Ganesh Festival: ಇದು ಬಹಳ ಸಣ್ಣ ಅಂಶವೆನ್ನಿಸಬಹುದು. ಆದರೂ ನನಗೆ ಅಚ್ಚರಿಯಾಗುತ್ತಿದೆ, ಪೊಲೀಸರು ಚಪ್ಪಲಿ, ಬೂಟುಗಳಿಲ್ಲದೆ ಅದ್ಹೇಗೆ ರಸ್ತೆಯಲ್ಲಿ ನರ್ತಿಸಿದ್ದಾರೆ? ಅರೆ, ಆ ಹಣ್ಣಣ್ಣು ಅಜ್ಜಿ ಮತ್ತು ಅಜ್ಜ ಎಷ್ಟು ಉತ್ಸಾಹದಿಂದ ಕುಣಿದಿದ್ದಾರೆ. ಇದು ನನ್ನ ಫೇವರಿಟ್ ಹಾಡು. ನಾನು ಕೆಲವರ್ಷಗಳ ಹಿಂದೆ ಐಟಿಯಲ್ಲಿದ್ದಾಗ ಇಯರ್ ಫೋನ್ ಹಾಕಿಕೊಂಡು ಈ ಹಾಡೊಂದನ್ನೇ ಕೇಳುತ್ತಿದ್ದೆ. ಈ ಹಾಡು ನನ್ನನ್ನು ಸದಾ ಉತ್ಸಾಹಿಯನ್ನಾಗಿಡುತ್ತದೆ; ರೆಡ್ಡಿಟ್ನಲ್ಲಿ ವೈರಲ್ ಆಗಿರುವ ಈ ವಿಡಿಯೋದಡಿ ಅನೇಕರು ಹೀಗೆ ಪ್ರತಿಕ್ರಿಯಿಸುತ್ತಿದ್ದಾರೆ. ವಯಸ್ಸಿನ ಹಂಗಿಲ್ಲದೆ, ಹುದ್ದೆ ಅಂತಸ್ತುಗಳ ಅರಿವಿಲ್ಲದೆ, ಲಿಂಗಬೇಧವೂ ಇಲ್ಲದೆ ಸ್ವಯಂಪ್ರೇರಣೆಯಿಂದ ಹೀಗೆ ರಸ್ತೆಯಲ್ಲಿ ನರ್ತಿಸುತ್ತಿದ್ದಾರೆಂದರೆ ಇದು ಖಂಡಿತ ಮುಂಬೈನ (Mumbai) ಗಣೇಶೋತ್ಸವವೇ ಎಂದು ನೆಟ್ಟಿಗರು ಅಂದಾಜಿಸುತ್ತಿದ್ದಾರೆ.
ಇದನ್ನೂ ಓದಿ : Viral Video: ಗಿನ್ನೀಸ್ ವಿಶ್ವ ದಾಖಲೆ; ಕಣ್ಣು ಮುಚ್ಚಿ ಚೆಸ್ ಜೋಡಿಸಿದ 10 ವರ್ಷದ ಪುನೀತಾಮಲರ್
ಇದೇ ಭಾರತದ ವೈಶಿಷ್ಟ್ಯ. ಪ್ರಪಂಚದ ಇತರೇ ಭಾಗಗಳಿಗಿಂತ ಭಿನ್ನವೆನ್ನಿಸುವುದು ಇದಕ್ಕೇ. ನಾನು ಇಲ್ಲಿ ಹುಟ್ಟಿರುವುದು ನನ್ನ ಅದೃಷ್ಟ ಎಂದಿದ್ದಾರೆ ಒಬ್ಬರು. ನಾನು ಮುಂದಿನ ವರ್ಷ ಗಣೇಶೋತ್ಸವದ ಸಂದರ್ಭದಲ್ಲಿ ಮುಂಬೈನಲ್ಲಿರಲೇಬೇಕು ಎಂದಿದ್ಧಾರೆ ಇನ್ನೊಬ್ಬರು. ಇಂಡಿಯಾದ ಎಲ್ಲಾ ಅಂಕಲ್ಗಳ ಉತ್ಸಾಹ ಮತ್ತು ನೃತ್ಯ ಒಂದೇ ರೀತಿಯಾಗಿರುತ್ತದೆಯಾ? ಎಂದು ಕೇಳಿದ್ದಾರೆ ಮತ್ತೊಬ್ಬರು.
18 ಗಂಟೆಗಳ ಹಿಂದೆ ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು 4,900 ಜನರು ಲೈಕ್ ಮಾಡಿದ್ದಾರೆ. ಸುಮಾರು 90 ಜನರು ಪ್ರತಿಕ್ರಿಯಿಸಿದ್ದಾರೆ. ಗಣೇಶನ ಮೇಲಿನ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಸಾಟಿಯೇ ಇಲ್ಲ ಎಂದು ಅನೇಕರು ಹೇಳಿದ್ದಾರೆ. ವಿವಿಧ ಸಮುದಾಯಗಳು ಒಟ್ಟಿಗೇ ಬೆರೆಯುವ ಇಂಥ ಹಬ್ಬ, ಉತ್ಸವಗಳು ನಿಜಕ್ಕೂ ಚೇತೋಹಾರಿ ಎಂದಿದ್ದಾರೆ ಕೆಲವರು.
ಇದನ್ನೂ ಓದಿ : Viral Video: ತನ್ನ ಕಿವುಡು ನಾಯಿಯೊಂದಿಗೆ ಸಂಜ್ಞಾಭಾಷೆಯಲ್ಲಿ ಸಂವಹನ ನಡೆಸುವ ವ್ಯಕ್ತಿ
ಪೊಲೀಸರೂ ಮನುಷ್ಯರೇ, ಅಲ್ಲಿರುವವರೆಲ್ಲರೂ ಮನುಷ್ಯರೇ. ಅದಕ್ಕೇ ಕುಣಿದು ಕುಪ್ಪಳಿಸಿದ್ಧಾರೆ. ನನಗೂ ಹೀಗೆ ಕುಣಿಯಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು. ಈತನಕ ನಾನು ಹೀಗೆ ಕುಣಿದೇ ಇಲ್ಲ. ಒಮ್ಮೆಯಾದರೂ ಮುಂಬೈಗೆ ಹೋಗಿ ಗಣೇಶೋತ್ಸವದಲ್ಲಿ ಮಗುವಿನಂತೆ ಕುಣಿಯಬೇಕು ಎಂದು ಹಲವಾರು ಜನರು ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ