Gurugram: ಕೋವಿಡ್​ನಿಂದ ಹೆದರಿದ ಮಹಿಳೆ ಸತತ 3 ವರ್ಷಗಳ ಕಾಲ ಮನೆ ಒಳಗೆ ಲಾಕ್!

ಕೋವಿಡ್ ಸೋಂಕಿನಿಂದ ತಪ್ಪಿಸಿಕೊಳ್ಳಲು ಗುರಗಾಂವ್ ನಲ್ಲಿರುವ ತಮ್ಮ ಮನೆಗೆ ಮೂರು ವರ್ಷಗಳ ಕಾಲ ತನ್ನನ್ನು ಮತ್ತು ತನ್ನ ಮಗನನ್ನು ಈ ಮಹಿಳೆ ಬಂದಿಸಿಕೊಂಡಿದ್ದರು. ಸ್ವತಃ ಗಂಡನನ್ನು ಮನೆ ಒಳಗೆ ಬರಲು ಬಿಟ್ಟಿರಲಿಲ್ಲ. ಕೊನೆಗೆ ನಿನ್ನೆ (ಫೆಬ್ರವರಿ 21) ಆರೋಗ್ಯ, ಪೊಲೀಸ್ ಮತ್ತು ಮಕ್ಕಳ ಸೇವಾ ಇಲಾಖೆಯ ಅಧಿಕಾರಿಗಳ ತಂಡ ಈ ತಾಯಿ ಮಗುವನ್ನು ಗೃಹ ಬಂಧನದಿಂದ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ

Gurugram: ಕೋವಿಡ್​ನಿಂದ ಹೆದರಿದ ಮಹಿಳೆ ಸತತ 3 ವರ್ಷಗಳ ಕಾಲ ಮನೆ ಒಳಗೆ ಲಾಕ್!
ಸಾಂದರ್ಭಿಕ ಚಿತ್ರ
Follow us
ನಯನಾ ಎಸ್​ಪಿ
|

Updated on:Feb 22, 2023 | 1:12 PM

ನವದೆಹಲಿ: 2020 ರಿಂದ ಇಡೀ ಜಗತ್ತೇ ಕೋವಿಡ್ ವೈರಸ್ ಕಾಟಕ್ಕೆ ನಲುಗಿ ಹೋಗಿದೆ. ಸುಮಾರು ಎರಡು ವರ್ಷಗಳ ಕಾಲ ಜನರು ಲಾಕ್​ಡೌನ್ ಅನ್ನು ಕೂಡ ಅನುಭವಿಸಿದ್ದರು, ಈಗ ಜನರು ಮೊದಲಿನಂತೆ ಮನೆಯಿಂದ ಹೊರ ಬರಲು ಧೈರ್ಯ ಮಾಡಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ಕೋವಿಡ್​ಗೆ ಹೆದರಿ 2020 ರಿಂದ ಮನೆಯ ಹೊರಗೆ ಬಂದಿಲ್ಲ. ಗುರುಗ್ರಾಮ್​ನ ಮಾರುತಿ ಕುಂಜ್ ನಗರ ನಿವಾಸಿ ಮುನ್ಮುನ್ ಮಾಝಿ 2020 ರಿಂದ ತಾನು ಹೊರಬಾರದೆ ತನ್ನ ಮಗನನ್ನು ಮನೆ ಒಳಗೆ ಕೂಡಿ ಹಾಕಿದ್ದಾಳೆ. ಕೊನೆಗೆ ನಿನ್ನೆ (ಫೆಬ್ರವರಿ 21) ಆರೋಗ್ಯ, ಪೊಲೀಸ್ ಮತ್ತು ಮಕ್ಕಳ ಸೇವಾ ಇಲಾಖೆಯ ಅಧಿಕಾರಿಗಳ ತಂಡ ಈ ತಾಯಿ ಮಗುವನ್ನು ಗೃಹ ಬಂಧನದಿಂದ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

ಕೋವಿಡ್ ಸೋಂಕಿನಿಂದ ತಪ್ಪಿಸಿಕೊಳ್ಳಲು ಗುರುಗ್ರಾಮ್​ನಲ್ಲಿರುವ ತಮ್ಮ ಮನೆಗೆ ಮೂರು ವರ್ಷಗಳ ಕಾಲ ತನ್ನನ್ನು ಮತ್ತು ತನ್ನ ಮಗನನ್ನು ಈ ಮಹಿಳೆ ಬಂಧಿಸಿಕೊಂಡಿದ್ದರು. ಸ್ವತಃ ಗಂಡನನ್ನು ಮನೆ ಒಳಗೆ ಬರಲು ಬಿಟ್ಟಿರಲಿಲ್ಲ. ಗಂಡ ಸುಜನ್ ಮಾಝಿ ಪ್ರೈವೇಟ್ ಕಂಪನಿ ಒಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 2020 ರಲ್ಲಿ ಲಾಕ್​ಡೌನ್ ನಿಯಮಗಳು ಸಡಿಲಿಸಿದ ನಂತರ ಸುಜನ್ ಕೆಲಸಕ್ಕೆಂದು ತೆರಳಿ ಸಂಜೆ ಮನೆಗೆ ಮರಳುವಷ್ಟರಲ್ಲಿ ಹೆಂಡತಿ ಮನೆ ಬಾಗಿಲನ್ನು ತೆಗಿಯದೇ ರಾದ್ದಂತ ಮಾಡಿದ್ದಳು ಎಂದು ಟೈಮ್ಸ್ ಆ ಇಂಡಿಯಾ ವರದಿ ಮಾಡಿದೆ.

ಸುಜನ್ ಮಾಝಿ ಅವರು ತಮ್ಮ ಪತ್ನಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬಾಡಿಗೆಗೆ ಮನೆಯನ್ನು ತೆಗೆದುಕೊಂಡರು. ಕಳೆದ ಮೂರು ವರ್ಷಗಳಿಂದ ಅವರು ಮುನ್ಮುನ್ ಮತ್ತು ಅವರ ಪುತ್ರನೊಂದಿಗೆ ವೀಡಿಯೊ ಕರೆ ಮೂಲಕ ಸಂಪರ್ಕದಲ್ಲಿದ್ದರು. ಅವರು ಬಾಡಿಗೆ, ವಿದ್ಯುತ್ ಬಿಲ್‌ಗಳು ಮತ್ತು ಮಗನ ಶಾಲಾ ಶುಲ್ಕವನ್ನು ಸಮಯದುದ್ದಕ್ಕೂ ಪಾವತಿಸಿದ್ದರು. ಪ್ರತಿ ನಿತ್ಯ ದಿನಸಿಗಳನ್ನು ಖರೀದಿಸಿ ಮನೆಯ ಬಾಗಿಲಿನ ಹೊರಗೆ ಇತ್ತು ಬರುತ್ತಿದ್ದರು.

ಮನೆಯೊಳಗೆ ಬೀಗ ಹಾಕಿಕೊಂಡಿದ್ದ ಮುನ್ಮುನ್ ಹೊರಗಿನ ಪ್ರಪಂಚದ ಸಂಪರ್ಕವನ್ನು ಕಡಿತಗೊಳಿಸಲು ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದರು. ಅಡುಗೆಗೆ ಗ್ಯಾಸ್ ಉಪಯೋಗಿಸಿದರೆ ಅದನ್ನು ತುಂಬಬೇಕಾಗುತ್ತದೆ ಎಂದು ಇಂಡಕ್ಷನ್‌ನಲ್ಲಿ ಅಡುಗೆ ಮಾಡುತ್ತಿದ್ದರು. ಆನ್‌ಲೈನ್ ತರಗತಿಗಳಿಗೆ ಹಾಜರಾಗಬೇಕಾಗಿರುವುದರಿಂದ ಅವರು ತಮ್ಮ ಮಗನಿಗೆ ಸ್ಮಾರ್ಟ್‌ಫೋನ್ ಬಳಸಲು ಅವಕಾಶ ನೀಡಿದ್ದರು.

ಇದನ್ನೂ ಓದಿ: ಮೇಘಾಲಯದ ಈ ಪುಟ್ಟ ಹಳ್ಳಿಯಲ್ಲಿ ಮಗುವಿಗೆ ನಮ್ಮಂತೆಯೇ ಹೆಸರಿಡ್ತಾರೆ, ಜತೆಗೆ ಹಾಡೂ ಕೂಡ, ಇಲ್ಲಿಯ ವೈಶಿಷ್ಟ್ಯ ತಿಳಿಯಿರಿ

ಈ ಮೂರೂ ವರ್ಷವೂ ಮುನ್ಮುನ್ ಬಂಧನದಿಂದ ಹೊರಬರುವಂತೆ ಸುಜನ್ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಮುನ್ಮುನ್ ಪ್ರತಿ ಬಾರಿಯೂ ಗಂಡನ ಮನವಿಯನ್ನು ತಿರಸ್ಕರಿಸಿದ್ದರು. ಮಕ್ಕಳಿಗೆ COVID ಲಸಿಕೆ ಇದ್ದರೆ ತಮ್ಮ 10 ವರ್ಷದ ಮಗನೊಂದಿಗೆ ಮನೆ ಇಂದ ಹೊರಗೆ ಬರಲು ಒಪ್ಪುತ್ತೇನೆ ಎಂದಿದ್ದರು. ಆದರೆ ಇಲ್ಲಿಯವರೆಗೂ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಲಸಿಕೆ ಬಂದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Wed, 22 February 23

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ