Video: ದೇವತೆಯಂತೆ ಬಂದು ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯೆ

Video: ದೇವತೆಯಂತೆ ಬಂದು ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯೆ

ಅಕ್ಷತಾ ವರ್ಕಾಡಿ
|

Updated on: Jul 17, 2024 | 6:45 PM

ವಿಮಾನ ನಿಲ್ದಾಣದ ಫುಡ್ ಕೋರ್ಟ್ನಲ್ಲಿ 60ರ ವಯಸ್ಸಿನ ವ್ಯಕ್ತಿಗೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದು, ತಕ್ಷಣ ಅಲ್ಲೇ ಇದ್ದ ವೈದ್ಯೆಯೊಬ್ಬರು ದೇವತೆಯಂತೆ ಬಂದು ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಸಿಪಿಆರ್​​ ಮೂಲಕ ವ್ಯಕ್ತಿಯ ಪ್ರಾಣ ಉಳಿಸಿರುವ ವಿಡಿಯೋ ಇಲ್ಲಿದೆ ನೋಡಿ.

ಏಕಾಏಕಿ ಕುಸಿದು ಬಿದ್ದ ವ್ಯಕ್ತಿಗೆ ಲೇಡಿ ಡಾಕ್ಟರ್​​​​ ಸಿಪಿಆರ್​​ ನೀಡಿ ಮರುಜೀವ ನೀಡಿರುವ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನ ನಿಲ್ದಾಣದ ಟರ್ಮಿನಲ್​​ 2 ಫುಡ್ ಕೋರ್ಟ್ ಪ್ರದೇಶದಲ್ಲಿ 60 ವಯಸ್ಸಿನ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿದ್ದರು. ಏಕಾಏಕಿ ಘಟನೆ ಸಂಭವಿಸಿದ ಕಾರಣ ಅಲ್ಲಿಂದ ಪ್ರಯಾಣಿಕರು ಗಾಬರಿಕೊಂಡಿದ್ದಾರೆ. ಆದರೆ ವೈದ್ಯೆಯೊಬ್ಬರು ಕುಸಿದು ಬಿದ್ದ ವ್ಯಕ್ತಿ ಬಳಿಗೆ ಧಾವಿಸಿ ಸಿಪಿಆರ್​​ ಮಾಡಿ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ.  ವೃದ್ಧನಿಗೆ ಪ್ರಜ್ಞೆ ಬಂದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. @rishibagree ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಹಂಚಿಕೊಂಡ ಕೇವಲ ಕೆಲವೇ ಗಂಟೆಗಳಲ್ಲಿ 4ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ನೆಟ್ಟಿಗರಂತೂ ಈ ವೈದ್ಯಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: ಮಾನವೀಯತೆಗೆ ಸಾಕ್ಷಿ ಇದು, ಪ್ರವಾಹಕ್ಕೆ ಸಿಲುಕಿದ್ದ ಮುದ್ದಾದ ನಾಯಿ ಮರಿಗಳನ್ನು ರಕ್ಷಿಸಿದ 73ರ ವೃದ್ಧ