ಪ್ರಯಾಣಿಕರಿಗೆ ಟಿಕೆಟ್ ತೆಗೆದುಕೊಳ್ಳಲು ನೆರವಾಗುವ ರೈಲ್ವೆ ಉದ್ಯೋಗಿಯೊಬ್ಬರ ವೇಗದ ಕಾರ್ಯನಿರ್ವಹಣೆಯು ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದೆ. ಅವಡುಗಚ್ಚುವಂತಿರುವ ಈ ವಿಡಿಯೊದಲ್ಲಿ ರೈಲ್ವೆ ಉದ್ಯೋಗಿಯೊಬ್ಬರು ಅತ್ಯಂತ ವೇಗವಾಗಿ ಟಿಕೆಟ್ಗಳನ್ನು ಬುಕ್ ಮಾಡಿದ್ದಾರೆ. ಈ ಮನುಷ್ಯನ ಪ್ರಾವಿಣ್ಯತೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೊ ನೋಡಿದರೆ ಖಂಡಿತ ನೀವೂ ಮೆಚ್ಚಿಕೊಳ್ಳುತ್ತೀರಿ.
ಟ್ವಿಟರ್ನಲ್ಲಿ ಶೇರ್ ಮಾಡಿರುವ ವಿಡಿಯೊ ತುಣುಕಿನಲ್ಲಿ ವ್ಯಕ್ತಿಯೊಬ್ಬರು ಟಿಕೆಟ್ ವೆಂಡಿಂಗ್ ಯಂತ್ರದ ಎದುರು ನಿಂತು ಟಿಕೆಟ್ಗಳನ್ನು ವೇಗವಾಗಿ ನೀಡುತ್ತಿದ್ದಾರೆ. ತಮ್ಮ ಹಿಂದೆ ನಿಂತಿರುವ ಜನರಿಗಾಗಿ ಮಿಂಚಿನ ವೇಗದಲ್ಲಿ ಕಂಪ್ಯೂಟರ್ ಸ್ಕ್ರೀನ್ ಮೇಲೆ ಕೈಯಾಡಿಸುತ್ತಾ ಟಿಕೆಟ್ಗಳನ್ನು ಕೊಡುತ್ತಿದ್ದಾರೆ.
‘ಭಾರತೀಯ ರೈಲ್ವೆಯ ಯಾವುದೋ ನಿಲ್ದಾಣದಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ 15 ಸೆಕೆಂಡ್ಗಳಲ್ಲಿ ಮೂವರು ಪ್ರಯಾಣಿಕರಿಗೆ ಟಿಕೆಟ್ ಕೊಟ್ಟಿದ್ದಾರೆ’ ಎಂದು ವಿಡಿಯೊದೊಂದಿಗೆ ಶೇರ್ ಮಾಡಿರುವ ಒಕ್ಕಣೆಯು ವಿವರಿಸುತ್ತದೆ.
Somewhere in Indian Railways this guy is so fast giving tickets to 3 passengers in 15 seconds. pic.twitter.com/1ZGnirXA9d
— Mumbai Railway Users (@mumbairailusers) June 28, 2022
ಈ ವಿಡಿಯೊವನ್ನು 8 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಈ ವ್ಯಕ್ತಿಯ ಚುರುಕುತನ ಮತ್ತು ಕೌಶಲವನ್ನು ಸಾಕಷ್ಟು ಜನರು ಮೆಚ್ಚಿಕೊಂಡಿದ್ದಾರೆ. ಈತನ ಸಾಮರ್ಥ್ಯ ಗುರುತಿಸಿ, ಸೂಕ್ತ ಮನ್ನಣೆ ಒದಗಿಸಿಕೊಡಬೇಕು. ಭಾರತೀಯ ರೈಲ್ವೆಯ ಅಧಿಕಾರಿಗಳು ಈ ಕೆಲಸ ಮಾಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಕೆಲವರು ಈ ವ್ಯಕ್ತಿಯನ್ನು ನವಿ ಮುಂಬೈ ನಿಲ್ದಾಣದಲ್ಲಿ ನೋಡಿರುವುದಾಗಿ ನೆನಪು ಹಂಚಿಕೊಂಡಿದ್ದಾರೆ.
ಈ ವೈರಲ್ ಟ್ವೀಟ್ಗೆ ಬಂದಿರುವ ಕೆಲ ಪ್ರತಿಕ್ರಿಯೆಗಳ ಸ್ಯಾಂಪಲ್ ಹೀಗಿದೆ ನೋಡಿ…
Software speed also good otherwise he need to wait next window to open ???
— pakit-patrakar (@msddhat) June 29, 2022
Itna fast train ka ticket milega to zindagi me kabhi line nai lagegi
— Vinayak Naik (@praddytweeter05) June 28, 2022
Kudos to such efficient, diligent, skilled & talented Railway official. Various Govt Deptts cud learn from this example to improve services to public & such efficient shd be felicitated & awarded to inspire others
— Vineet Joshi (@VineetJ46459702) June 29, 2022
Published On - 11:15 am, Sun, 3 July 22