Viral Video: ವಾವ್ಹ್! ಇಳಿ ವಯಸ್ಸಲ್ಲೂ ತಾತಪ್ಪನ ಯೋಗಾ ಮೋಡಿ ನೋಡಿ..

ಇಳಿ ವಯಸ್ಸಿನಲ್ಲೂ ಯುವಕರು ಕೂಡಾ ನಾಚುವಂತೆ,ನೀರು ಕುಡಿದಷ್ಟೇ ಸರಳವಾಗಿ ಯೋಗಾಸನ ಮಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ತಾತಪ್ಪನ ಯೋಗ ಮೋಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Viral Video: ವಾವ್ಹ್! ಇಳಿ ವಯಸ್ಸಲ್ಲೂ ತಾತಪ್ಪನ  ಯೋಗಾ ಮೋಡಿ ನೋಡಿ..
Edited By:

Updated on: Mar 24, 2024 | 2:54 PM

ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಇದಕ್ಕೆ ವಯಸ್ಸಿನ ಮಿತಿಯಿಲ್ಲ ಯಾರು ಬೇಕಾದರೂ ಮಾಡಬಹುದಾಗಿದೆ. ಆದ್ರೆ ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಜಿಮ್ ಗೆ ಹೋಗಿ ವರ್ಕ್ಔಟ್ ಮಾಡುವ ಕಡೆಗೆ ಗಮನ ಹರಿಸುತ್ತಾರೆ. ಆದ್ರೆ ಇಲ್ಲೊಬ್ಬರು ತಾತಪ್ಪ ತನ್ನ ಇಳಿ ವಯಸ್ಸಿನಲ್ಲಿಯೂ ಅನಾಯಾಸವಾಗಿ ಯೋಗಾಸನ ಮಾಡುವ ಮೂಲಕ ಸಂತೋಷದಾಯಕವಾದ ಜೀವನ ನಡೆಸುತ್ತಿದ್ದಾರೆ. ಈ ಅಜ್ಜ ಯೋಗ ಮಾಡೋದು ನೋಡಿದ್ರೆ ಯೋಗ ಪಟುಗಳೇ ಹುಬ್ಬೇರಿಸಬೇಕು! ಹೌದು ನೀರು ಕುಡಿದಷ್ಟೇ ಸರಳವಾಗಿ ಯೋಗ ಮಾಡುತ್ತಾರೆ ಇವರು. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇವರ ಯೋಗ ಮೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ತಾತಪ್ಪ ನೀರು ಕುಡಿದಷ್ಟೇ ಸರಳವಾಗಿ ಯೋಗಾಸನ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಫೇಸ್ ಬುಕ್ ಪೇಜ್ ಒಂದರಲ್ಲಿ ಶೇರ್ ಆಗಿರುವ 42 ಸೆಕೆಂಡುಗಳ ಈ ವಿಡಿಯೋದಲ್ಲಿ ನೆಲದ ಮೇಲೆ ಪದ್ಮಾಸನ ಸ್ಥಿತಿಯಲ್ಲಿ ಕುಳಿತಂತಹ ಅಜ್ಜ ಸಂಪೂರ್ಣವಾಗಿ ದೇಹ ಬೆಂಡ್ ಮಾಡಿ ಯುವಕರು ಕೂಡಾ ನಾಚುವಂತೆ, ನೀರು ಕುಡಿದಷ್ಟೇ ಸರಳವಾಗಿ ಯೋಗಾಸನ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ನವ ದಂಪತಿ ವಿರುದ್ಧ ಎಫ್‌ಐಆರ್ ದಾಖಲು

ಮಾರ್ಚ್ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಏಳು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನನ್ನ ತಂದೆಯೂ ಅವರ ಇಳಿ ವಯಸ್ಸಿನಲ್ಲಿ ಇದೇ ರೀತಿ ಯೋಗಾಭ್ಯಾಸ ಮಾಡುತ್ತಿದ್ದರುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅದ್ಭುತವಾದ ಯೋಗ ಪ್ರತಿಭೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇವರ ಕೌಶಲ್ಯ ನಿಜಕ್ಕೂ ಮ್ಯಾಜಿಕ್ʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಇಳಿ ವಯಸ್ಸಿನಲ್ಲಿಯೂ ಈ ವ್ಯಕ್ತಿಯ ಉತ್ಸಾಹವನ್ನು ಕಂಡು ಬೆರಗಾಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ