Viral Video: ಅಯ್ಯೋ ದೇವಾ ಮನೆಯಲ್ಲಿ ಹುಡುಗರು ಹೀಗೆಲ್ಲ ಮಾಡುತ್ತಾರಾ? ಮಂಗಳೂರು ಹುಡುಗನಿಗೆ ಬೇಗ ಮದುವೆಯಾಗಿ ಎಂದ ನೆಟ್ಟಿಗರು

|

Updated on: Feb 22, 2023 | 3:09 PM

ಈ ಇನ್ಟಾಗ್ರಾಮ್ ರೀಲ್ಸ್​ನಲ್ಲಿ ಟ್ರೆಂಡಿಂಗ್ ಹಾಡುಗಳು ಎಲ್ಲರ ಬಾಯಿಯಲ್ಲಿಯೂ ಗೊಣಗುತ್ತಾ ಇರುತ್ತದೆ. ಇಲ್ಲೊಬ್ಬರು ನಾವು ಮನೆಯಲ್ಲಿ ಒಬ್ಬರೇ ಇದ್ದಾಗ ಯಾವ ರೀತಿ ಹಾಡುತ್ತೇವೆ ಎಂಬ ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Viral Video: ಅಯ್ಯೋ ದೇವಾ ಮನೆಯಲ್ಲಿ ಹುಡುಗರು ಹೀಗೆಲ್ಲ ಮಾಡುತ್ತಾರಾ? ಮಂಗಳೂರು ಹುಡುಗನಿಗೆ ಬೇಗ ಮದುವೆಯಾಗಿ ಎಂದ ನೆಟ್ಟಿಗರು
ವೈರಲ್ ವಿಡಿಯೊ
Follow us on

ಇನ್ಟಾಗ್ರಾಮ್ ರೀಲ್ಸ್​ನಲ್ಲಿ ಟ್ರೆಂಡಿಂಗ್ ಹಾಡುಗಳು ಎಲ್ಲರ ಬಾಯಿಯಲ್ಲಿಯೂ ಗೊಣಗುತ್ತಾ ಇರುತ್ತದೆ. ಇಲ್ಲೊಬ್ಬರು ನಾವು ಮನೆಯಲ್ಲಿ ಒಬ್ಬರೇ ಇದ್ದಾಗ ಯಾವ ರೀತಿ ಹಾಡುತ್ತೇವೆ ಎಂಬ ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಹುಡುಗರು ಹೇಗೆಲ್ಲ ಮನೆ ಕೆಲಸ ಮಾಡುತ್ತಾರೆ ಎಂಬುದನ್ನು ಕೂಡ ಈ ವಿಡಿಯೊದಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್​​ನ್ನು ಹೆಚ್ಚಾಗಿ ಎಲ್ಲರೂ ಬಳಕೆ ಮಾಡುತ್ತಾರೆ. ಅದರಲ್ಲೂ ಯುವಜನತೆ ಇನ್ಸ್ಟಾಗ್ರಾಮ್ ಬಳಕೆ ಮಾಡುವುದರಲ್ಲಿ ಎತ್ತಿದ ಕೈ. ಅವರಿಗೆ ಕಾಲೇಜ್‌ನಲ್ಲಿ ಕಲಿಸಿದ ಪಾಠ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇನ್ಟಾಗ್ರಾಮ್ ರೀಲ್ಸ್​ನಲ್ಲಿ ಬರುವ ಟ್ರೆಂಡಿಂಗ್ ಹಾಡುಗಳ ಬಗ್ಗೆ ಖಂಡಿತವಾಗಿಯೂ ನೆನಪಿರುತ್ತದೆ. ಬೇಕಾದರೆ ದಿನಪೂರ್ತಿ ಅದೇ ಹಾಡುಗಳನ್ನು ಹಾಡುತ್ತಾ ಕುಳಿತಿರುತ್ತಾರೆ.

ಜೊತೆಗೆ ಇನ್ಟಾಗ್ರಾಮ್ ರೀಲ್ಸ್ ಹಾಡುಗಳನ್ನು ಹಾಡುತ್ತಾ, ಸ್ನೇಹಿತರ, ಮನೆಯವರ ತಲೆಯನ್ನು ತಿನ್ನುತ್ತಿರುತ್ತಾರೆ. ಏನೇ ಕೆಲಸ ಮಾಡಿದರು ಇದೇ ಹಾಡುಗಳನ್ನು ಹಾಡುತ್ತಾ ಕೆಲಸ ಮಾಡುತ್ತಾರೆ. ಇನ್ನೂ ಮನೆಯಲ್ಲಿ ನಾವೋಬ್ಬರೇ ಇದ್ದಾಗ ಕೇಳುವುದೇ ಬೇಡ. ಮನೆಯಲ್ಲಿ ಯಾರು ಇಲ್ಲ ಎಂಬ ಕಾರಣಕ್ಕೆ ಏರು ಧ್ವನಿಯಲ್ಲಿ ಮನಸ್ಸಿಗೆ ಬಂದ ಹಾಡುಗಳನ್ನು ಹಾಡುತ್ತೇವೆ. ನಮ್ಮಲ್ಲಿ ಹೆಚ್ಚಿನವರು ಇದೇ ರೀತಿ ಇರುತ್ತಾರೆ.
ಇದೇ ರೀತಿಯಲ್ಲಿ ಮನೆಯಲ್ಲಿ ಒಬ್ಬನೇ ಇದ್ದಾಗ ನಾನು ಯಾವ ರೀತಿಯಲ್ಲಿ ಹಾಡುತ್ತೇನೆ ಎಂಬ ತಮಾಷೆಯ ವಿಡಿಯೋವನ್ನು ಮಂಗಳೂರು ಮೂಲದ ಯೂಟ್ಯೂಬರ್ ಶರಣ್ ಚಿಲಿಂಬಿ ಅವರು ತನ್ನ ಇನ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಪಾತ್ರೆ ತೊಳೆಯುತ್ತಾ, ಟಾಯ್ಲೆಟ್ ಕ್ಲೀನ್ ಮಾಡುತ್ತಾ ಇನ್ಟಾಗ್ರಾಮ್ ರೀಲ್ಸ್ನಲ್ಲಿ ಬರುವ ಟ್ರೆಂಡಿಂಗ್ ಸಾಂಗ್‌ಗಳನ್ನು ಹಾಡುತ್ತಾ, ಪಾತ್ರೆ ತೊಳೆಯುವ ಹಾಗೂ ಟಾಯ್ಲೆಟ್ ಕ್ಲೀನ್ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ. ಈಗಿನ ಯುವಜನತೆಯಲ್ಲಿ ಹೆಚ್ಚಿನವರು ಇದೇ ರೀತಿ ಇರುತ್ತಾರೆ ಅಲ್ವಾ. ಇನ್ಟಾಗ್ರಾಮ್‌ನಲ್ಲಿ ಬರುವ ಟ್ರೆಂಡಿಂಗ್ ಹಾಡುಗಳನ್ನೇ ಅರ್ಧಂಬರ್ಧ ಹಾಡುತ್ತಾ, ಸ್ನೇಹಿತರ ತಲೆ ತಿನ್ನುತ್ತಾ ಇರುತ್ತಾರೆ.

ಇದನ್ನೂ ಓದಿ: Viral Video : ‘ಹುಷಾರ್​ ಟೀಚರ್​, ನನ್ನ ಅಪ್ಪ ಪೊಲೀಸು!’ ಪುಟ್ಟನ ಸಿಹಿಗದರಿಕೆ

ಈ ವಿಡಿಯೋಗೆ ಅನೇಕರು ತಮಾಷೆಯ ಕಮೆಂಟ್‌ಗಳನ್ನು ಬರೆದಿದ್ದಾರೆ. ಒಬ್ಬ ಬಳಕೆದಾರು ‘ಶೀಘ್ರದಲ್ಲಿ ಮದುವೆಯಾಗಿ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಸಾಂಗ್ ತುಂಬಾ ಚೆನ್ನಾಗಿ ಹಾಡುತ್ತೀರಾ ಎಂದು ಕಮೆಂಟ್ ಮಾಡಿದರೆ ಮತ್ತೊಬ್ಬ ಬಳಕೆದಾರರು ನೀವು ಹಾಡು ಹಾಡುತ್ತಾ ಸರಿಯಾಗಿ ಕ್ಲೀನ್ ಮಾಡಿಲ್ಲ ಎಂದು ಕಾಲೆಳೆದಿದ್ದಾರೆ. ಇನ್ನೊಬ್ಬರು ನಾನು ಕೂಡಾ ಇದೇ ರೀತಿ ಎಂದು ನಗುತ್ತಾ ಕಮೆಂಟ್ ಮಾಡಿದ್ದಾರೆ

Published On - 3:08 pm, Wed, 22 February 23