಾಗರ ಹಾವು ಬೆಚ್ಚಗೆ ಮಲಗಿರುವುದನ್ನು ಕಾಣಬಹುದು. ಶೂ ಒಳಗಿನಿಂದ ಏಕಾಏಕಿ ಹಾವು ಬುಸುಗುಟ್ಟುತ್ತಾ ಹೆಡೆ ಎತ್ತಿ ನಿಂತಿದ್ದು, ಈ ಘಟನೆ ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ.
ಮಳೆಗಾಲದಲ್ಲಿ ಹುಳು, ಹಾವು ಮನೆಗೆ ಬರುವುದು ಸರ್ವೇ ಸಾಮಾನ್ಯ ಸಂಗತಿ. ಮಳೆ ಮತ್ತು ಪ್ರವಾಹದಿಂದಾಗಿ ಹಾವುಗಳು ಹೆಚ್ಚಾಗಿ ಮನೆಗಳಿಗೆ ನುಗ್ಗುತ್ತವೆ. ಆದ್ದರಿಂದಲೇ ಮಳೆಗಾಲದಲ್ಲಿ ಶೂ, ಹೆಲ್ಮೆಟ್ ಮತ್ತು ಬಟ್ಟೆಗಳನ್ನು ಧರಿಸುವ ಮೊದಲು ಒಂದು ಬಾರಿ ಸರಿಯಾಗಿ ಪರೀಕ್ಷಿಸಿ ಧರಿಸುವುದು ತುಂಬಾ ಅಗತ್ಯ. ಇದೀಗ ವ್ಯಕ್ತಿಯೊಬ್ಬ ಶೂ ಒಳಗೆ ಕಾಲು ಹಾಕಲು ಮುಂದಾಗುತ್ತಿದ್ದಂತೆ ನಾಗರ ಹಾವೊಂದು ಹೆಡೆ ಎತ್ತಿ ನಿಂತ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
sarpmitra_neerajprajapat ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈ ಘಟನೆ ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ. ಜುಲೈ 13ರಂದು ಹಂಚಿಕೊಂಡಿರುವ ಈ ವಿಡಿಯೋ ಕೇವಲ 5 ದಿನಗಳಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. 792,439 ನೆಟ್ಟಿಗರು ವಿಡಿಯೋಗೆ ಲೈಕ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪರಸ್ಪರ ಅನ್ಫಾಲೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿಯೇ ಪತಿಗೆ ತಲಾಖ್ ನೀಡಿದ ದುಬೈ ರಾಜಕುಮಾರಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ಆಗಿರುವ ವಿಡಿಯೋದಲ್ಲಿ ಶೂ ಒಳಗೆ ಬೃಹತ್ ನಾಗರ ಹಾವು ಬೆಚ್ಚಗೆ ಮಲಗಿರುವುದನ್ನು ಕಾಣಬಹುದು. ಶೂ ಒಳಗಿನಿಂದ ಏಕಾಏಕಿ ಹಾವು ಬುಸುಗುಟ್ಟುತ್ತಾ ಹೆಡೆ ಎತ್ತಿ ನಿಂತಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:53 am, Thu, 18 July 24