ಹೈದರಾಬಾದ್: ಕಳೆದ ವರ್ಷ ಕೊರೊನಾದಿಂದ ಆಸ್ಪತ್ರೆ ಹಾಗೂ ಕೊವಿಡ್ ಸೆಂಟರ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಮನರಂಜನೆ ಮಾಡಲೆಂದು ವೈದ್ಯರು ಪಿಪಿಇ ಕಿಟ್ ಧರಿಸಿ ಕೊರೊನಾ ರೋಗಿಗಳ ನಡುವಲ್ಲೇ ಡ್ಯಾನ್ಸ್ ಮಾಡಿದ ಕೆಲವು ವಿಡಿಯೋಗಳು ವೈರಲ್ ಆಗಿದ್ದವು. ಪಿಪಿಇ ಕಿಟ್ ಧರಿಸಿ ದಿನವಿಡೀ ಹೆಣಗಾಡುವ ವೈದ್ಯರು ತಮ್ಮ ಕಷ್ಟವನ್ನು ಬದಿಗಿಟ್ಟು ಈ ರೀತಿ ಡ್ಯಾನ್ಸ್ ಮಾಡಿದ್ದಕ್ಕೆ ಕೆಲವರಿಂದ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಇನ್ನು ಕೆಲವರು ವಿರೋಧ ಕೂಡ ವ್ಯಕ್ತಪಡಿಸಿದ್ದರು. ಇದೀಗ ತೆಲಂಗಾಣದಲ್ಲಿ ನರ್ಸ್ ಒಬ್ಬರು ಸ್ವಾತಂತ್ರ್ಯ ದಿನಾಚರಣೆಯಂದು ಸೀರೆಯುಟ್ಟು ಆಸ್ಪತ್ರೆಯೊಳಗೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ನರ್ಸ್ಗೆ ಕೆಲಸ ಕಳೆದುಕೊಳ್ಳುವ ಆತಂಕ ಕೂಡ ಎದುರಾಗಿದೆ.
ತೆಲಂಗಾಣದ ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇರಳ ಮೂಲದ ನರ್ಸ್ ಒಬ್ಬರು ಸೀರೆಯುಟ್ಟು ಡ್ಯಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಂಗಲಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಂಟ್ರಾಕ್ಟ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ರಜನಿಗೆ ಈಗ ಮೇಲಧಿಕಾರಿಗಳಿಂದ ನೋಟಿಸ್ ಜಾರಿಯಾಗಿದೆ. ಈ ರೀತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದೊಳಗೆ ನೃತ್ಯ ಮಾಡಲು ಅನುಮತಿ ನೀಡಿದ್ದಕ್ಕೆ ಹಾಗೂ ನೃತ್ಯ ಮಾಡಿದ್ದಕ್ಕೆ ಆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಮತ್ತು ನರ್ಸ್ ರಜನಿ ಇಬ್ಬರಿಗೂ ನೋಟಿಸ್ ನೀಡಲಾಗಿದೆ.
“బుల్లెట్ బండి” అందరికీ కలిసిరాదులే..
మొన్నో పెండ్లికుతూరు స్టెప్ ఏస్తే తెగ షేర్ చేసారని.. ఈ నర్స్ మ్మ కూడా ట్రై చేసింది. కానీ సీన్ రివర్స్.. పని టైములో గంతులేంటని కలెక్టర్ గుస్సా అయ్యాడంట.. ఫాఫమ్#BulletBandi #nurse #Dance #Song #Bulletsong #Collector #Telangana #AndhraPradesh pic.twitter.com/ooa2fVoPQ6— Vidya Sagar Gunti (@GVidya_Sagar) August 21, 2021
ತನ್ನ ಸೋಷಿಯಲ್ ಮೀಡಿಯಾ ಪೇಜಿನಲ್ಲಿ ಅಪ್ಡೇಟ್ ಮಾಡಲು ನರ್ಸ್ ರಜನಿ ಸುಮ್ಮನೆ ಈ ಡ್ಯಾನ್ಸ್ ಮಾಡಿದ್ದಾಗಿಯೂ, ಇದಕ್ಕೆ ಯಾವುದೇ ಅನುಮತಿ ಪಡೆದಿಲ್ಲವೆಂದೂ ಆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಅನೇಕರು ಈ ವಿಡಿಯೋ ಮಾಡಿದ್ದಕ್ಕೆ ನೋಟಿಸ್ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತನ್ನ ಸಹೋದ್ಯೋಗಿಗಳ ಜೊತೆ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ ಆ ನರ್ಸ್ಗೆ ನೋಟಿಸ್ ನೀಡಿದ್ದು ಸರಿಯಲ್ಲ ಎಂದು ಅಲ್ಲಿನ ನರ್ಸ್ಗಳು ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲೂ ಅನೇಕರು ವಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಗೆ ನೀಡಲಾಗಿರುವ ನೋಟಿಸ್ ಅನ್ನು ಹಿಂಪಡೆಯುವ ಸಾಧ್ಯತೆಯೂ ಇದೆ. ನೆಟ್ಟಿಗರು ಈ ವಿಡಿಯೋಗೆ ತೆಲಂಗಾಣದ ಐಟಿ ಸಚಿವ ಕೆ. ತಾರಕ ರಾಮರಾವ್ ಅವರನ್ನೂ ಟ್ಯಾಗ್ ಮಾಡಿ, ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Viral Video: ಒಂದು ಜಿಂಕೆಗಾಗಿ 6 ಸಿಂಹಗಳ ಕಿತ್ತಾಟ; ಭಯಾನಕ ವಿಡಿಯೋ ವೈರಲ್
Viral Video: 22 ಅಡಿ ಉದ್ದದ ಹಾವನ್ನು ಹೆಗಲ ಮೇಲೆ ಹಾಕಿಕೊಂಡು ಹೋದ ವ್ಯಕ್ತಿ; ಮೈ ಜುಂ ಎನಿಸುವ ವಿಡಿಯೋ ಇಲ್ಲಿದೆ
(Viral Video of Telangana Nurse Dancing on Duty at Health Care Center Lands Her in Trouble)
Published On - 1:03 pm, Mon, 23 August 21