ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸ್ ಕೈಗೆ ಸಿಕ್ಕಿಬಿದ್ದ ಯುವತಿ; ಫೈನ್ ಕಟ್ಟುವುದನ್ನು ತಪ್ಪಿಸಲು ಮಾಡಿದ್ದೇನು ನೋಡಿ…
ಹೈಲ್ಮೆಟ್ ಧರಿಸದೆ, ಸೀಟ್ ಬೆಲ್ಟ್ ಧರಿಸದೆ ಹೀಗೆ ವಾಹನ ಚಲಾಯಿಸುವ ಸಂದರ್ಭದಲ್ಲಿ ಟ್ರಾಫಿಕ್ ರೂಲ್ಸ್‌ಗಳನ್ನು ಬ್ರೇಕ್ ಮಾಡಿದ್ರೆ, ಟ್ರಾಫಿಕ್ ಪೊಲೀಸರು ದಂಡ ವಿಧಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವತಿ ಕೂಡಾ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದು, ಫೈನ್ ಕಟ್ಟುವುದನ್ನು ತಪ್ಪಿಸಲು ಆಕೆ ಪೊಲೀಸಪ್ಪನ ಜೊತೆ ಶಿಂಚನ್ ಕಾರ್ಟೂನ್ ಧ್ವನಿಯಲ್ಲಿ ಮಾತನಾಡಿದ್ದಾಳೆ. ಇವರಿಬ್ಬರ ನಡುವಿನ ತಮಾಷೆಯ ಮಾತುಕತೆ ಇದೀಗ ಫುಲ್ ವೈರಲ್ ಆಗಿದೆ.
ಸ್ಪೀಡ್ ಆಗಿ ವಾಹನ ಚಲಾಯಿಸಿದರೆ, ಹೈಲ್ಮೆಟ್, ಸೀಟ್‌ಬೆಲ್ಟ್ ಧರಿಸದೆ ವಾಹನ ಚಲಾಯಿಸಿದರೆ ಹೀಗೆ ವಾಹನ ಚಲಾಯಿಸುವ ಸಂದರ್ಭದಲ್ಲಿ ಸವಾರರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ ಟ್ರಾಫಿಕ್ ಪೊಲೀಸರು ಇಂತಿಷ್ಟು ದಂಡ ವಿಧಿಸುತ್ತಾರೆ. ದಂಡ ಪಾವತಿಸುವುದನ್ನು ತಪ್ಪಿಸಲು ಕೆಲವೊಬ್ಬರು ಹಲವಾರು ಸರ್ಕಸ್‌ಗಳನ್ನೇ ಮಾಡುತ್ತಾರೆ. ಅದೇ ರೀತಿ ಅದೇ ರೀತಿ ಇಲ್ಲೊಬ್ಬ ಯುವತಿ ಕೂಡಾ ಹೆಲ್ಮೆಟ್ ಧರಿಸದೆ ರಾಂಗ್ ಸೈಡ್ ಅಲ್ಲಿ ಸ್ಕೂಟಿ ಚಲಾಯಿಸುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದು, ಫೈನ್ ಕಟ್ಟುವುದನ್ನು ತಪ್ಪಿಸಲು ಆಕೆ ಪೊಲೀಸಪ್ಪನ ಜೊತೆ ಶಿಂಚನ್ ಕಾರ್ಟೂನ್ ಧ್ವನಿಯಲ್ಲಿ ಮಾತನಾಡಿದ್ದಾಳೆ. ಇವರಿಬ್ಬರ ನಡುವಿನ ತಮಾಷೆಯ ಮಾತುಕತೆ ಇದೀಗ ಫುಲ್ ವೈರಲ್ ಆಗಿದೆ.
ಹರಿಯಾಣದ ರೋಹ್ಟಕ್‌ನಲ್ಲಿ ಈ ಘಟನೆ ನಡೆದಿದ್ದು, ಹೆಲ್ಮೆಟ್ ಧರಿಸದೆ ರಾಂಗ್ ಸೈಡ್‌ನಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸ್ ಕೈಗೆ ಸಿಕ್ಕಿಬಿದ್ದ ಯುವತಿಯೊಬ್ಬಳು, ದಂಡ ಪಾವತಿಸುವುದನ್ನು ತಪ್ಪಿಸಲು ಶಿಂಚನ್ ಕಾರ್ಟೂನ್ ಧ್ವನಿಯಲ್ಲಿ ಪೊಲೀಸಪ್ಪನ ಜೊತೆ ತಮಾಷೆಯ ಮಾತುಕತೆ ನಡೆಸಿದ್ದಾಳೆ. ಹೌದು ಟ್ರಾಫಿಕ್ ಪೊಲೀಸ್ ಅಮನ್ ಕಟಾರಿಯಾ ಯುವತಿಯ ಬಳಿ ಈ ರೀತಿ ಧರಿಸದೆ ಓಡಾಡಿದರೆ ಯಮರಾಜ ಬಂದು ಕರೆದುಕೊಂಡು ಹೋಗ್ತಾನೆ ಎಂದು ಹೇಳಿದಾಗ ಯುವತಿ ಯಮರಾಜ ಯಾರು ನಿಮ್ಮ ತಂದೆಯೇ, ನಾನು ಶಿಂಚನ್ ನೋಹರಾ, ನನ್ನನ್ನು ಯಾರು ಕರೆದೊಯ್ಯಲು ಸಾಧ್ಯವಿಲ್ಲ ಎಂದು ಕಾರ್ಟೂನ್ ಧ್ವನಿಯಲ್ಲಿ ತಮಾಷೆಯಾಗಿ ಹೇಳುತ್ತಾಳೆ. ನಂತರ ಅಲ್ಲಿದ್ದ ಇತರ ವ್ಯಕ್ತಿಗಳು ಇವರ ಮಧ್ಯೆ ಮಾತುಕತೆ ನಡೆಯುವ ಸಂದರ್ಭದಲ್ಲಿ ಬಂದಿದ್ದು, ಅವರನ್ನು ಕಂಡ ಯುವತಿ ಇವರೇ ನನ್ನ ದಂಡ ಪಾವತಿಸುತ್ತಾರೆ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದಾಳೆ.
ಇದನ್ನೂ ಓದಿ: ಹಿಮ್ಮುಖವಾಗಿ ಕುಳಿತು ಹೈವೇ ರೋಡಲ್ಲಿ ಸ್ಕೂಟಿ ಓಡಿಸಿದ ವ್ಯಕ್ತಿ; ವಿಡಿಯೋ ವೈರಲ್
amarkatariaofficial ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 1.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅದೇ ಹುಡುಗರು ಯಾರಾದ್ರೂ ಹೀಗೆ ಮಾತಾಡಿದ್ರೆ ಅವರಿಗೆ ಲಾಟಿಯಲ್ಲಿ ಪೆಟ್ಟು ಬೀಳುತ್ತಿತ್ತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ತುಂಬಾನೇ ಅತಿಯಾಯಿತುʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ