Viral Video : ‘ಹುಷಾರ್ ಟೀಚರ್, ನನ್ನ ಅಪ್ಪ ಪೊಲೀಸು!’ ಪುಟ್ಟನ ಸಿಹಿಗದರಿಕೆ
Teacher-Student : ‘ನನ್ನ ಅಪ್ಪ ಪೊಲೀಸು. ನೋಡಿ ಮತ್ತೆ ಅವರಿಗೆ ಹೇಳ್ತೀನಿ’ ಎನ್ನುತ್ತದೆ ಈ ಮಗು. ‘ಪೊಲೀಸ್ ಇದ್ದರೆ ಏನು ಮಾಡುತ್ತಾರೆ?’ ಎನ್ನುತ್ತಾರೆ ಟೀಚರ್, ಆಮೇಲೆ ಮಗು ಏನು ಹೇಳುತ್ತದೆ ನೋಡಿ.
Viral Video : ಕೆಲ ದಿನಗಳ ಹಿಂದೆಯಷ್ಟೇ ಟೀಚರ್-ಸ್ಟೂಡೆಂಟ್ ವಿಡಿಯೋ ನೋಡಿದಿರಿ. ಸಿಕ್ಕಾಪಟ್ಟೆ ಪುಂಡಾಟವಾಡುವ ಪುಟ್ಟಣ್ಣನಿಗೆ ಟೀಚರ್ ಕ್ಲಾಸ್ ತೆಗೆದುಕೊಂಡಿದ್ದರು. ಇನ್ನೆಂದೂ ನೀನು ನನ್ನ ಜೊತೆ ಮಾತಾಡಬೇಡ ಎಂದು ಜೋರು ಮಾಡುತ್ತಿದ್ದರು. ಪುಟ್ಟಣ್ಣ ಕಂಗಾಲಾಗಿ ಇನ್ನೆಂದೂ ಗಲಾಟೆ ಮಾಡುವುದಿಲ್ಲ ಎಂದು ಅಳುತ್ತ ಅವರಿಗೆ ಮುದ್ದು ಮಾಡುತ್ತ, ಮುತ್ತು ಕೊಡುತ್ತ ಒಲಿಸಿಕೊಳ್ಳಲು ನೋಡುತ್ತಿದ್ದ. ಅಂಥದೇ ಒಬ್ಬ ಪುಟ್ಟಣ್ಣನಿಲ್ಲಿ ಸಿಕ್ಕಿದ್ದಾನೆ. ಯಾವ ಕಾರಣಕ್ಕೋ ಟೀಚರ್ ಗದರಿದ್ದಾರೆ. ಇವನಿಗೆ ದುಃಖ ಉಕ್ಕಿಬಂದಿದೆ. ಆಗ ಏನು ಹೇಳಿದ್ದಾನೆ ನೋಡಿ.
मेरा पापा पुलिस में है ? pic.twitter.com/8najIWSeIE
ಇದನ್ನೂ ಓದಿ— ज़िन्दगी गुलज़ार है ! (@Gulzar_sahab) September 20, 2022
‘ನಮ್ಮ ಅಪ್ಪ ಗುಂಡು ಹಾರಿಸಿಬಿಡುತ್ತಾರೆ!’ ಈ ಮಾತು ಕೇಳಿದಾಗ ಯಾರಿಗೂ ಮನಸ್ಸು ವಿಷಣ್ಣಗಾಗುತ್ತದೆಯಲ್ಲವೆ? ಆರು 6 ಲಕ್ಷಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 2.5 ಸಾವಿರಕ್ಕಿಂತಲೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. 392 ಜನರು ರೀಟ್ವೀಟ್ ಮಾಡಿದ್ದಾರೆ. ನೋಡಿದ ತಕ್ಷಣ ಎಂಥ ಮುದ್ದಾದ ವಿಡಿಯೋ ಇದು ಎಂದೆನ್ನಿಸುವುದು ನಿಜ. ಮುಗ್ಧತೆಯಿಂದಲೇ ಈ ಮಗು ಹೀಗೆ ಸಂಭಾಷಿಸಿದ್ದರೂ ವಿಷಯ ಮಾತ್ರ ಗಂಭೀರ.
ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಈ ವಯಸ್ಸಿನಲ್ಲಿ ಅನುಕರಿಸುವುದೊಂದೇ ಅವುಗಳಿಗೆ ಗೊತ್ತಿರುತ್ತದೆ, ಆಲೋಚಿಸಿ ಮಾತನಾಡುವುದು ಎಲ್ಲ ಮಕ್ಕಳಿಂದಲೂ ಸಾಧ್ಯವಾಗುವುದಿಲ್ಲ. ಅಲ್ಲದೆ, ಹೀಗೆ ಸಂಭಾಷಣೆ ನಡೆಸುತ್ತಿರುವಾಗ ಕ್ಲಾಸಿನಲ್ಲಿಯ ಇತರ ಮಕ್ಕಳು ಮಗುವನ್ನು ನೋಡಿ ನಕ್ಕಾಗ ಆ ಮಗುವಿಗೆ ಅವಮಾನವಾದಂತಾಗುವುದಿಲ್ಲವೆ? ಇಂಥ ಚಟುವಟಿಕೆಗಳು ಮಗುವಿನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಇನ್ನು ಪ್ರತಿಯೊಂದು ಮಗುವಿಗೂ ಅದರದೇ ಆದ ಖಾಸಗೀತನವಿದೆ. ಟೀಚರ್ಗಳು ‘ಇಂಥ ಸನ್ನಿವೇಶ’ ಗಳನ್ನು ವಿಡಿಯೋ ಮಾಡುವುದು ಎಷ್ಟು ಸರಿ, ಮತ್ತದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:56 pm, Fri, 23 September 22