ಸಾಮಾನ್ಯವಾಗಿ ನಾವೆಲ್ಲರೂ ಕೈಯಲ್ಲೇ ಸಿಪ್ಪೆ ಸುಳಿದು ಬಾಳೆಹಣ್ಣನ್ನು ತಿನ್ನೋದು ಅಲ್ವಾ. ಆದ್ರೆ ಇಲ್ಲೊಬ್ರು ಮಹಿಳೆ ದೊಡ್ಡ ದೊಡ್ಡ ಫೈವ್ ಸ್ಟಾರ್ ರೆಸ್ಟೋರೆಂಟ್‌ಗಳಲ್ಲಿ ಫೋರ್ಕ್ ಮತ್ತು ಚಾಕುವಿನ ಸಹಾಯದಿಂದ ಆಹಾಗಳನ್ನು ತಿನ್ನುವಂತೆ ಬಾಳೆಹಣ್ಣನ್ನು ತಿಂದಿದ್ದಾರೆ. ಆಕೆ ಸಭ್ಯವಾಗಿ ಬಾಳೆಹಣ್ಣು ತಿನ್ನುವುದು ಹೇಗೆಂದು ಹೇಳಿಕೊಟ್ಟಿದ್ದು, ಆಕೆ ಒಂದು ಪ್ಲೇಟ್ ಅಲ್ಲಿ ಬಾಳೆಹಣ್ಣನ್ನು ಇಟ್ಟು ಸ್ಟೈಲ್ ಆಗಿ ಫೋರ್ಕ್ ಮತ್ತು ಚಾಕುವಿನಿಂದ ಸಿಪ್ಪೆ ಸುಳಿದು ಆ ಹಣ್ಣನ್ನು ತಿಂದಿದ್ದಾರೆ. ಈ ಟ್ಯುಟೋರಿಯಲ್ ವಿಡಿಯೋ ಫುಲ್ ವೈರಲ್ ಆಗುತ್ತಿದ್ದು, ಒಂದು ಬಾಳೆಹಣ್ಣನ್ನು ತಿನ್ನಲು ಇಷ್ಟೆಲ್ಲಾ ಕಷ್ಟ ಪಡ್ಬೇಕಾ ಎಂದು ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.
jaskaran_singh_sidhu ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಸಭ್ಯ ರೀತಿಯಲ್ಲಿ ಬಾಳೆಹಣ್ಣು ತಿನ್ನುವುದು ಹೇಗೆ ಎಂಬುದನ್ನು ಹೇಳಿ ಕೊಡುವ ದೃಶ್ಯವನ್ನು ಕಾಣಬಹುದು. ಮೊದಲಿಗೆ ಒಂದು ಪ್ಲೇಟ್ ಅಲ್ಲಿ ಬಾಳೆಹಣ್ಣನ್ನು ಇಟ್ಟು ಕೈಗಳ ಬದಲಿಗೆ ಚಾಕು ಮತ್ತು ಫೋರ್ಕ್ ಸಹಾಯದಿಂದ ಹಣ್ಣಿನ ಎರಡೂ ತುದಿಗಳನ್ನು ಕಟ್ ಮಾಡಿ ನಂತರ ಚಾಕುವಿನ ಸಹಾಯದಿಂದ ಹಣ್ಣಿನ ಎರಡು ಬದಿಯನ್ನು ಕಟ್ ಮಾಡಿ ಸಿಪ್ಪೆ ತೆಗೆದು, ನಂತರ ಚಿಕ್ಕ ಚಿಕ್ಕ ತುಂಡು ಬಾಳೆ ಹಣ್ಣನ್ನು ತಿನ್ನಬೇಕು ಎಂದು ಹೇಳಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸ್ ಕೈಗೆ ಸಿಕ್ಕಿಬಿದ್ದ ಯುವತಿ; ಫೈನ್ ಕಟ್ಟುವುದನ್ನು ತಪ್ಪಿಸಲು ಮಾಡಿದ್ದೇನು ನೋಡಿ…
ಡಿಸೆಂಬರ್ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 12.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈಕೆ ಒಂದು ಬಾಳೆಹಣ್ಣು ತಿಂದು ಮುಗಿಸುವ ಹೊತ್ತಿಗೆ ನಾನು ಹತ್ತಾರು ಬಾಳೆಹಣ್ಣು ತಿಂದಿರುತ್ತೇನೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡೊಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಒಂದು ಹಣ್ಣು ತಿನ್ನಲುಇಷ್ಟು ತಾಳ್ಮೆ ನನಗಿಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಷ್ಟೆಲ್ಲಾ ಕಷ್ಟ ಪಡ್ಬೇಕಾ ಬಾಳೆಹಣ್ಣು ತಿನ್ನಲುʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ